ಪ್ರಕೃತಿಯ ಕೊಡುಗೆ

ಭೂಮಿಯ ಮೇಲೆ ಹರಡುತ್ತಿದೆ ಬೆಳ್ಳಕ್ಕಿಗಳ ಬಾನು
ಸೂರ್ಯನು ಮೇಲೇರಿ ಬಂದ ನಿದ್ರೆಯಿಂದ ತಾನು
ದುಂಬಿಗಳು ಹುಡುಕಿತ್ತಿವೆ ಹೂ ಸವಿಯಲು ಜೇನು
ಕವಿ ಕಾಳಿದಾಸ ನೋಡಿದರೆ ಇದನ್ನು ಏನೆಂದಾನು
ಕಾಡಿನಲ್ಲಿ ಎಲೆ ಸರಿಸಿ ದಾರಿಯ ಬಿಟ್ಟಿದೆ
ರೆಂಬೆ ಕೊಂಬೆಗಳ ಮೇಲೆ ಜೇನನು ಕಟ್ಟಿದೆ
ದೈತ್ಯ ಮರಗಳು ಬೆಳೆದಿವೆ ಆಕಾಶ ಮಟ್ಟಿಗೆ
ಇದು ಸ್ವಾತಂತ್ರ್ಯವಾದ ವನ್ಯ ಮೃಗಗಳ ಕೊಟ್ಟಿಗೆ
ಮುಂಜಾನೆ ಮಂಜಿನಲ್ಲಿ ಮಂಜು ಹೂಮಳೆ ಸುರಿಸುತ್ತಿದೆ
ಹಕ್ಕಿಗಳ ಹಾಡು ಇಲ್ಲಿ ಶುಭವ ಕೋರುತ್ತಿದೆ
ಮುಗ್ಧ ಜಿಂಕೆಗಳು ಹಸಿರನ್ನ ಮೇಯುತ್ತಿವೆ
ಹುಲಿಗಳು ತಮ್ಮ ಬೇಟೆಗಾಗಿ ಕಾಯುತ್ತಿವೆ.
ಪ್ರಕೃತಿಯು ನಮಗೆ ಇದು ಕೊಟ್ಟಿರುವ ಕೊಡುಗೆ
ಭೂಮಿತಾಯಿ ತಾನು ಉಟ್ಟಿರುವ ಉಡುಗೆ
ಹೇ ಮಾನವ ನೀನಡೆದರೆ ದುರಾಸೆಯ ಕಡೆಗೆ
ನಿನಗೆ ಸಿಕ್ಕುವುದು ನಿರಶೆಯೇ ಕಡೆಗೆ

– ಡಾ. ಮಧುಸೂಧನ ಹೆಚ್ ಸಿ.
ತುಮಕೂರು ಜಿಲ್ಲೆ

Print Friendly, PDF & Email
Spread the love
error: Content is protected.