ನೀವೂ ಕಾನನಕ್ಕೆ ಬರೆಯಬಹುದು

      

ಮರಗಳಿಲ್ಲದ ಮರಳುಗಾಡಿನಂತೆ, ಕೂದಲಿಲ್ಲದ ಬೋಳು ತಲೆ, ಉದ್ದನೆಯ ಪುಕ್ಕರಹಿತ ಕತ್ತು, ಚಿಕ್ಕ ಬಾಲ, ಕತ್ತಿನ ಸುತ್ತ ಬಿಳಿಯ ಗರಿಗಳು, ಕಂದು-ಕಪ್ಪು ಮಿಶ್ರಿತ ಬಣ್ಣದ ಶರೀರ, ಮಾಂಸವನ್ನು ಕತ್ತರಿಸುವಷ್ಟು ಬಲಿಷ್ಟವಾದ ಕೊಕ್ಕು. ವಿಶಾಲವಾದ ರೆಕ್ಕೆ, ಎಂತವರ ಎದೆಯಲ್ಲು ಭಯ ಹುಟ್ಟಿಸುವ ಪಕ್ಷಿ. ಯಾವಾಗಲು ಸ್ವಚ್ಚಂದ ಆಕಾಶದಲ್ಲಿ ಹಾರಾಡುತ್ತ ತನ್ನ ಕಣ್ಣಿನ ತೀಕ್ಷ್ಣವಾದ ನೋಟದಿಂದಲೇ ಭೂಮಿಯ ಮೇಲ್ಮೈ ಯಲ್ಲಿರುವ ಆಹಾರವನ್ನು ಹುಡುಕುವ ಪಕ್ಷಿ. ಹಾಗಾದರೆ, ಈ ಪಕ್ಷಿಯಾವುದು? ಸತ್ತ ಪ್ರಾಣಿ ಕಣ್ಣಿಗೆ ಬಿದ್ದ ತಕ್ಷಣ, ಆಕಾಶದಿಂದ ಭೂಮಿಗೆ ಇಳಿದು, ಗುಂಪಿನಲ್ಲಿ ಬಂದು ತನ್ನ ಬಲಿಷ್ಟವಾದ ಕೊಕ್ಕಿನಿಂದ ಸತ್ತ ಪ್ರಾಣಿಯನ್ನು ಇರಿದು ತಿನ್ನುವ ಪಕ್ಷಿಯೇ ರಣಹದ್ದು.

ಕೊಳೆತ ಪ್ರಾಣಿಗಳ ದೇಹದಿಂದ ಹಬ್ಬುವ ಕಾಯಿಲೆಗಳನ್ನು ಈ ರಣಹದ್ದುಗಳು ತಡೆಗಟ್ಟಿ ಮನುಷ್ಯನಿಗೆ ಅನುಕೂಲಕರವಾಗಿವೆ. ಗರುಡ, ಚೊಟ್ಟಿ ಗರುಡ, ಜೌಗು ಸೆಳೆವ, ಡೇಗೆ, ಮೀನು ಗಿಡುಗ, ರಾಮದಾಸ ಹಕ್ಕಿ, ವೈನತೇಯ, ಹದ್ದು, ಹಾವು ಗಿಡುಗ ಹಾಗೂ ಬಿಳಿ ರಣಹದ್ದು ಮತ್ತು ಗೂಬೆಗಳಾದ ಹಿಂಸ್ರ ಪಕ್ಷಿಗಳು ಈ ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಚವಾಗಿಡುತ್ತವೆ.ಆದರೆ ಈಗ ರಣಹದ್ದು ಸಂಖ್ಯೆ ಕ್ಷೀಣಿಸುತ್ತಿರುವುದಕ್ಕೆ ಒಂದು ಪ್ರಮುಖ ಅಂಶವೆಂದರೆ ಡಿಕ್ಲೋಫೆನಾಕ್ ನಂತಹ ಔಷಧಿಗಳ ವ್ಯಾಪಕ ಬಳಕೆ, ಇದನ್ನು ಸಾಮಾನ್ಯವಾಗಿ ಜಾನುವಾರುಗಳ ಉರಿಯೂತದ ಔಷಧವಾಗಿ ಬಳಸಲಾಗುತ್ತಿದ್ದು. ಸತ್ತ ಜಾನುವಾರುಗಳನ್ನು ತಿನ್ನುವ ರಣಹದ್ದುಗಳಿಗೆ ಡಿಕ್ಲೋಫೆನಾಕ್ ಎಂಬ ಔಷಧಿಯಿಂದ ಅವುಗಳಿಗೆ ಮಾರಕವಾದ ಕಾಯಿಲೆ ಬಂದು ಈಗ ಈ ರಣಹದ್ದುಗಳು ಅಳಿವಿನಂಚಿನಲ್ಲಿರುವ ಪಕ್ಷಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಈಗ ರಣಹದ್ದು ಕ್ರಮೇಣ ಅಳಿವಿನಂಚಿಗೆ ತಲುಪಿಯಾಗಿದೆ. ಮೂಂದೊಂದು ದಿನ ಸಂಪೂರ್ಣ ಕಣ್ಮರೆಯಾದರು ಅಚ್ಚರಿಯಿಲ್ಲ. ಅಪರೂಪವಾಗುತ್ತಿರುವ ರಣಹದ್ದುಗಳನ್ನು ಉಳಿಸಿಕೊಳ್ಳಬೇಕು ಎಂದು ನಿರ್ಧರಿಸಿರುವ ರಾಜ್ಯ ಸರ್ಕಾರವು ರಾಮನಗರ ಸಮೀಪದಲ್ಲಿರುವ ರಾಮದೇವರ ಬೆಟ್ಟವನ್ನು “ರಣಹದ್ದು ಸಂರಕ್ಷಣ ಪ್ರದೇಶ” ಎಂದು ಘೋಷಿಸಿದೆ. ದೇಶದ ಮೊದಲ ರಣಹದ್ದು ಅಭಯಾರಣ್ಯ ಎಂಬ ಖ್ಯಾತಿಗೆ ಪಾತ್ರವಾಗಿದೆ.

ಈ ಅಕ್ಟೋಬರ್ ತಿಂಗಳ ಸಂಚಿಕೆಗೆ ಜೀವ ವೈವಿದ್ಯತೆ  ಕುರಿತ, ಕಾಡು, ಕಾಡಿನ ಕತೆಗಳು, ಜೀವ ವಿಜ್ಞಾನ, ವನ್ಯ ವಿಜ್ಞಾನ, ಕೀಟಲೋಕ, ಕೃಷಿ, ವನ್ಯಜೀವಿ ಛಾಯಚಿತ್ರಗಳು, ಕವನ (ಪರಿಸರಕ್ಕೆ ಸಂಬಂಧಿಸಿದ), ವರ್ಣಚಿತ್ರಗಳು ಮತ್ತು ಪ್ರವಾಸ ಕತೆಗಳು, ಪರಿಸರಕ್ಕೆ ಸಂಬಂಧ ಪಟ್ಟ ಎಲ್ಲಾ ಲೇಖನಗಳನ್ನು ಆಹ್ವಾನಿಸಲಾಗಿದೆ. ಇ-ಮೇಲ್ ಅಥವಾ ಪೋಸ್ಟ್ ಮೂಲಕ ಕಳಿಸಬಹುದು.

ಕಾನನ ಪತ್ರಿಕೆಯ ಇ-ಮೇಲ್ ವಿಳಾಸ: [email protected]
ಅಂಚೆ ವಿಳಾಸ:
Study House,
ಕಾಳೇಶ್ವರಿ ಗ್ರಾಮ,
ಆನೇಕಲ್ ತಾಲ್ಲೂಕು,
ಬೆಂಗಳೂರು ನಗರ ಜಿಲ್ಲೆ,
ಪಿನ್ ಕೋಡ್ :560083. ಗೆ ಕಳಿಸಿಕೊಡಬಹುದು.

Print Friendly, PDF & Email
Spread the love
error: Content is protected.