ನೀವೂ ಕಾನನಕ್ಕೆ ಬರೆಯಬಹುದು

ನೀವೂ ಕಾನನಕ್ಕೆ ಬರೆಯಬಹುದು

© Phoenix

ತುಂಬ ಸೂಕ್ಷ್ಮವಾಗಿ ಗಮನಿಸಿದರೆ ಚಿಂಪಾಂಜಿಗಳಲ್ಲಿ ಮನುಷ್ಯರನ್ನು ಹೋಲುವ ಲಕ್ಷಣಗಳು ಬಹಳ ಇವೆ. ಶತ್ರುಗಳನ್ನು ಬೆದರಿಸಲು ಚಿಂಪಾಂಜಿಗಳು ಕಲ್ಲುಗಳನ್ನು ಎಸೆಯುತ್ತವೆ; ಕೋಲು ಹಿಡಿದು ಅಟ್ಟಿಸುತ್ತವೆ. ಗಟ್ಟಿ ಕಾಯಿಗಳೊಳಗಿನ ಬೀಜ ಬಿಡಿಸಲು ಚಿಂಪಾಂಜಿಗಳು ಕಲ್ಲಿನಿಂದ ಕುಟ್ಟುತ್ತವೆ. ಹುತ್ತದೊಳಗಿನ ಗೆದ್ದಲುಗಳಿಗೆ ಉದ್ದದ ಕಡ್ಡಿಯ ಗಾಳ ಹಾಕಿ ಹಿಡಿದು ತಿನ್ನುತ್ತವೆ.  ಚಿಂಪಾಂಜಿಗಳು ವಾಸ್ತವವಾಗಿ ಮಿಶ್ರಾಹಾರಿಗಳು. ಆದರೂ ಅವುಗಳು ಮುಖ್ಯವಾಗಿ ಸೊಪ್ಪುಗಳು, ಹೂವುಗಳು, ಕಾಯಿಗಳು, ಹಣ್ಣುಗಳು, ಬೀಜಗಳು ಮುಂತಾದವುಗಳನ್ನು ತಿನ್ನುತ್ತವೆ. ಚಿಂಪಾಂಜಿಗಳು ಅಂದಾಜು ಮುನ್ನೂರು ಬಗೆಗಳ ಸಸ್ಯಾಹಾರಗಳನ್ನು ಸೇವಿಸುತ್ತವೆ. ಚಿಂಪಾಂಜಿಗಳು ಗುಂಪುಗಳಲ್ಲಿ ವಾಸಿಸುತ್ತವೆ. ಪ್ರತಿ ಗುಂಪಿನಲ್ಲಿ 10 ರಿಂದ 15 ಚಿಂಪಾಂಜಿಗಳಿರುತ್ತವೆ. ಅವುಗಳ ನೈಸರ್ಗಿಕ ನೆಲೆಗಳಲ್ಲಿ ಹಿಂದೆ ಭಾರೀ ಸಂಖ್ಯೆಯಲ್ಲಿ ನೆಮ್ಮದಿಯಿಂದ ಜೀವಿಸುತ್ತಿದ್ದವು. ಆದರೆ ಈಗ ಅವುಗಳ ಸಂಖ್ಯೆ ಕಳೆದ ಕೆಲವು ದಶಕಗಳಿಂದ ಕ್ಷಿಪ್ರವಾಗಿ ಕ್ಷೀಣಿಸುತ್ತಿದೆ. ತಜ್ಞರ ಗಣತಿಗಳ ಪ್ರಕಾರ ಚಿಂಪಾಂಜಿಗಳ ಈಗಿನ ಒಟ್ಟು ಸಂಖ್ಯೆ ಮೂರು ಲಕ್ಷದಷ್ಟಿದೆ ಅಷ್ಟೆ. ಹಾಗಾಗಿ ಅವು ಅಳಿವಿನ ಅಪಾಯದಲ್ಲಿರುವ ಪ್ರಾಣಿಗಳ ಪಟ್ಟಿಯಲ್ಲಿವೆ. ಚಿಂಪಾಂಜಿಗಳ ಆವಾಸಸ್ಥಾನಗಳಲ್ಲಿ ನಡೆಯುತ್ತಿರುವ ಅರಣ್ಯ ನಾಶ, ವನ್ಯ ಮಾಂಸಕ್ಕಾಗಿ ವ್ಯಾಪಕವಾಗಿರುವ ಕಳ್ಳ ಬೇಟೆ ಮುಂತಾದ ಮಾನವ ಚಟುವಟಿಕೆಗಳು ಚಿಂಪಾಂಜಿಗಳನ್ನು ವಿನಾಶದ ಅಂಚಿಗೆ ತಂದಿವೆ. ಚಿಂಪಾಂಜಿಗಳ ಬಗ್ಗೆ ಜಾಗೃತಿ ಮೂಡಿಸಲು ಜುಲೈ 14ರಂದು “ವಿಶ್ವ ಚಿಂಪಾಂಜಿ ದಿನ” ಎಂದು ಆಚರಿಸಲಾಗುತ್ತದೆ.

ಇನ್ನೂ ವಾಹನಗಳು ಹೊರಸೂಸುವ ವಿಷಕಾರಿ ಅನಿಲಗಳು ಮತ್ತು ಕಾಡ್ಗಿಚ್ಚಿನಂತಹ ಪರಿಣಾಮ ಮುಂತಾದ ಕಾರಣಗಳಿಂದಾಗಿ ಜಾಗತಿಕ ತಾಪಮಾನ ಹೆಚ್ಚಾಗುತ್ತಿರುವುದನ್ನು ಕೆಲವು ಸಂಶೋಧನೆಗಳು ಹೇಳುತ್ತವೆ. ನಾವು ಇದರ ಪರಿಣಾಮವನ್ನು ಮುಂದೆ ಅನುಭವಿಸಬೇಕಾಗುತ್ತದೆ. ಇದನ್ನು ಅರಿತು ಇನ್ನು ಮುಂದಾದರೂ ಪರಿಸರ ಸ್ನೇಹಿ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಒಳಿತು.

 ಇದೇ ರೀತಿಯ ಮಾಹಿತಿಗಳನ್ನು ನೀಡಲು ನೀವೂ ಕಾನನಕ್ಕೆ ಬರೆಯಬಹುದು.  ಈ ರೀತಿಯ ಪರಿಸರದ ಬಗೆಗಿನ ಮಾಹಿತಿಯನ್ನು ಒದಗಿಸಲು ಇರುವ ಕಾನನ ಇ-ಮಾಸಿಕಕ್ಕೆ ಮುಂದಿನ ತಿಂಗಳ ಸಂಚಿಕೆಗೆ ಲೇಖನಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಪರಿಸರಕ್ಕೆ ಸಂಬಂಧಿಸಿದ ಕಥೆ, ಕವನ, ಛಾಯಾಚಿತ್ರ, ಚಿತ್ರಕಲೆ, ಪ್ರವಾಸ ಕಥನಗಳನ್ನು ಕಾನನ ಮಾಸಿಕದ ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು.

ಕಾನನ ಪತ್ರಿಕೆಯ ಇ-ಮೇಲ್ ವಿಳಾಸ: [email protected]
ಅಂಚೆ ವಿಳಾಸ:

ಅಡವಿ ಫೀಲ್ಡ್ ಸ್ಟೇಷನ್,
ಒಂಟೆಮಾರನ ದೊಡ್ಡಿ ಗ್ರಾಮ ,
ರಾಗಿಹಳ್ಳಿ ಅಂಚೆ,
ಜಿಗಣಿ ಹೋಬಳಿ,
ಆನೇಕಲ್ ತಾಲ್ಲೂಕು ,
ಬೆಂಗಳೂರು ನಗರ ಜಿಲ್ಲೆ
ಪಿನ್ ಕೋಡ್: 560083. ಗೆ ಕಳಿಸಿಕೊಡಬಹುದು.

ವಿಶೇಷ ಮನವಿ: ಕಾನನ ಪತ್ರಿಕೆಯು ಯುವ ಜನರಲ್ಲಿ, ಮಕ್ಕಳಲ್ಲಿ ಪರಿಸರದ ಪಸರನ್ನು ಹರಡಲು ಮತ್ತು ಪ್ರಕೃತಿ ಬಗ್ಗೆ ಜಾಗೃತಿ ಮೂಡಿಸಲು ಇರುವ ಮುಕ್ತ ವೇದಿಕೆಯಾಗಿದೆ.  ಈ ಪತ್ರಿಕೆಯ ವಿನ್ಯಾಸ, ವಿಷಯವನ್ನು ಬದಲಿಸದೆ pdf ಪ್ರತಿಯನ್ನು ಯಥಾಸ್ಥಿತಿಯಲ್ಲಿ ಯಾರು ಬೇಕಾದರೂ ಪ್ರಿಂಟ್ ಮಾಡಿಸಿ ಓದಲು ಬಳಸಬಹುದು ಅಥವಾ ಪರಿಸರದ ಬಗ್ಗೆ ಅರಿವು ಮೂಡಿಸಲು ಶಾಲೆಗಳಿಗೆ ನೀಡಬಹುದು.

Spread the love
error: Content is protected.