ನೀವೂ ಕಾನನಕ್ಕೆ ಬರೆಯಬಹುದು

ನೀವೂ ಕಾನನಕ್ಕೆ ಬರೆಯಬಹುದು

 ಜೀವಿ ಎಂದಾಕ್ಷಣ ನೆನಪಿಗೆ ಬರುವುದು ಭೂಮಿ. ಸೌರಮಂಡಲದಲ್ಲಿ ಇದೊಂದು ಗ್ರಹದಲ್ಲಿ ಮಾತ್ರ ಜೀವಿಗಳು ಕಾಣಸಿಗುವುದು. ಹಾಗಾದರೆ ಭೂಮಿಯ ಮೇಲೆ ಒಟ್ಟು ಎಷ್ಟು ಜೀವಿಗಳು ಇರಬಹುದು ಎಂಬ ಪ್ರಶ್ನೆಯ ಬೆನ್ನತ್ತಿ ವಿಜ್ಞಾನಿಗಳು ಶತಮಾನದಿಂದಲೂ ಅಧ್ಯಯನ ನಡೆಸುತ್ತಲೇ ಇದ್ದು, ಇರುವೆ ಗಾತ್ರದ ಜೀವಿಯಿಂದ ಹಿಡಿದು ಡೈನೋಸಾರ್ ಗಳಂತಹ ದೈತ್ಯಜೀವಿಗಳ ಜೀವ ವಿಕಾಸದ ಬಗೆಗಿನ ಕೌತುಕಗಳ ಬಗ್ಗೆ ಬೆರಗಾಗುತ್ತಾ, ತಿಳಿಯುತ್ತ, ತಿಳಿಸುತ್ತಾ ಬಂದಿದ್ದಾರೆ‌. ಅಗೆದಷ್ಟು ಸಿಗುವಂತೆ ಜೀವಿಗಳ ಬಗೆಗಿನ ಸತ್ಯಗಳು ದಿನೇ ದಿನೇ ಹೊರಬೀಳುತ್ತಿದ್ದು, ಸಸ್ಯಗಳು, ಪ್ರಾಣಿಗಳು, ಸೂಕ್ಷ್ಮಜೀವಿಗಳು, ಬೇರೆ ಬೇರೆ ಆವಾಸಗಳಲ್ಲಿ ಬೇರೆ ಬೇರೆ ಪ್ರಭೇದಗಳ ರೂಪದಲ್ಲಿ ಕಾಣಸಿಗುವುದನ್ನು ಜೀವವೈವಿಧ್ಯ ಎನ್ನುತ್ತಾರೆ.

ಹೀಗೆ ನಾನಾ ರೀತಿಯ ಜೀವವೈವಿಧ್ಯತೆಗಳು ಊಹೆಗೂ ನಿಲುಕದಷ್ಟು ಹೇರಳವಾಗಿವೆ. ಉಳಿವಿಗಾಗಿ ಹೋರಾಟ ನಡೆಸಿ, ಅಸ್ತಿತ್ವ ಹೊಂದಿ, ಬದುಕಿಗಾಗಿ ಪರಸ್ಪರಾವಲಂಬನೆ ಹೊಂದಿರುವ ಇಡೀ ಜೀವ ವ್ಯವಸ್ಥೆ, ಒಂದಲ್ಲ ಒಂದು ರೀತಿ ಪ್ರತಿಯೊಂದು ಜೀವಿಗೂ ಕೊಂಡಿಯಂತೆ ಬೆಸೆದುಕೊಂಡಿದೆ. ಈ ಕೊಂಡಿಯಲ್ಲಿ ಒಂದೇ ಒಂದು ಚಿಕ್ಕಜೀವಿ ಅಳಿದರೂ ಇತರ ಎಲ್ಲ ಜೀವಿಗಳು ನಾಶವಾಗುತ್ತವೆ. ಇಂತಹ ಜೀವವೈವಿಧ್ಯವು ಬೇರೆ ಬೇರೆ ಕಾರಣಗಳಿಂದ ಕಡಿಮೆಯಾಗುತ್ತಿದ್ದು, ಜೀವವೈವಿಧ್ಯದ ಬಗೆಗಿನ ಮಹತ್ವ ಮತ್ತು ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಲು ಮೇ 22ರಂದು ವಿಶ್ವ ಜೀವವೈವಿಧ್ಯ ದಿನವನ್ನಾಗಿ ಆಚರಿಸಲಾಗುತ್ತದೆ.

ಈ ರೀತಿಯ ಪರಿಸರದ ಬಗೆಗಿನ ಮಾಹಿತಿಯನ್ನು ಒದಗಿಸಲು ಇರುವ ಕಾನನ ಇ-ಮಾಸಿಕಕ್ಕೆ ಮುಂದಿನ ತಿಂಗಳ ಸಂಚಿಕೆಗೆ ಲೇಖನಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಪರಿಸರಕ್ಕೆ ಸಂಬಂಧಿಸಿದ ಕಥೆ, ಕವನ, ಛಾಯಾಚಿತ್ರ, ಚಿತ್ರಕಲೆ, ಪ್ರವಾಸ ಕಥನಗಳನ್ನು ಕಾನನ ಮಾಸಿಕದ ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು.

ಕಾನನ ಪತ್ರಿಕೆಯ ಇ-ಮೇಲ್ ವಿಳಾಸ: [email protected]
ಅಂಚೆ ವಿಳಾಸ:

ಅಡವಿ ಫೀಲ್ಡ್ ಸ್ಟೇಷನ್,
ಒಂಟೆಮಾರನ ದೊಡ್ಡಿ ಗ್ರಾಮ ,
ರಾಗಿಹಳ್ಳಿ ಅಂಚೆ,
ಜಿಗಣಿ ಹೋಬಳಿ,
ಆನೇಕಲ್ ತಾಲ್ಲೂಕು ,
ಬೆಂಗಳೂರು ನಗರ ಜಿಲ್ಲೆ
ಪಿನ್ ಕೋಡ್: 560083. ಗೆ ಕಳಿಸಿಕೊಡಬಹುದು.

ವಿಶೇಷ ಮನವಿ: ಕಾನನ ಪತ್ರಿಕೆಯು ಯುವ ಜನರಲ್ಲಿ, ಮಕ್ಕಳಲ್ಲಿ ಪರಿಸರದ ಪಸರನ್ನು ಹರಡಲು ಮತ್ತು ಪ್ರಕೃತಿ ಬಗ್ಗೆ ಜಾಗೃತಿ ಮೂಡಿಸಲು ಇರುವ ಮುಕ್ತ ವೇದಿಕೆಯಾಗಿದೆ.  ಈ ಪತ್ರಿಕೆಯ ವಿನ್ಯಾಸ, ವಿಷಯವನ್ನು ಬದಲಿಸದೆ pdf ಪ್ರತಿಯನ್ನು ಯಥಾಸ್ಥಿತಿಯಲ್ಲಿ ಯಾರು ಬೇಕಾದರೂ ಪ್ರಿಂಟ್ ಮಾಡಿಸಿ ಓದಲು ಬಳಸಬಹುದು ಅಥವಾ ಪರಿಸರದ ಬಗ್ಗೆ ಅರಿವು ಮೂಡಿಸಲು ಶಾಲೆಗಳಿಗೆ ನೀಡಬಹುದು.

Spread the love

Leave a Reply

Your email address will not be published. Required fields are marked *

error: Content is protected.