ಮಾಸ ವಿಶೇಷ – ಮಂದರ ಹೂ

ಮಾಸ ವಿಶೇಷ – ಮಂದರ ಹೂ

©ನಾಗೇಶ್ ಓ ಎಸ್, ಮಂದರ ಹೂ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

ವೈಜ್ಞಾನಿಕ ಹೆಸರು : Erythrina Suberosa
ಇಂಗ್ಲೀಷ್ ಹೆಸರು : Indian Coral Tree

ಮಂದರ ಮರ ಆಗ್ನೇಯ ಭಾರತದ ಸ್ಥಳೀಯ ಮರ, ಶುಷ್ಕ ಎಲೆ ಉದುರುವ ಮತ್ತು ನಿತ್ಯಹರಿದ್ವರ್ಣದ ಕಾಡುಗಳಲ್ಲಿ  ಬೆಳೆಯುತ್ತದೆ. ಇದೊಂದು ಮಧ್ಯಮ ಗಾತ್ರದ ಮರವಾಗಿದ್ದು, ಏಳರಿಂದ ಮೂವತ್ತು ಮೀಟರ್ ಎತ್ತರಕ್ಕೆ ಬೆಳೆಯುತ್ತದೆ, ಫೆಬ್ರವರಿ ಮಾರ್ಚ್ ಸಮಯದಲ್ಲಿ ಮಂದರ ಮರದಲ್ಲಿ ಹೂವು ಬಿಡುತ್ತದೆ, ಕಿತ್ತಳೆ ಬಣ್ಣದ ಹೂವುಗಳು ಗುಚ್ಛದಂತಿದ್ದು ನೋಡಲು ಸುಂದರವಾಗಿರುತ್ತವೆ. ಕಾಂಡ, ತೊಗಟೆ ಮತ್ತು ಶಂಕುವಿನಾಕೃತಿಯ ಮುಳ್ಳುಗಳಿರುತ್ತವೆ. ತೊಗಟೆಯು ತೆಳುವಾಗಿದ್ದು, ತಿಳಿಹಸಿರು ಬಣ್ಣದಿಂದ ಕೂಡಿದೆ. ಎಲೆ ಸುಮಾರು 25 ಸೆಂಟಿಮೀಟರ್ ಉದ್ದವಿರುತ್ತದೆ, ರಚನೆಯಲ್ಲಿ ಮೂರು ವಿಶಾಲ ಚಿಗುರೆಲೆಗಳಿಂದ ಕೂಡಿದ್ದು ಮಧ್ಯದಲ್ಲಿರುವ ಎಲೆಯು ಸಾಮಾನ್ಯವಾಗಿ ದೊಡ್ಡದಾಗಿರುತ್ತದೆ. ಈ ಮರಗಳನ್ನು ರೈತರು ವೀಳ್ಯದೆಲೆ, ಮೆಣಸಿನ ಬಳ್ಳಿಗಳನ್ನು ಹಬ್ಬಿಸಲು ಮತ್ತು ತೋಟಗಳಿಗೆ ಬೇಲಿಯಾಗಿ ಬಳಸುತ್ತಾರೆ. ಇದರ ಹೂಗಳನ್ನು ಬಣ್ಣದ ತಯಾರಿಕೆಯಲ್ಲಿ ಹಾಗೂ ಮರವನ್ನು ಜರಡಿಯ ಚೌಕಟ್ಟು, ದೋಣಿಗಳ ತಯಾರಿಕೆ, ಪೆಟ್ಟಿಗೆಗಳ ತಯಾರಿಕೆ ಮತ್ತು ಸಣ್ಣ ಕಲಾತ್ಮಕ ಕೆತ್ತನೆಗಳು ಮಾಡಲು ಬಳಸುತ್ತಾರೆ.

Print Friendly, PDF & Email
Spread the love
error: Content is protected.