ನೀವೂ ಕಾನನಕ್ಕೆ ಬರೆಯಬಹುದು

ನೀವೂ ಕಾನನಕ್ಕೆ ಬರೆಯಬಹುದು

  © Public domain

 ಹಿಮಕರಡಿ ಎಂದಾಕ್ಷಣ ನಮ್ಮ ತಲೆಯಲ್ಲಿ ಮೂಡುವ ಚಿತ್ರಣ, ಹಿಮಕರಡಿ ಮತ್ತು ಅದರ ಮರಿಯು ಕರಗಿ ನೀರಾಗಿ ಉಳಿದಿರುವ ಸ್ವಲ್ಪವೇ ಮಂಜಿನ ಮೇಲೆ ನೆಲೆಯನ್ನು ಹುಡುಕುತ್ತಾ ನಿಂತಿರುವುದು. ಹೌದು, ಹಿಮ ಕರಡಿಗಳಿಗೆ ಆವಾಸ ಕಡಿಮೆಯಾಗುತ್ತಿದೆ, ಅದರ ಸಂತತಿ ಕ್ಷೀಣಿಸುತ್ತಿದೆ, ಅದರ ಉಳಿವು ಈಗ ನಮ್ಮ ಪ್ರತಿಯೊಂದು ಚಟುವಟಿಕೆಯ ಮೇಲೂ ಅವಲಂಬಿತವಾಗಿದೆ. ಇದು ವಿಶ್ವದಲ್ಲೇ ಅತಿ ದೊಡ್ಡ ಗಾತ್ರದ ನೆಲವಾಸಿ ಮಾಂಸಾಹಾರಿ ಪ್ರಾಣಿ. ಹಿಮಕರಡಿಗಳು ಆರ್ಕ್ಟಿಕ್‌ ವೃತ್ತ ಮತ್ತು ಅಕ್ಕಪಕ್ಕದ ನೆಲೆಗಳಲ್ಲಿ ವಾಸಿಸುತ್ತವೆ. ಇಂತಹ ದೂರದ ವಾಸಸ್ಥಾನದಲ್ಲಿ ಯಾವುದೇ ಮಾನವ ವಾಸಸ್ಥಳವಿರದ ಕಾರಣ, ಈಗಲೂ ಇರುವ ಬೇರೇ ಯಾವುದೇ ಮಾಂಸಾಹಾರಿ ಪ್ರಾಣಿಗೆ ಹೋಲಿಸಿದರೆ, ಹಿಮಕರಡಿಯು ತನ್ನ ಮೂಲ ವ್ಯಾಪ್ತಿಯ ಹೆಚ್ಚು ಭಾಗವನ್ನು ಉಳಿಸಿಕೊಂಡಿದೆ. ಸರಿಯಾದ ರೀತಿಯಲ್ಲಿ ಅಧ್ಯಯನ ಮಾಡಿಲ್ಲದ ಕಾರಣ, ವಿಶ್ವಾದ್ಯಂತ ಎಷ್ಟು ಹಿಮಕರಡಿಗಳಿವೆಯೆಂದು ಅಂದಾಜು ಮಾಡಲಾಗದು. ಆದರೆ, ಜೀವವಿಜ್ಞಾನಿಗಳ ಅಂದಾಜಿನ ಪ್ರಕಾರ ವಿಶ್ವಾದ್ಯಂತ 20,000ದಿಂದ 25,000 ಹಿಮಕರಡಿಗಳಿವೆ. ಈ ಕರಡಿಗಳಲ್ಲಿನ ಸಂಖ್ಯೆ ಜಾಗತಿಕ ತಾಪಮಾನ ಏರಿಕೆಯಿಂದ ಕುಸಿಯುತ್ತಿದೆ ಆದ ಕಾರಣ ಇದರ ಬಗ್ಗೆ ಎಲ್ಲರಿಗೂ ಅರಿವು ಮೂಡಿಸಬೇಕು ಎಂಬ ಕಾರಣದಿಂದ ಫೆಬ್ರವರಿ 27 ನ್ನು “ಅಂತರಾಷ್ಟ್ರೀಯ ಹಿಮಕರಡಿ ದಿನ” ಎಂದು ಆಚರಿಸಲಾಗುತ್ತದೆ. ಈ ಕಾರ್ಯಕ್ರಮಕ್ಕೆ ಹಲವು ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಕೈ ಜೋಡಿಸುವ ಮುಖೇನ ಇವುಗಳನ್ನು ರಕ್ಷಿಸಿಕೊಳ್ಳುವಲ್ಲಿ ಕ್ರಮವಹಿಸುತ್ತಿವೆ.

 ಇದೇ ರೀತಿಯ ಮಾಹಿತಿಗಳನ್ನು ನೀಡಲು ನೀವೂ ಕಾನನಕ್ಕೆ ಬರೆಯಬಹುದು.  ಈ ರೀತಿಯ ಪರಿಸರದ ಬಗೆಗಿನ ಮಾಹಿತಿಯನ್ನು ಒದಗಿಸಲು ಇರುವ ಕಾನನ ಇ-ಮಾಸಿಕಕ್ಕೆ ಮುಂದಿನ ತಿಂಗಳ ಸಂಚಿಕೆಗೆ ಲೇಖನಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಪರಿಸರಕ್ಕೆ ಸಂಬಂಧಿಸಿದ ಕಥೆ, ಕವನ, ಛಾಯಾಚಿತ್ರ, ಚಿತ್ರಕಲೆ, ಪ್ರವಾಸ ಕಥನಗಳನ್ನು ಕಾನನ ಮಾಸಿಕದ ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು.

ಕಾನನ ಪತ್ರಿಕೆಯ ಇ-ಮೇಲ್ ವಿಳಾಸ: [email protected]
ಅಂಚೆ ವಿಳಾಸ:

ಅಡವಿ ಫೀಲ್ಡ್ ಸ್ಟೇಷನ್,
ಒಂಟೆಮಾರನ ದೊಡ್ಡಿ ಗ್ರಾಮ ,
ರಾಗಿಹಳ್ಳಿ ಅಂಚೆ,
ಜಿಗಣಿ ಹೋಬಳಿ,
ಆನೇಕಲ್ ತಾಲ್ಲೂಕು ,
ಬೆಂಗಳೂರು ನಗರ ಜಿಲ್ಲೆ
ಪಿನ್ ಕೋಡ್: 560083. ಗೆ ಕಳಿಸಿಕೊಡಬಹುದು.

ವಿಶೇಷ ಮನವಿ: ಕಾನನ ಪತ್ರಿಕೆಯು ಯುವ ಜನರಲ್ಲಿ, ಮಕ್ಕಳಲ್ಲಿ ಪರಿಸರದ ಪಸರನ್ನು ಹರಡಲು ಮತ್ತು ಪ್ರಕೃತಿ ಬಗ್ಗೆ ಜಾಗೃತಿ ಮೂಡಿಸಲು ಇರುವ ಮುಕ್ತ ವೇದಿಕೆಯಾಗಿದೆ.  ಈ ಪತ್ರಿಕೆಯ ವಿನ್ಯಾಸ, ವಿಷಯವನ್ನು ಬದಲಿಸದೆ pdf ಪ್ರತಿಯನ್ನು ಯಥಾಸ್ಥಿತಿಯಲ್ಲಿ ಯಾರು ಬೇಕಾದರೂ ಪ್ರಿಂಟ್ ಮಾಡಿಸಿ ಓದಲು ಬಳಸಬಹುದು ಅಥವಾ ಪರಿಸರದ ಬಗ್ಗೆ ಅರಿವು ಮೂಡಿಸಲು ಶಾಲೆಗಳಿಗೆ ನೀಡಬಹುದು.

Spread the love
error: Content is protected.