ಮಾಸ ವಿಶೇಷ – ಬೆಟ್ಟದಾವರೆ

ಮಾಸ ವಿಶೇಷ – ಬೆಟ್ಟದಾವರೆ

© ನಾಗೇಶ್ ಓ ಎಸ್, ಬೆಟ್ಟದಾವರೆ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

ಇಂಗ್ಲೀಷ್ ಹೆಸರು : White catamaran tree
ವೈಜ್ಞಾನಿಕ ಹೆಸರು : Givotia moluccana

ಬೆಟ್ಟದಾವರೆ ಎಂದೇ ಕರೆಯಲ್ಪಡುವ ಈ ಮರ ಭಾರತ ಹಾಗೂ ಶ್ರೀಲಂಕಾ ದೇಶಗಳ ಎಲೆಉದುರುವ ಕಾಡುಗಳಲ್ಲಿ ಸಾಮಾನ್ಯವಾಗಿ ಕಾಣಸಿಗುತ್ತವೆ. ಸುಮಾರು 12 ರಿಂದ 15 ಮೀಟರ್ ಎತ್ತರಕ್ಕೆ ಬೆಳೆಯುವ ಈ ಮರ ಬೂದು ತಿಳಿ ಕಂದು ಬಣ್ಣದ ಬಿರುಕುಗಳನ್ನೊಳಗೊಂಡ ತೊಗಟೆಯನ್ನ ಹೊಂದಿರುತ್ತದೆ. ಸರಳ ಎಲೆಗಳನ್ನ ಹೊಂದಿದ್ದು ಎಲೆಯ ಮೇಲ್ಭಾಗ ಹಸಿರಿನಿಂದ ಕೂಡಿದ್ದು ಕೆಳಭಾಗ ತಿಳಿ ಬೂದುಬಣ್ಣ ಹೊಂದಿರುತ್ತದೆ. ಎಲೆಗಳು ಗೊಂಚಲಿನಂತೆ ಸುರಳಿಯಾಕಾರದಲ್ಲಿ ಜೋಡಿಸಲ್ಪಟ್ಟಿರುತ್ತದೆ ಈ ಪ್ರಭೇದದ ಮರಗಳು ಎಕಲಿಂಗ ಹೂಗಳನ್ನ ಹೊಂದಿರುತ್ತವೆ ಅಂದರೆ ಗಂಡು ಹೂ ಅಥವಾ ಹೆಣ್ಣು ಹೂ. ಕೀಟಗಳು ಒಂದು ಮರದಿಂದ ಇನ್ನೊಂದು ಮರಕ್ಕೆ ಮಕರಂದ ಹುಡುಕುತ್ತಾ ಇದರೊಟ್ಟಿಗೆ ಪರಾಗಸ್ಪರ್ಶ ಕ್ರಿಯೆಯನ್ನೂ ಮಾಡುತ್ತವೆ. ಈ ಮರದ ಬೀಜಗಳನ್ನ ಪುಡಿ ಮಾಡಿ ಹೊಂಗೆ ಎಣ್ಣೆಯೊಂದಿಗೆ ಬೆರೆಸಿದರೆ ಚರ್ಮಕ್ಕೆ ಸಂಭಂದಿಸಿದ ಹಲವು ವ್ಯಾದಿಗಳನ್ನ ಗುಣಪಡಿಸಲು ಉಪಯೋಗಿಸುತ್ತಾರೆ.

Print Friendly, PDF & Email
Spread the love
error: Content is protected.