ನೀವೂ ಕಾನನಕ್ಕೆ ಬರೆಯಬಹುದು
© ಧನರಾಜ್ ಎಂ.
ಮುಂಜಾನೆ ವೇಳೆಯಲ್ಲಿ ಚಿಲಿಪಿಲಿ ಕಲರವ ಕೇಳುವುದು ಎಷ್ಟು ಇಂಪು. ಹಾರುವ ಹಕ್ಕಿಯನ್ನು ಕಂಡು ನಾನು ಕೂಡ ಗಗನದಾಚೆ ಹಾರಬೇಕು ಎಂದೆನಿಸಿದ ಸಂದರ್ಭವೂ ಉಂಟು. ಭೂಮಿ ಮೇಲೆ ಸುಮಾರು 18000 ಕ್ಕೂ ಹೆಚ್ಚು ಪಕ್ಷಿ ಪ್ರಭೇದಗಳಿವೆ. ಪಕ್ಷಿಗಳು ಪರಾಗಸ್ಪರ್ಶ ಕ್ರಿಯೆಗೆ ಸಹಾಯ ಮಾಡುತ್ತವೆ. ಅವು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹಾರುವಾಗ ಬೀಜಗಳು ಮತ್ತು ಪೋಷಕಾಂಶಗಳನ್ನು ವರ್ಗಾಯಿಸುತ್ತವೆ. ಕೃಷಿ ಉತ್ಪಾದನೆಯಲ್ಲೂ ಇವು ಮಹತ್ವದ ಪಾತ್ರ ವಹಿಸುತ್ತವೆ. ಜಾನುವಾರುಗಳು ಮತ್ತು ಬೆಳೆಗಳ ಮೇಲೆ ಅನಗತ್ಯ ಕೀಟಗಳನ್ನು ತಿಂದು ಬೆಳೆ ಹಾನಿಯಾಗುವುದರಿಂದ ತಡೆಯುತ್ತವೆ. ಕಾನೂನುಬಾಹಿರ ಸಾಕುಪ್ರಾಣಿ ವ್ಯಾಪಾರ, ರೋಗ ಮತ್ತು ವಾಸಮಾಡಲುಬೇಕಾದ ಸ್ಥಳ ಇಲ್ಲದಿರುವುದರಿಂದ ಅನೇಕ ಪಕ್ಷಿ ಪ್ರಭೇದಗಳು ನಶಿಸುತ್ತಿವೆ. ಪಕ್ಷಿಗಳ ಅಗತ್ಯತೆಗಳ ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸಲು ಪ್ರತಿ ಜನವರಿ 5 ರಂದು ರಾಷ್ಟ್ರೀಯ ಪಕ್ಷಿ ದಿನವೆಂದು ಆಚರಿಸಲಾಗುತ್ತದೆ.
ಇದೇ ರೀತಿಯ ಮಾಹಿತಿಗಳನ್ನು ನೀಡಲು ನೀವೂ ಕಾನನಕ್ಕೆ ಬರೆಯಬಹುದು. ಈ ರೀತಿಯ ಪರಿಸರದ ಬಗೆಗಿನ ಮಾಹಿತಿಯನ್ನು ಒದಗಿಸಲು ಇರುವ ಕಾನನ ಇ-ಮಾಸಿಕಕ್ಕೆ ಮುಂದಿನ ತಿಂಗಳ ಸಂಚಿಕೆಗೆ ಲೇಖನಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಪರಿಸರಕ್ಕೆ ಸಂಬಂಧಿಸಿದ ಕಥೆ, ಕವನ, ಛಾಯಾಚಿತ್ರ, ಚಿತ್ರಕಲೆ, ಪ್ರವಾಸ ಕಥನಗಳನ್ನು ಕಾನನ ಮಾಸಿಕದ ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು.
ಕಾನನ ಪತ್ರಿಕೆಯ ಇ-ಮೇಲ್ ವಿಳಾಸ: [email protected]
ಅಂಚೆ ವಿಳಾಸ:
ಅಡವಿ ಫೀಲ್ಡ್ ಸ್ಟೇಷನ್,
ಒಂಟೆಮಾರನ ದೊಡ್ಡಿ ಗ್ರಾಮ ,
ರಾಗಿಹಳ್ಳಿ ಅಂಚೆ,
ಜಿಗಣಿ ಹೋಬಳಿ,
ಆನೇಕಲ್ ತಾಲ್ಲೂಕು ,
ಬೆಂಗಳೂರು ನಗರ ಜಿಲ್ಲೆ
ಪಿನ್ ಕೋಡ್: 560083. ಗೆ ಕಳಿಸಿಕೊಡಬಹುದು.
ವಿಶೇಷ ಮನವಿ: ಕಾನನ ಪತ್ರಿಕೆಯು ಯುವ ಜನರಲ್ಲಿ, ಮಕ್ಕಳಲ್ಲಿ ಪರಿಸರದ ಪಸರನ್ನು ಹರಡಲು ಮತ್ತು ಪ್ರಕೃತಿ ಬಗ್ಗೆ ಜಾಗೃತಿ ಮೂಡಿಸಲು ಇರುವ ಮುಕ್ತ ವೇದಿಕೆಯಾಗಿದೆ. ಈ ಪತ್ರಿಕೆಯ ವಿನ್ಯಾಸ, ವಿಷಯವನ್ನು ಬದಲಿಸದೆ pdf ಪ್ರತಿಯನ್ನು ಯಥಾಸ್ಥಿತಿಯಲ್ಲಿ ಯಾರು ಬೇಕಾದರೂ ಪ್ರಿಂಟ್ ಮಾಡಿಸಿ ಓದಲು ಬಳಸಬಹುದು ಅಥವಾ ಪರಿಸರದ ಬಗ್ಗೆ ಅರಿವು ಮೂಡಿಸಲು ಶಾಲೆಗಳಿಗೆ ನೀಡಬಹುದು.