ನೀವೂ ಕಾನನಕ್ಕೆ ಬರೆಯಬಹುದು
ನಾವೆಲ್ಲ ವಿಜ್ಞಾನದಲ್ಲಿ ಓದಿರಬಹುದು ನಮ್ಮ ಭೂಮಿಯು 71% ರಷ್ಟು ಭಾಗ ನೀರು ಮತ್ತು 29% ರಷ್ಟು ಭಾಗ ಭೂಮಿಯಿಂದ ಆವೃತವಾಗಿದೆ ಎಂದು. ಈ ನಮ್ಮ ಜಲಗೋಳದಲ್ಲಿ ಸುಮಾರು 96.4% ರಷ್ಟು ಸಮುದ್ರದ ನೀರು, ಉಳಿದ ನೀರಿನಲ್ಲಿ 1% ರಷ್ಟು ಅಥವಾ ಅದಕ್ಕಿಂತ ಕಡಿಮೆ ಶುದ್ಧ ನೀರು ಮತ್ತು 2-3% ರಷ್ಟು ನೀರು ಹಿಮ ಅಥವಾ ಹಿಮಾನದಿಗಳ ರೂಪದಲ್ಲಿ ಇದೆ. ಭೂಭಾಗವನ್ನು ಖಂಡಗಳಾಗಿ ಹೇಗೆ ಬೇರ್ಪಡಿಸಲಾಗಿದೆಯೋ ಅದೇ ರೀತಿ ಸಾಗರಗಳನ್ನು ಸಹ ಪ್ರಮುಖವಾಗಿ ಆರ್ಕ್ಟಿಕ್, ಅಂಟಾರ್ಕ್ಟಿಕ್, ಹಿಂದೂ ಮಹಾಸಾಗರ, ಅಟ್ಲಾಂಟಿಕ್ ಮತ್ತು ಪೆಸಿಫಿಕ್ ಎಂದು ಐದು ಸಾಗರಗಳಾಗಿ ವಿಂಗಡಿಸಲಾಗಿದೆ. ಪ್ರತೀ ವರ್ಷ ಜೂನ್ 8ರಂದು ಆಚರಿಸುವ ‘ವಿಶ್ವ ಸಾಗರಗಳ ದಿನ’ ವಾಗಿ ಕೂಡಾ ಆಚರಿಸಲಾಗುತ್ತದೆ.
ಮನುಷ್ಯನಿಗೆ ಸಾಗರಗಳು ಬಹಳ ಮುಖ್ಯ, ಪೊಸಿಡೋನಿಯಾದಂತಹ ಸಮುದ್ರ ಸಸ್ಯಗಳು ನಾವು ಉಸಿರಾಡುವ ಆಮ್ಲಜನಕದ 70% ರಷ್ಟನ್ನು ಉತ್ಪಾದಿಸುತ್ತವೆ ಮತ್ತು ಸಮುದ್ರದ ಆಳವಾದ ನೀರು ಸಾಗರ ಜೀವಿಗಳಿಗೆ ನೆಲೆಯಾಗಿದೆ. ಸಾಗರಗಳು ಪ್ರಸ್ತುತ ನಮಗೆ 17% ರಷ್ಟು ಸಮುದ್ರ ಆಹಾರವನ್ನು ಒದಗಿಸುತ್ತವೆ. ಲಕ್ಷಾಂತರ ಜನರಿಗೆ ಉದ್ಯೋಗ ನೀಡಿವೆ, ಸಾವಿರಾರು ಕಿಲೋಮೀಟರ್ ದೂರದವರಿಗೂ ಸರಕು ಸಾಗಣೆ ಮಾಡಲು ನೌಕಾ ಯಾನ ಅಥವಾ ಸಾಗರ ಸಾರಿಗೆಗೆ ಅನುಕೂಲ ಮಾಡಿಕೊಟ್ಟಿವೆ. ಇಷ್ಟೆಲ್ಲ ಅನುಕೂಲಗಳನ್ನು ತಿಳಿದಿದ್ದರೂ ಸಹ ನಾವು ಸಮುದ್ರ ಪರಿಸರ ವ್ಯವಸ್ಥೆಯನ್ನು ನಾಶಪಡಿಸುತ್ತಿದ್ದೇವೆ. ವಿಜ್ಞಾನಿಗಳು ಅಂದಾಜು ಒಂದು ಮಿಲಿಯನ್ ಪ್ರಭೇದದ ಪ್ರಾಣಿಗಳು ಸಾಗರದಲ್ಲಿ ವಾಸಿಸುತ್ತವೆ ಎಂದು ಹೇಳಿದ್ದಾರೆ. ಸಾಗರಗಳಲ್ಲಿ ಇಂದು ನಾವು ಅತಿಯಾದ ಮೀನುಗಾರಿಕೆ, ದೊಡ್ಡ ದೊಡ್ಡ ಶಾರ್ಕ್ ಗಳ ಬೇಟೆ, ಸಾಗರ ಯಾನ (ಪ್ರವಾಸೋದ್ಯಮ), ಜಲಸಾರಿಗೆ, ಸಮುದ್ರದ ಆಳದಲ್ಲಿನ ತೈಲ ಮತ್ತು ಅನಿಲ ಗಣಿಗಾರಿಕೆ, ಹವಾಮಾನ ಬದಲಾವಣೆ, ಪ್ಲಾಸ್ಟಿಕ್ ಹಾಗೂ ರಾಸಾಯನಿಕಗಳನ್ನು ಬಳಸಿ ಮಾಲಿನ್ಯ ಉಂಟುಮಾಡಿ ಸಮುದ್ರ ಜೀವಿಗಳಿಗೆ ಅಪಾಯವನ್ನು ತಂದೊಡ್ಡಿದೆ. ಹೀಗೇ, ಸಾಗರಗಳು ಮನುಷ್ಯನ ಉಳಿವಿಗೆ ಪ್ರಮುಖ ಪಾತ್ರವಹಿಸುತ್ತವೆ. ಸಾಗರ ಪರಿಸರ ವ್ಯವಸ್ಥೆಗೆ ತೊಂದರೆಯಾದರೆ, ಮನುಷ್ಯನೂ ಸಹ ಅಪಾಯಕ್ಕೆ ಸಿಲುಕುತ್ತಾನೆ. ಎಚ್ಚರ…! ಸಾಗರಗಳ ಸಂರಕ್ಷಣೆ, ನಮ್ಮೆಲ್ಲರ ಹೊಣೆ…!
ಈ ರೀತಿಯ ಪರಿಸರದ ಬಗೆಗಿನ ಮಾಹಿತಿಯನ್ನು ಒದಗಿಸಲು ಇರುವ ಕಾನನ ಇ-ಮಾಸಿಕಕ್ಕೆ ಮುಂದಿನ ತಿಂಗಳ ಪ್ರತಿಗೆ ಲೇಖನಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಪರಿಸರಕ್ಕೆ ಸಂಬಂಧಿಸಿದ ಕಥೆ, ಕವನ, ಛಾಯಾಚಿತ್ರ, ಚಿತ್ರಕಲೆ, ಪ್ರವಾಸ ಕಥನಗಳನ್ನು ಕಾನನ ಮಾಸಿಕದ ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು.
ಕಾನನ ಪತ್ರಿಕೆಯ ಇ-ಮೇಲ್ ವಿಳಾಸ: [email protected]
ಅಂಚೆ ವಿಳಾಸ:
Study House,
ಕಾಳೇಶ್ವರಿ ಗ್ರಾಮ,
ಆನೇಕಲ್ ತಾಲ್ಲೂಕು,
ಬೆಂಗಳೂರು ನಗರ ಜಿಲ್ಲೆ,
ಪಿನ್ ಕೋಡ್ :560083. ಗೆ ಕಳಿಸಿಕೊಡಬಹುದು.