ನೀವೂ ಕಾನನಕ್ಕೆ ಬರೆಯಬಹುದು

ನೀಲಿಗ್ರಹ ಎಂದೇ ಗುರುತಿಸಿಕೊಂಡಿರುವ ನಮ್ಮ ಭೂಮಿ, ಸೌರಮಂಡಲದಲ್ಲಿ ಜೀವಿಗಳನ್ನು ಹೊಂದಿರುವ ಏಕೈಕ ಗ್ರಹ.
“ಬೆಳಗಾಗಿ ನಾನೆದ್ದು ಯಾರ್ ಯಾರ ನೆನೆಯಲಿ, ಎಳ್ಳು ಜೀರಿಗೆ ಬೆಳೆಯೋಳ, ಭೂಮ್ತಾಯ ಎದ್ದೊಂದು ಘಳಿಗೆ ನೆನೆದೇನು…”
ಎಂಬ ಜಾನಪದ ಗೀತೆಯ ಸ್ವಾರಸ್ಯ ನಮ್ಮೆಲ್ಲರಿಗೂ ಚಿರಪರಿಚಿತ. ಸುಮಾರು 4.5 ಬಿಲಿಯನ್ ವರ್ಷಗಳ ಇತಿಹಾಸವಿರುವ ನಮ್ಮ ಭೂಮಿಯ ಮೇಲೆ ಜೀವವಿಕಾಸದ ವಿಸ್ಮಯದ ಬಗ್ಗೆ ವಿಜ್ಞಾನಿಗಳಿಗೆ ಕುತೂಹಲ ಹೆಚ್ಚುತ್ತಲೇ ಇದೆ. ಸಂಶೋಧನೆಗಳು ತಿಳಿಸುವಂತೆ ಜೀವಿಗಳು ಜೀವಿಸಲು ಯೋಗ್ಯವಾದ, ಅತ್ಯವಶ್ಯಕವಾದ ಗಾಳಿ, ನೀರು, ಬೆಳಕು ಮತ್ತು ಮಣ್ಣು ಎಲ್ಲವೂ ಸಿಗುವುದು ನಮ್ಮ ಭೂಮಿಯಲ್ಲಿ ಮಾತ್ರ. ಕೋಟ್ಯಾಂತರ ಜೀವರಾಶಿಗಳಿಗೆ ನೆಲೆಯಾಗಿರುವ ಈ ಭೂಮಿಯಲ್ಲಿ, ಜೀವ ವಿಕಾಸದ ಹಾದಿಯಲ್ಲಿ ನಿಧಾನಗತಿಯಲ್ಲಿ ಪ್ರಗತಿ ಹೊಂದಿದ ಮಾನವ ತೀವ್ರಗತಿಯಲ್ಲಿ, ಈಗ ಮಾಡುತ್ತಿರುವ ಹಾನಿಯಿಂದ ಮುಂದೇನಾಗಬಹುದೆಂಬ ಆತಂಕ ಮೂಡುತ್ತಿದೆ. ಭೂಮಿತಾಯಿಯ ಉದರ ಸೀಳಿದರು ಮುತ್ತುರತ್ನಗಳ ಕೊಳ್ಳೆಹೊಡೆದರು, ಮಾಲಿನ್ಯ ಮಾಡುತ್ತಿದ್ದರೂ ಸಹಿಸಿಕೊಂಡಿದೆ, ಭೂಮಿ. ಆದ್ದರಿಂದ ಸಾಧ್ಯವಾದಷ್ಟು ಪ್ರಕೃತಿ ಸ್ನೇಹಿ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಇರುವುದೊಂದೇ ಭೂಮಿ, ಇದನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳಬೇಕು ಎಂದು ಜಾಗೃತಿ ಮೂಡಿಸಲು ಏಪ್ರಿಲ್ 22 ರಂದು ವಿಶ್ವಭೂಮಿ ದಿನವನ್ನು ಆಚರಿಸಲಾಗುತ್ತದೆ.
ಈ ರೀತಿಯ ಪರಿಸರದ ಬಗೆಗಿನ ಮಾಹಿತಿಯನ್ನು ಒದಗಿಸಲು ಇರುವ ಕಾನನ ಇ-ಮಾಸಿಕಕ್ಕೆ ಮುಂದಿನ ತಿಂಗಳ ಸಂಚಿಕೆಗೆ ಲೇಖನಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಪರಿಸರಕ್ಕೆ ಸಂಬಂಧಿಸಿದ ಕಥೆ, ಕವನ, ಛಾಯಾಚಿತ್ರ, ಚಿತ್ರಕಲೆ, ಪ್ರವಾಸ ಕಥನಗಳನ್ನು ಕಾನನ ಮಾಸಿಕದ ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು.
ಕಾನನ ಪತ್ರಿಕೆಯ ಇ-ಮೇಲ್ ವಿಳಾಸ: [email protected]
ಅಂಚೆ ವಿಳಾಸ:
ಅಡವಿ ಫೀಲ್ಡ್ ಸ್ಟೇಷನ್,
ಒಂಟೆಮಾರನ ದೊಡ್ಡಿ ಗ್ರಾಮ ,
ರಾಗಿಹಳ್ಳಿ ಅಂಚೆ,
ಜಿಗಣಿ ಹೋಬಳಿ,
ಆನೇಕಲ್ ತಾಲ್ಲೂಕು ,
ಬೆಂಗಳೂರು ನಗರ ಜಿಲ್ಲೆ
ಪಿನ್ ಕೋಡ್: 560083. ಗೆ ಕಳಿಸಿಕೊಡಬಹುದು.
ವಿಶೇಷ ಮನವಿ: ಕಾನನ ಪತ್ರಿಕೆಯು ಯುವ ಜನರಲ್ಲಿ, ಮಕ್ಕಳಲ್ಲಿ ಪರಿಸರದ ಪಸರನ್ನು ಹರಡಲು ಮತ್ತು ಪ್ರಕೃತಿ ಬಗ್ಗೆ ಜಾಗೃತಿ ಮೂಡಿಸಲು ಇರುವ ಮುಕ್ತ ವೇದಿಕೆಯಾಗಿದೆ. ಈ ಪತ್ರಿಕೆಯ ವಿನ್ಯಾಸ, ವಿಷಯವನ್ನು ಬದಲಿಸದೆ pdf ಪ್ರತಿಯನ್ನು ಯಥಾಸ್ಥಿತಿಯಲ್ಲಿ ಯಾರು ಬೇಕಾದರೂ ಪ್ರಿಂಟ್ ಮಾಡಿಸಿ ಓದಲು ಬಳಸಬಹುದು ಅಥವಾ ಪರಿಸರದ ಬಗ್ಗೆ ಅರಿವು ಮೂಡಿಸಲು ಶಾಲೆಗಳಿಗೆ ನೀಡಬಹುದು.