ನೀವೂ ಕಾನನಕ್ಕೆ ಬರೆಯಬಹುದು
ಪ್ರಪಂಚದಾದ್ಯಂತ ಪರ್ವತಗಳ ಬಗ್ಗೆ ಜಾಗೃತಿಯನ್ನು ಮೂಡಿಸಲು ಅಂತರಾಷ್ಟ್ರೀಯ ಪರ್ವತದ ದಿನವನ್ನು ಪ್ರತೀ ವರ್ಷವು ಆಚರಿಸಲಾಗುತ್ತದೆ. ಡಿಸೆಂಬರ್ 2002 ಯುನೈಟೆಡ್ ನೇಶನ್ ಜನರಲ್ ಅಸೆಂಬ್ಲಿ ರೆಸಲ್ಯೂಷನ್ 57/245 ರ ಮೂಲಕ ಡಿಸೆಂಬರ್ 11 ಅಂತರಾಷ್ಟ್ರೀಯ ಪರ್ವತ ದಿನ ಎಂದು ಘೋಷಿಸಲಾಯಿತು. ಪರಿಸರ ವ್ಯವಸ್ಥೆಯಲ್ಲಿ ಪರ್ವತಗಳು ಪ್ರಮುಖ ಪಾತ್ರ ವಹಿಸುತ್ತವೆ. ಸಿಹಿನೀರಿನ ನದಿಗಳು ಪರ್ವತ ಪ್ರದೇಶದಿಂದಲೇ ಹುಟ್ಟಿಕೊಂಡಿವೆ, ಹಾಗೂ ಮಳೆಕಾಡುಗಳಿಂದ ಹಿಡಿದು ಎತ್ತರದ ಮರುಭೂಮಿಗಳ ವರೆಗಿನ ವಿವಿಧ ಹವಾಮಾನಗಳನ್ನು ಪರ್ವತ ಪರಿಸರ ವ್ಯವಸ್ಥೆಯು ಒಳಗೊಂಡಿದೆ. ಆರೋಗ್ಯಕರ ಗಿಡಮೂಲಿಕೆಗಳು, ಔಷಧೀಯ ಸಸ್ಯಗಳು ಪರ್ವತ ಪ್ರದೇಶದಲ್ಲಿ ಕಾಣಸಿಗುತ್ತವೆ. ಪ್ರವಾಸಿಗರಿಗೆ ಇದು ಶಾಂತಿಯುತ ಸ್ಥಳವಾಗಿದೆ.
ಈ ರೀತಿಯ ಪರಿಸರದ ಬಗೆಗಿನ ಮಾಹಿತಿಯನ್ನು ಒದಗಿಸಲು ಇರುವ ಕಾನನ ಇ-ಮಾಸಿಕಕ್ಕೆ ಮುಂದಿನ ತಿಂಗಳ ಪ್ರತಿಗೆ ಲೇಖನಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಪರಿಸರಕ್ಕೆ ಸಂಬಂಧಿಸಿದ ಕಥೆ, ಕವನ, ಛಾಯಾಚಿತ್ರ, ಚಿತ್ರಕಲೆ, ಪ್ರವಾಸ ಕಥನಗಳನ್ನು ಕಾನನ ಮಾಸಿಕದ ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು.
ಕಾನನ ಪತ್ರಿಕೆಯ ಇ-ಮೇಲ್ ವಿಳಾಸ: [email protected]
ಅಂಚೆ ವಿಳಾಸ:
Study House,
ಕಾಳೇಶ್ವರಿ ಗ್ರಾಮ,
ಆನೇಕಲ್ ತಾಲ್ಲೂಕು,
ಬೆಂಗಳೂರು ನಗರ ಜಿಲ್ಲೆ,
ಪಿನ್ ಕೋಡ್ :560083. ಗೆ ಕಳಿಸಿಕೊಡಬಹುದು.