ನೀವೂ ಕಾನನಕ್ಕೆ ಬರೆಯಬಹುದು

ನೀವೂ ಕಾನನಕ್ಕೆ ಬರೆಯಬಹುದು

  © CC BY-SA 4.0

 ನಮ್ಮ ದೊಡ್ಡ ನೀಲಿ ಸಾಗರಗಳು ಕೆಲವು ಆಕರ್ಷಕ ಜೀವಿಗಳಿಗೆ ನೆಲೆಯಾಗಿವೆ. ಅವುಗಳಲ್ಲಿ ತಿಮಿಂಗಿಲ ಕೂಡ ಒಂದು. ತಿಮಿಂಗಿಲಗಳನ್ನು ಸಸ್ತನಿಗಳೆಂದು ಪರಿಗಣಿಸಲಾಗುತ್ತದೆ, ಏಕೆಂದರೆ ಅವು ಇತರ ಸಸ್ತನಿಗಳ ಜೀವಂತ ಕಾರ್ಯಗಳನ್ನು ನಿರ್ವಹಿಸಬಲ್ಲವು. ಅವು ಬಿಸಿ ರಕ್ತ ಪ್ರಾಣಿಗಳು, ಗಾಳಿಯನ್ನು ಉಸಿರಾಡುತ್ತವೆ, ತಮ್ಮ ಸಂತತಿಗೆ ಹಾಲು ಉತ್ಪಾದಿಸುತ್ತವೆ ಹಾಗೂ ಮರಿಗಳಿಗೆ ಜನ್ಮ ನೀಡುತ್ತವೆ. ಅವು ಸುಮಾರು 40 ಮಿಲಿಯನ್ ವರ್ಷಗಳ ಹಿಂದೆ ಅನ್ಗ್ಯುಲೇಟ್ ಪೂರ್ವಜರಿಂದ ವಿಕಸನಗೊಂಡಿವೆ. ನೀಲಿ ತಿಮಿಂಗಿಲವು 98 ಅಡಿ ಉದ್ದದವರೆಗೆ ಬೆಳೆಯುತ್ತದೆ ಮತ್ತು ಭೂಮಿಯ ಮೇಲಿನ ಅತಿ ದೊಡ್ಡ ತಿಮಿಂಗಿಲವಾಗಿದೆ. ಶತಮಾನಗಳಿಂದ ಅವುಗಳನ್ನು ವಿವಿಧ ಕಾರಣಗಳಿಗಾಗಿ ಬೇಟೆಯಾಡಲಾಗುತ್ತಿದೆ. ಈಗ ಅವು ಮತ್ತೊಂದು ಸವಾಲನ್ನು ಎದುರಿಸುತ್ತಿವೆ. ಅವುಗಳ ಆವಾಸಸ್ಥಾನದ ನಷ್ಟವಾಗುತ್ತಿದೆ. ಈ ಪರಿಣಾಮದಿಂದಾಗಿ, 1980 ರಲ್ಲಿ “ವಿಶ್ವ ತಿಮಿಂಗಿಲ ದಿನ” ವನ್ನು ಪ್ರಾರಂಭಿಸಲಾಯಿತು. ಫೆಬ್ರವರಿ ಮೂರನೇ ಭಾನುವಾರದಂದು ವಿಶ್ವ ತಿಮಿಂಗಿಲ ದಿನವೆಂದು ಆಚರಿಸಲಾಗುತ್ತದೆ. ನಾವೆಲ್ಲರೂ ತಿಮಿಂಗಿಲಗಳ ಪ್ರಾಮುಖ್ಯತೆಯನ್ನು ಅರಿತುಕೊಳ್ಳಬೇಕು ಮತ್ತು ಅವುಗಳ ನೈಸರ್ಗಿಕ ಆವಾಸಸ್ಥಾನವನ್ನು ಸಂರಕ್ಷಿಸಲು ಕ್ರಮವನ್ನು ತೆಗೆದುಕೊಳ್ಳಬೇಕು..

 ಈ ರೀತಿಯ ಪರಿಸರದ ಬಗೆಗಿನ ಮಾಹಿತಿಯನ್ನು ಒದಗಿಸಲು ಇರುವ ಕಾನನ ಇ-ಮಾಸಿಕಕ್ಕೆ ಮುಂದಿನ ತಿಂಗಳ ಪ್ರತಿಗೆ ಲೇಖನಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಪರಿಸರಕ್ಕೆ ಸಂಬಂಧಿಸಿದ ಕಥೆ, ಕವನ, ಛಾಯಾಚಿತ್ರ, ಚಿತ್ರಕಲೆ, ಪ್ರವಾಸ ಕಥನಗಳನ್ನು ಕಾನನ ಮಾಸಿಕದ ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು.

ಕಾನನ ಪತ್ರಿಕೆಯ ಇ-ಮೇಲ್ ವಿಳಾಸ: [email protected]
ಅಂಚೆ ವಿಳಾಸ:

ಅಡವಿ ಫೀಲ್ಡ್ ಸ್ಟೇಷನ್,
ಒಂಟೆಮಾರನ ದೊಡ್ಡಿ ಗ್ರಾಮ ,
ರಾಗಿಹಳ್ಳಿ ಅಂಚೆ,
ಜಿಗಣಿ ಹೋಬಳಿ,
ಆನೇಕಲ್ ತಾಲ್ಲೂಕು ,
ಬೆಂಗಳೂರು ನಗರ ಜಿಲ್ಲೆ
ಪಿನ್ ಕೋಡ್ :560083. ಗೆ ಕಳಿಸಿಕೊಡಬಹುದು.

Spread the love
error: Content is protected.