ನೀವೂ ಕಾನನಕ್ಕೆ ಬರೆಯಬಹುದು

      

2020 ರ ಮೊದಲು ನಿಸರ್ಗವು ತನ್ನ ಅಸಮತೋಲನವನ್ನು ಭೂಕಂಪ, ಕಾಡ್ಗಿಚ್ಚು, ಪ್ರವಾಹ, ಭೂಕುಸಿತಗಳ ಮೂಲಕ ತೋರ್ಪಡಿಸುತ್ತಿತ್ತು. 2020 ರಿಂದೀಚೆಗೆ ಪ್ರಕೃತಿಯ ಏಕ ಕೋಶ ವೈರಸ್ ಕೂಡ ಮಾನವ ಸಂಕುಲವನ್ನು ಅಳಿಸಲು ಸಮರ್ಥವಾಗಿದೆ ಎಂದು ಎಲ್ಲರಿಗೂ ಮನವರಿಕೆ ಮಾಡಿತು. ವೈರಸ್‌ನ ಹೊಸ ತಳಿಗಳು ಹೆಚ್ಚು ಸಾವಿನ ಪ್ರಮಾಣವನ್ನು ಉಂಟುಮಾಡುತ್ತದೆ ಎಂಬುವುದು ನಮಗೆ ಕಾಣದ ಸತ್ಯವಾಗಿ ಉಳಿದಿಲ್ಲ. ಜೊತೆ ಜೊತೆಯಲ್ಲಿ ಭಾರತದಲ್ಲಿ ಪ್ರವಾಹ ಸಂಭವಿಸಿತು. ಇದು ದೊಡ್ಡ ನಷ್ಟವನ್ನು ಉಂಟುಮಾಡಿತು. ಎಲ್ಲಾ ಸರೋವರಗಳು ಮತ್ತು ಕೊಳಗಳನ್ನು ಮಾನವ ವಾಸಸ್ಥಳಕ್ಕಾಗಿ ಬಳಸಿದ್ದರಿಂದ ನೀರು ಹೋಗಲೂ ಜಾಗವಿಲ್ಲದೇ ರಸ್ತೆಗಳೆಲ್ಲ ನೀರುಮಯ ಆದವು. ಇವೆಲ್ಲಕ್ಕೂ ನೇರವಾಗಿ ಅಥವಾ ಪರೋಕ್ಷವಾಗಿ ಮಾನವರು ನೈಸರ್ಗಿಕ ಅಸಮತೋಲನಕ್ಕೆ ಕಾರಣರಾಗಿದ್ದಾರೆ. 2022 ರ ಈ ಹೊಸ ವರ್ಷದಲ್ಲಿ ಪ್ರಕೃತಿ ಹಾನಿಯನ್ನು ಕಡಿಮೆ ಮಾಡಲು ಮತ್ತು ಸಮತೋಲಿತ ಪರಿಸರ ವ್ಯವಸ್ಥೆಗೆ ಕೊಡುಗೆ ನೀಡಲು ನಿರ್ಧರಿಸೋಣ.

ಈ ರೀತಿಯ ಪರಿಸರದ ಬಗೆಗಿನ ಮಾಹಿತಿಯನ್ನು ಒದಗಿಸಲು ಇರುವ ಕಾನನ ಇ-ಮಾಸಿಕಕ್ಕೆ ಮುಂದಿನ ತಿಂಗಳ ಪ್ರತಿಗೆ ಲೇಖನಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಪರಿಸರಕ್ಕೆ ಸಂಬಂಧಿಸಿದ ಕಥೆ, ಕವನ, ಛಾಯಾಚಿತ್ರ, ಚಿತ್ರಕಲೆ, ಪ್ರವಾಸ ಕಥನಗಳನ್ನು ಕಾನನ ಮಾಸಿಕದ ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು.

ಕಾನನ ಪತ್ರಿಕೆಯ ಇ-ಮೇಲ್ ವಿಳಾಸ: [email protected]
ಅಂಚೆ ವಿಳಾಸ:
Study House,
ಕಾಳೇಶ್ವರಿ ಗ್ರಾಮ,
ಆನೇಕಲ್ ತಾಲ್ಲೂಕು,
ಬೆಂಗಳೂರು ನಗರ ಜಿಲ್ಲೆ,
ಪಿನ್ ಕೋಡ್ :560083. ಗೆ ಕಳಿಸಿಕೊಡಬಹುದು.

Spread the love
error: Content is protected.