ಪ್ರಕೃತಿ ಬಿಂಬ

ಪ್ರಕೃತಿ ಬಿಂಬ

©ವಿಪಿನ್ ಬಾಳಿಗಾ, ತ್ರೆಡ್ ಲೆಗ್ಗಡ್ ಬಗ್

ಈ  ತ್ರೆಡ್ ಲೆಗ್ಗಡ್ ಬಗ್ (Thread Legged Bug) ಗಳು Reduviidae  ಕುಟುಂಬಕ್ಕೆ  ಸೇರಿದ ಕೀಟವಾಗಿದ್ದು ಇವು ಉಳಿದ Reduviidae ಕುಟುಂಬದ ಪ್ರಭೇದಗಳಿಗಿಂತ ತನ್ನ ತೆಳುವಾದ ದೇಹದಿಂದಾಗಿ ಭಿನ್ನವಾಗಿದೆ. ಇವುಗಳು ತಮ್ಮ ಮಧ್ಯ ಹಾಗು ಹಿಂಗಾಲುಗಳ ಮೇಲೆ ನಡೆಯುತ್ತ ಮುಂಭಾಗದ ಜೋಡಿ ಕಾಲುಗಳನ್ನು ತನ್ನ ಬೇಟೆಯನ್ನು ಹಿಡಿದುಕೊಳ್ಳಲು ಉಪಯೋಗಿಸುತ್ತದೆ. ಈ ತ್ರೆಡ್ ಲೆಗ್ಗಡ್ ಬಗ್ ಗಳು ಪರಭಕ್ಷಕ ಕೀಟವಾಗಿದ್ದು ಬಂಡೆಗಳಲ್ಲಿ, ಜೇಡರ ಬಲೆಗಳಲ್ಲಿ ಹಾಗು ರಾತ್ರಿ ದೀಪಗಳಲ್ಲಿ ಕಾಣಸಿಗುತ್ತವೆ. ಇವುಗಳಲ್ಲಿ ಹಲವು ಪ್ರಭೇದಗಳು ಉಷ್ಣವಲಯದಲ್ಲಿ ಹೆಚ್ಚಾಗಿ ಕಂಡುಬರುತ್ತವೆ ಹಾಗು ಇವುಗಳಲ್ಲಿ 900 ಕ್ಕು ಹೆಚ್ಚು ಪ್ರಭೇದಗಳಿವೆ ಎಂದು ತಿಳಿದು ಬಂದಿದೆ.

© ವಿಪಿನ್ ಬಾಳಿಗಾ , ದರೋಡೆ ಪ್ಲೈ

ಗುರಿಯಿಟ್ಟ ಬಾಣದಂತೆ ಒಂದೇ ಗುರಿಯೊಂದಿಗೆ ಕ್ಷಣಮಾತ್ರದಲ್ಲೆ ಹಾರಿ ತಮ್ಮ ಬೇಟೆಯನ್ನು ಅಪಹರಿಸುವ ಇದು ದರೋಡೆ ಪ್ಲೈ ( Robber Fly ) ಎಂದು ಹೆಸರುವಾಸಿಯಾಗಿದೆ. ತನ್ನ ಬಲಿಷ್ಠ ಕಾಲುಗಳ ಸಹಾಯದಿಂದ ತಾನು ಯಾವುದೇ ಕೋನದಲ್ಲಾದರು ತನ್ನ ಬೇಟೆಯೊಂದಿಗೆ ನಿಲ್ಲುವ ಸಾಮರ್ಥ್ಯವನ್ನು ಹೊಂದಿದೆ. ತನ್ನ ಗಾತ್ರದ ಕೀಟಗಳನ್ನು ಕೂಡ ಸರಾಗವಾಗಿ ಬೇಟೆಯಾಡುವ ಇವುಗಳು ದೊಡ್ಡ ಕಣ್ಣುಗಳನ್ನು ಹೊಂದಿರುತ್ತವೆ. ಮರಿಗಳು ತೇವಾಂಶವಿರುವ ಸ್ಥಳಗಳಲ್ಲಿ ವಾಸಿಸುತ್ತವೆ, ಹೆಚ್ಚಾಗಿ ಸಸ್ಯಗಳು, ಪೊದೆಯಂತಹ ಪ್ರದೇಶ ಹಾಗು ಹುಲ್ಲುಗಾವಲಿನಂತಹ ಪ್ರದೇಶಗಳಲ್ಲಿ ಕಂಡುಬರುತ್ತವೆ. ಈ ಮೇಲಿರುವ ದರೋಡೆ ಪ್ಲೈ ತನ್ನ ಬೇಟೆಯಾದ ಜೀರುಂಡೆಯನ್ನು ನೆಲಮಟ್ಟದಿಂದ 2-3 ಅಡಿ ಎತ್ತರಕ್ಕೆ ಒಯ್ದಿದೆ.

© ವಿಪಿನ್ ಬಾಳಿಗಾ , ಕಣಜ

ಸಾಮಾನ್ಯವಾಗಿ ಕಂಡುಬರುವ ಎಲ್ಲೋ ಜಾಕೆಟ್ಸ್  ಮತ್ತು ಹಾರ್ನೆಟ್ ಗಳು ಕಣಜ ಕುಟುಂಬಕ್ಕೆ ಸೇರಿದ್ದು, ಈ ಕುಟುಂಬದಲ್ಲಿ ಮೊಟ್ಟೆಹಾಕುವ ರಾಣಿಯೊಂದಿಗೆ ಸಂತಾನೋತ್ಪತ್ತಿ ಮಾಡದ ಕಾರ್ಮಿಕ ಕಣಜಗಳಿರುತ್ತವೆ. ಕಣಜಗಳಲ್ಲಿ ಸಾವಿರಾರು ಪ್ರಭೇದಗಳಿದ್ದು ಇವುಗಳು  ಜೇನು ಹುಳು ಹಾಗು ಇರುವೆಗಳಿಗಿಂತ ವಿಭಿನ್ನವಾದವು. ಕೆಲ ವಯಸ್ಕ ಕಣಜಗಳು ಹೂವಿನ ಮಕರಂದ ಹೀರಿದರೆ, ಹೆಚ್ಚಿನ ಸಂಖ್ಯೆಯ ಕಣಜಗಳು ಕೀಟಗಳನ್ನು ಆಹಾರವನ್ನಾಗಿಸುತ್ತವೆ. ಕಣಜಗಳು ಪರಾಗಸ್ಪರ್ಶದಲ್ಲಿ ಹೆಚ್ಚಾಗಿ ಭಾಗಿಯಾಗುವುದಿಲ್ಲ ಕಾರಣ ಉಳಿದ ಕೀಟಗಳಾದ ಜೇನುಹುಳು ಹಾಗು ಚಿಟ್ಟೆಗಳ ಹಾಗೆ ಕೇಸರವನ್ನು ಅಂಟಿಸಿಕೊಳ್ಳಲು ಕೂದಲುಗಳಿಲ್ಲ ನಯವಾದ ದೇಹವಾದ್ದರಿಂದ ಕೇಸರವು ಅಂಟುವುದಿಲ್ಲ. ಸುಮಾರು 1000 ಪ್ರಭೇದದ ಕಣಜಗಳಲ್ಲಿ ಫಿಗ್ ಕಣಜ ( Fig wasp ) ಮಾತ್ರ ತಾನು ಅವಲಂಬಿತ ಗಿಡ-ಮರಗಳನ್ನು ಉಳಿಸಿಕೊಳ್ಳಲು ಪರಾಗಸ್ಪರ್ಶ ನಡೆಸುತ್ತದೆ. ಉದಾಹರಣೆಗೆ : ಅತ್ತಿಮರ ( ಫಿಗ್ ಟ್ರೀ )

©ವಿಪಿನ್ ಬಾಳಿಗಾ, ಜೀರುಂಡೆ

ಜೀರುಂಡೆಗಳು ಕ್ಯರ್ಕಲೋಯೊಯಿಡಿಯಾ (Curculionoidea) ಕುಟುಂಬಕ್ಕೆ ಸೇರಿದ ಒಂದು ಬಗೆಯ ಜೀರುಂಡೆಗಳಾಗಿವೆ. ಅನೇಕ ಜೀರುಂಡೆಗಳನ್ನು ಕೀಟಗಳೆಂದು ಹೇಳಲಾಗುತ್ತದೆ. ಕಾರಣ ಅವುಗಳು ರೈತರ ಬೆಳೆಗಳನ್ನು ಹಾಳುಮಾಡುವುದರಿಂದ ಹಾಗು ಹಾಳುಮಾಡುವ ಸಾಮರ್ಥ್ಯ ಹೊಂದಿರುವುದರಿಂದ. ಹೆಚ್ಚಾಗಿ ಹತ್ತಿಮರದ ಹತ್ತಿಯೊಳಗೆ ಮೊಟ್ಟೆಗಳನ್ನಿಡುತ್ತವೆ, ಲಾರ್ವಗಳು ಹತ್ತಿಯನ್ನು ತಿಂದು ಹೊರಬರುತ್ತವೆ. ಕೆಲ ಜೀರುಂಡೆಗಳನ್ನು ಕಳೆ ಸಸ್ಯಗಳ ನಿಯಂತ್ರಣಕ್ಕಾಗಿ ಬಳಸಲಾಗುತ್ತದೆ. ಹಲವು ಪ್ರಭೇದಗಳು ಹಾರಡುವ ಸಾಮರ್ಥ್ಯ ಹೊಂದಿದ್ದು ಇವುಗಳಲ್ಲಿ ಕೆಲ ಪ್ರಭೇದಗಳು ಕ್ಯರ್ಕಲೋಯೊಯಿಡಿಯಾ ಕುಟುಂಬಕ್ಕೆ ಸೇರದಿದ್ದರೂ ಅವುಗಳನ್ನು ಜೀರುಂಡೆಯೆಂದೇ ಕರೆಯಲಾಗುತ್ತದೆ.

ಉದಾಹರಣೆಗೆ : ಬಿಸ್ಕತ್ ವೀವಲ್ (biscuit weevil) ಇದು Ptinidae ಕುಟುಂಬದ ಜೀರುಂಡೆ.

.

ಚಿತ್ರಗಳು: ವಿಪಿನ್ ಬಾಳಿಗಾ
ವಿವರಣೆ: ಧನರಾಜ್ ಎಂ

Print Friendly, PDF & Email
Spread the love
error: Content is protected.