ಕಣಜಗಳ ಅದ್ಭುತ ಲೋಕ

ಕಣಜಗಳ ಅದ್ಭುತ ಲೋಕ

  

Microleptes chiani © ಡಾ. ಪ್ರಿಯದರ್ಶನನ್ ಧರ್ಮರಾಜನ್, ATREE

ಇತ್ತೀಚೆಗೆ ಒಂದು ಬೆಳಿಗ್ಗೆ ಮನೆಯಾಕೆ “ಮಾವಿನ ಗಿಡದಾಗ ಹೂ ಬಿಟ್ಟೈತಿ ನೋಡೀರೇನು ” ಎಂದು ಕೇಳಿದಳು. “ನಿನ್ನೇನ ನೋಡೀನಿ” ಅಂದು ಮತ್ತೊಮ್ಮೆ ಕಣ್ತುಂಬಿಕೊಳ್ಳಲು ಮನೆಯ ಮಾಳಿಗೆಯ ಮೇಲೆ ಹೋದೆ. ಮಾಳಿಗೆಯಲ್ಲಿ ಸೋಲಾರ್ ನೀರಿನ ಟ್ಯಾಂಕ್ ನ್ನು ಅಳವಡಿಸಲಾಗಿದೆ. ಆಕಸ್ಮಾತ್ ಆಗಿ ಟ್ಯಾಂಕಿನ ಕೆಳಭಾಗದಲ್ಲಿ ಏನೋ ಅಂಟಿಕೊಂಡಿರುವುದು ಕಾಣಿಸಿತು. ಕುತೂಹಲದಿಂದ ಕೆಳಗೆ ಬಗ್ಗಿ ನೋಡಿದರೆ ಅದೊಂದು ಕಣಜಗಳ ಗೂಡು. ಅರೆರೆರೆರೆರೆ… ಎಂದುಕೊಂಡು ಸೂಕ್ಷ್ಮವಾಗಿ ನೋಡಿದರೆ ಅದೊಂದು ಸುಂದರವಾದ ಗೂಡು.

ಏಟ್ರಿ (ASHOKA Trust for Research in Ecology and the Environment) ಸಂಸ್ಥೆಯ ಸಂಶೋಧಕರಾದ ರಂಜಿತ್ ಎ‌.ಪಿ. ಮತ್ತು ಡಾ. ಪ್ರಿಯದರ್ಶನನ್ ಧರ್ಮರಾಜನ್ ಈ ಕಣಜ ಪ್ರಭೇದವನ್ನು ಕಂಡು ಹಿಡಿದಿದ್ದಾರೆ.

    Microleptes depressus
© ಡಾ. ಪ್ರಿಯದರ್ಶನನ್ ಧರ್ಮರಾಜನ್, ATREE

ದೇಶದ 4 ಕಡೆ ಹೊಸ ಪ್ರಭೇದದ ಪರಾವಲಂಬಿ ಕಣಜ:

ಇವರು ಬಿಳಿಗಿರಿರಂಗನ ಬೆಟ್ಟದ ಜೊತೆಗೆ ತಮಿಳುನಾಡಿನ ಕಲಕಾಡ್ ಮುಂಡಂತುರೈ ಹುಲಿ ಸಂರಕ್ಷಿತ ಪ್ರದೇಶ, ಅರುಣಾಚಲ ಪ್ರದೇಶದ ಸಿಯಾಂಗ್ ಕಣಿವೆ ಮತ್ತು ಉತ್ತರಖಂಡದ ತೆಹ್ರಿಯಲ್ಲಿ ಹೊಸ ಪ್ರಭೇದದ ಪರಾವಲಂಬಿ ಕಣಜ ಪತ್ತೆಯಾಗಿದೆ ಎಂದು ಸಂಶೋಧನಾ ವರದಿ ಪ್ರಕಟಿಸಿದ್ದಾರೆ‌‌.

ಬಿಳಿಗಿರಿರಂಗನ ಬೆಟ್ಟದಲ್ಲಿ ಪತ್ತೆಯಾದ ಕಣಜಕ್ಕೆ ಕಾಳಿಂಗ ಸರ್ಪದ ಸಂಶೋಧನೆ ಮತ್ತು ಸಂರಕ್ಷಣೆಗೆ ಸೇವೆ ಸಲ್ಲಿಸುತ್ತಿರುವ ಡಾ. ಪಿ. ಗೌರಿಶಂಕರ್ ರವರ ಹೆಸರಿಡಲಾಗಿದೆ. ಕೆಲ ತಿಂಗಳ ಹಿಂದೆಯಷ್ಟೇ ಇದೇ ಸಂಶೋಧನಾ ತಂಡ ಹೊಸ ಪ್ರಭೇದದ ಹಲ್ಲಿ ಹಾಗೂ ಕಣಜವನ್ನು ಪತ್ತೆ ಮಾಡಿದ್ದರು.

ಅರುಣಾಚಲದ ಸಿಯಾಂಗ್ ಕಣಿವೆಯಲ್ಲಿ ದೊರೆತ ಹೊಸ ಕಣಜಕ್ಕೆ ಪರಿಸರ ಸಂರಕ್ಷಣಾ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿರುವ ಸಂದೇಶ್ ಕಡೂರ್ ಅವರ ಹೆಸರನ್ನು ಗೌರವಾರ್ಥವಾಗಿ ಇಡಲಾಗಿದೆ.   

    Microleptes sandeshkaduri
© ಡಾ. ಪ್ರಿಯದರ್ಶನನ್ ಧರ್ಮರಾಜನ್, ATREE

ಸಂಶೋಧಕರು ಹೇಳುವುದೇನು?

ಸಂಶೋಧಕ ಡಾ. ಪ್ರಿಯದರ್ಶನನ್ ಧರ್ಮರಾಜನ್ ಪ್ರತಿಕ್ರಿಯಿಸಿ, ”ಈ ಸಂಶೋಧನೆಗಳು ಭಾರತೀಯ ಉಪಖಂಡದ ಶ್ರೀಮಂತ ಜೀವವೈವಿಧ್ಯತೆ, ಪರಿಸರದ ಪಾತ್ರಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಜೀವವೈವಿಧ್ಯದ ಸಂರಕ್ಷಣೆಯ ಪ್ರಾಮುಖ್ಯತೆಯನ್ನು ಹೇಳುತ್ತವೆ.” ಎಂದು ತಿಳಿಸಿದ್ದಾರೆ.

   Microleptes sandeshkaduri
© ಡಾ. ಪ್ರಿಯದರ್ಶನನ್ ಧರ್ಮರಾಜನ್, ATREE

ಕಳೆದ ವರ್ಷ ಬಿಳಿಗಿರಿರಂಗನ ಬೆಟ್ಟದಲ್ಲಿ ಸೋಲಿಗ ಎಕಾರಿನ್ಯಾಟಾ ಎಂಬ ಹೊಸ ಕಣಜ ಪತ್ತೆಯಾಗಿತ್ತು. ಈ ವರ್ಷ ಮತ್ತೊಂದು ಹೊಸ ಪ್ರಭೇದದ ಪರಾವಲಂಬಿ ಕಣಜ ಪತ್ತೆಯಾಗಿದ್ದು, ಈ ಬೆಟ್ಟದಲ್ಲಿನ ಕೀಟಗಳ ವೈವಿಧ್ಯತೆಗೆ ಪುಷ್ಟಿ ನೀಡುತ್ತದೆ ಮತ್ತು ಜೀವವೈವಿಧ್ಯ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ. ಈ ಪರಾವಲಂಬಿ ಕಣಜಗಳು ಕೀಟಗಳ ಸಂಖ್ಯೆಯನ್ನು ನಿಯಂತ್ರಿಸಿ ಪರಿಸರ ಸಮತೋಲನದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಹೊಸ ಪ್ರಭೇದದ ಕಣಜಗಳ ಆವಿಷ್ಕಾರ ಪ್ರಪಂಚದಲ್ಲಿ ಭಾರತದ ಜೀವವೈವಿಧ್ಯತೆಯ ಶ್ರೀಮಂತಿಕೆಯನ್ನು ತೋರಿಸುತ್ತದೆ.

Microleptes gaourishankari
© ಡಾ. ಪ್ರಿಯದರ್ಶನನ್ ಧರ್ಮರಾಜನ್, ATREE

ಲೇಖನ: ಮಂಜುನಾಥ ಎಸ್. ನಾಯಕ
          ಗದಗ ಜಿಲ್ಲೆ

Spread the love

Leave a Reply

Your email address will not be published. Required fields are marked *

error: Content is protected.