ನೀವೂ ಕಾನನಕ್ಕೆ ಬರೆಯಬಹುದು
©Designed by Freepik
ಹಿಮ ಚಿರತೆಗಳು ಸಾಮಾನ್ಯವಾಗಿ 3000-4500 ಮೀಟರ್ ಎತ್ತರದ ಪರ್ವತ ಪ್ರದೇಶಗಳಲ್ಲಿ ವಾಸಿಸುತ್ತವೆ. ಅವುಗಳ ದೇಹವು ಶೀತ ಪರಿಸರಕ್ಕೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಇತರ ದೊಡ್ಡ ಬೆಕ್ಕುಗಳಂತೆ ಹಿಮ ಚಿರತೆಗಳಿಗೆ ಘರ್ಜಿಸಲು ಬರುವುದಿಲ್ಲ. ಅವುಗಳು ಚಿರತೆಗಳಿಗಿಂತ ಹುಲಿಗಳ ಲಕ್ಷಣ ಹೆಚ್ಚು ಹೊಂದಿರುತ್ತವೆ. ಹಿಮ ಚಿರತೆಗಳು ಒಂದೇ ರಾತ್ರಿಯಲ್ಲಿ 25 ಮೈಲುಗಳಷ್ಟು ಪ್ರಯಾಣಿಸಬಲ್ಲವು. ಕಾಡಿನಲ್ಲಿ, ಹಿಮ ಚಿರತೆಗಳ ಜೀವಿತಾವಧಿ ಸುಮಾರು ಹತ್ತು ವರ್ಷಗಳು, ಒಳ್ಳೆಯ ಸುದ್ದಿ ಎಂದರೆ ಹಿಮ ಚಿರತೆಗಳು ಅಳಿವಿನಂಚಿನಲ್ಲಿಲ್ಲ. ಅವುಗಳನ್ನು ಈಗ IUCN ನಿಂದ “ದುರ್ಬಲ” ಎಂದು ವರ್ಗೀಕರಿಸಲಾಗಿದೆ. ದುರ್ಬಲವಾಗಿರುವ ಪ್ರಭೇದಗಳು ಮೂಲಭೂತವಾಗಿ ಅಳಿವಿನಂಚಿನಲ್ಲಿರುವ ಪಟ್ಟಿಯ ಕಡೆಗೆ ಚಲಿಸುತ್ತವೆ. ಹಿಮ ಚಿರತೆಗಳ ಬಗ್ಗೆ ಜಾಗೃತಿ ಮೂಡಿಸಲು ಅಕ್ಟೋಬರ್ 23 ರಂದು “ವಿಶ್ವ ಹಿಮ ಚಿರತೆ ದಿನ” ವೆಂದು ಆಚರಿಸಲಾಗುತ್ತದೆ.
ಇದೇ ರೀತಿಯ ಮಾಹಿತಿಗಳನ್ನು ನೀಡಲು ನೀವೂ ಕಾನನಕ್ಕೆ ಬರೆಯಬಹುದು. ಈ ರೀತಿಯ ಪರಿಸರದ ಬಗೆಗಿನ ಮಾಹಿತಿಯನ್ನು ಒದಗಿಸಲು ಇರುವ ಕಾನನ ಇ-ಮಾಸಿಕಕ್ಕೆ ಮುಂದಿನ ತಿಂಗಳ ಸಂಚಿಕೆಗೆ ಲೇಖನಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಪರಿಸರಕ್ಕೆ ಸಂಬಂಧಿಸಿದ ಕಥೆ, ಕವನ, ಛಾಯಾಚಿತ್ರ, ಚಿತ್ರಕಲೆ, ಪ್ರವಾಸ ಕಥನಗಳನ್ನು ಕಾನನ ಮಾಸಿಕದ ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು.
ಕಾನನ ಪತ್ರಿಕೆಯ ಇ-ಮೇಲ್ ವಿಳಾಸ: [email protected]
ಅಂಚೆ ವಿಳಾಸ:
ಅಡವಿ ಫೀಲ್ಡ್ ಸ್ಟೇಷನ್,
ಒಂಟೆಮಾರನ ದೊಡ್ಡಿ ಗ್ರಾಮ ,
ರಾಗಿಹಳ್ಳಿ ಅಂಚೆ,
ಜಿಗಣಿ ಹೋಬಳಿ,
ಆನೇಕಲ್ ತಾಲ್ಲೂಕು ,
ಬೆಂಗಳೂರು ನಗರ ಜಿಲ್ಲೆ
ಪಿನ್ ಕೋಡ್: 560083. ಗೆ ಕಳಿಸಿಕೊಡಬಹುದು.
ವಿಶೇಷ ಮನವಿ: ಕಾನನ ಪತ್ರಿಕೆಯು ಯುವ ಜನರಲ್ಲಿ, ಮಕ್ಕಳಲ್ಲಿ ಪರಿಸರದ ಪಸರನ್ನು ಹರಡಲು ಮತ್ತು ಪ್ರಕೃತಿ ಬಗ್ಗೆ ಜಾಗೃತಿ ಮೂಡಿಸಲು ಇರುವ ಮುಕ್ತ ವೇದಿಕೆಯಾಗಿದೆ. ಈ ಪತ್ರಿಕೆಯ ವಿನ್ಯಾಸ, ವಿಷಯವನ್ನು ಬದಲಿಸದೆ pdf ಪ್ರತಿಯನ್ನು ಯಥಾಸ್ಥಿತಿಯಲ್ಲಿ ಯಾರು ಬೇಕಾದರೂ ಪ್ರಿಂಟ್ ಮಾಡಿಸಿ ಓದಲು ಬಳಸಬಹುದು ಅಥವಾ ಪರಿಸರದ ಬಗ್ಗೆ ಅರಿವು ಮೂಡಿಸಲು ಶಾಲೆಗಳಿಗೆ ನೀಡಬಹುದು.