ಮಾಸ ವಿಶೇಷ – ತಾರೆ ಮರ

ಮಾಸ ವಿಶೇಷ – ತಾರೆ ಮರ

© ನಾಗೇಶ್ ಓ ಎಸ್, ತಾರೆ ಮರ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

ಇಂಗ್ಲೀಷ್ ಹೆಸರು : Bedda nut tree
ವೈಜ್ಞಾನಿಕ ಹೆಸರು : Terminalia bellirica

ತಾರೆ ಎಂದೇ ಸಾಮಾನ್ಯವಾಗಿ ಕರೆಯಲ್ಪಡುವ ಈ ಮರ, ಎಲೆ ಉದುರುವ ಕಾಡುಗಳಲ್ಲಿ ಕಾಣಸಿಗುತ್ತವೆ. ಈ ಮರ ಹನ್ನೆರಡರಿಂದ ಹದಿನೆಂಟು ಮೀ. ಎತ್ತರಕ್ಕೆ ಬೆಳೆಯುತ್ತದೆ. ಇದರ  ಎಲೆಗಳು ಎಂಟರಿಂದ ಇಪ್ಪತ್ತು ಸೆಂ.ಮೀ ಉದ್ದ ಹಾಗೂ ಏಳರಿಂದ ಹದಿನೈದು ಸೆಂ.ಮೀ. ಅಗಲವಿರುತ್ತದೆ. ತಿಳಿ ಹಸಿರು ಬಣ್ಣದಲ್ಲಿರುವ ಎಲೆಗಳು ಚೂಪಾದ ಕೊನೆಯನ್ನು ಹೊಂದಿದ್ದು ಎಲೆಗಳ  ಮೇಲೆ ಸಣ್ಣ ಸಣ್ಣ ಚುಕ್ಕಿಗಳಿರುತ್ತವೆ. ಎಪ್ರಿಲ್- ಮೇ ತಿಂಗಳಲ್ಲಿ ಹಸಿರು ಮಿಶ್ರಿತ ಹಳದಿ ಬಣ್ಣದ ಹೂಗಳು ಬಿಡುತ್ತವೆ. ಸಾಮಾನ್ಯವಾಗಿ ಹೂಗಳು ಗೊಂಚಲು ಗೊಂಲಾಗಿದ್ದು(infloresence ) ಇದರಲ್ಲೆ ಗಂಡು ಹಾಗು ಹೆಣ್ಣು ಹೂಗಳಿರುತ್ತವೆ. ಹಳದಿ ಮಿಶ್ರಿತ ಬೂದು ಬಣ್ಣದ ಗೋಳಾಕಾರದ ಕಾಯಿಗಳನ್ನು ಬಿಡುತ್ತವೆ ಹಾಗೂ ಈ ಕಾಯಿಗಳು ಗಟ್ಟಿಯಾಗಿರುತ್ತವೆ. ಈ ತಾರೆ ಮರ ಭಾರತೀಯ ಹಿಂದು ಸಂಸ್ಕೃತಿಯಲ್ಲಿ ಪೂಜ್ಯನೀಯ ಸ್ಥಾನವನ್ನ ಪಡೆದುಕೊಂಡಿದೆ, ಹಾಗೂ ಭಾರತದ ಆಯುರ್ವೇದದಲ್ಲಿ ತಾರೆಮರ ವಿಶೇಷ ಸ್ಥಾನವನ್ನ ಪಡೆದುಕೊಂಡಿದೆ. ಪ್ರಸಿದ್ಧ ಆಯುರ್ವೇದ ರಸಾಯನವಾದ ತ್ರಿಫಲ ಚೂರ್ಣದಲ್ಲಿ ಈ ತಾರೆಮರದ ಕಾಯನ್ನ ಉಪಯೋಗಿಸುತ್ತಾರೆ. ಈ ಚೂರ್ಣವು ಹಲವಾರು ಕಾಯಿಲೆಗಳಿಗೆ ರಾಮಬಾಣವಾಗಿದೆ.

Print Friendly, PDF & Email
Spread the love
error: Content is protected.