ವಿಜ್ಞಾನಿಗಳ ಸಮೂಹಕ್ಕೆ ಕುತೂಹಲ ಮತ್ತು ಅಚ್ಚರಿಯನ್ನುಂಟು ಮಾಡಿದ ಶಿವನಕುದುರೆಯ ಮೀನು ಬೇಟೆಯಾಡುವ ಹೊಸ ತಂತ್ರಗಾರಿಕೆ

ವಿಜ್ಞಾನಿಗಳ ಸಮೂಹಕ್ಕೆ ಕುತೂಹಲ ಮತ್ತು ಅಚ್ಚರಿಯನ್ನುಂಟು ಮಾಡಿದ ಶಿವನಕುದುರೆಯ ಮೀನು ಬೇಟೆಯಾಡುವ ಹೊಸ ತಂತ್ರಗಾರಿಕೆ

ಪ್ರಾರ್ಥನಾಮಿಡತೆ ಮ್ಯಾಂಟೊಡಿಯಗೆ ಸೇರಿದ ಅದ್ಭುತ ಹಾಗೂ ಏಲಿಯನ್ ಹೋಲುವ ಮತ್ತು ಏಲಿಯನ್ ಎಂದೇ ಖ್ಯಾತಿಹೊಂದಿದ ಕೀಟ. ಈವರೆಗೆ ಸಂಶೋಧಕರು ಜಗತ್ತಿನಲಿ 2,400ಕ್ಕು ಹೆಚ್ಚಿನ ವಿವಿಧ ಜಾತಿಯ ಮ್ಯಾಂಟಿಸ್ ಗಳನ್ನು ಗುರುತಿಸಿದ್ದಾರೆ. ಮ್ಯಾಂಟಿಸ್‍ ಗಳು ವಿಶ್ವವ್ಯಾಪಿಯಾಗಿದ್ದು ಭಾರತದಲ್ಲಿ ಈವರೆಗೆ 178 ವಿವಿಧ ಜಾತಿಯ ಮ್ಯಾಂಟಿಸ್ ಗಳನ್ನು ಗುರುತಿಸಿದ್ದಾರೆ.

ಹೈಯರುಡುಲಾ ಟೆನ್ಯೂಡೆಂಟಾಟ (ಏಶಿಯನ್ ದೈತ್ಯ ಮ್ಯಾಂಟಿಸ್) 2-ಫೂಟ್ ಸುತ್ತಳತೆ ಇರುವ ಕೊಳದಲ್ಲಿ ಜಲನೈದಿಲೆ, ಅಂತರಗಂಗೆ ಜಲ ಸಸ್ಯವನ್ನೊಳಗೊಂಡ ಮತ್ತು ಗಪ್ಪಿ, ಮೊಲ್ಲಿ, ಝಿಬ್ರಾ ಮತ್ತು ಸಕ್ರ ಜಾತಿಯ ವಿವಿಧ 40 ಬಗೆಯ ಮೀನುಗಳ ಈ ಜಲಪರಿಸರ ವ್ಯವಸ್ಥೆಯಲ್ಲಿ ನೈಸರ್ಗಿಕ ಜೀವವೈವಿಧ್ಯ ಇತಿಹಾಸದಲ್ಲಿ ಮೊದಲಬಾರಿ ವಿರಳತೆಯೊಂದು ದಾಖಲಾಗಿದ್ದು ಈಗ ಮ್ಯಾಂಟಿಸ್ ಅಧ್ಯಯನ ವಿಜ್ಞಾನದಲ್ಲಿ ಅಚ್ಚರಿಯನ್ನುಂಟುಮಾಡಿದೆ. ಹೈಯರುಡುಲಾ ಟೆನ್ಯೂಡೆಂಟಾಟ (ಏಶಿಯನ್ ದೈತ್ಯ ಮ್ಯಾಂಟಿಸ್) ಸತತ ಐದು ದಿನಗಳಲ್ಲಿ ದಿನಕ್ಕೆರಡರಂತೆ ಒಟ್ಟು ಒಂಬತ್ತು ಗಪ್ಪಿ ಮೀನುಗಳನ್ನು ಬೇಟೆಯಾಡಿ ತಿಂದಿದ್ದು ಮ್ಯಾಂಟಿಸ್‍ ಗಳ ಬೇಟೆ ಕೌಶಲ್ಯ, ತಂತ್ರಗಾರಿಕೆ ಮತ್ತು ಬುದ್ದಿವಂತಿಕೆಯನ್ನು ತೋರಿಸುತ್ತದೆ. ಸತತ ಅಧ್ಯಯನದಲ್ಲಿ ಕಂಡುಬಂದುದೇನೆಂದರೆ ಮಂದ ಬೆಳಕಿನಲ್ಲೂ ಪರಿಪೂರ್ಣ ಬೇಟೆ, ಮ್ಯಾಂಟಿಸ್ ಕಣ್ಣುಗಳ ದೃಷ್ಠಿಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ಇದಲ್ಲದೆ ನೈಸರ್ಗಿಕ ಆವಾಸದಲ್ಲಿ ಒಂದು ಅಕಶೇರುಕ ಕೀಟ ಕಶೇರುಕಗಳಂಥ ಮೀನುಗಳನ್ನು ಭಕ್ಷಿಸುವಮೂಲಕ ಮೀನುಗಳ ಸಮುದಾಯದ ಮೇಲೆ ಬಲವಾದ ಪ್ರಭಾವಬೀರಿದೆ. ಕೊಳದಲ್ಲಿ ವಿವಿಧಜಾತಿಯ ಮೀನುಗಳಿದ್ದರೂ ಗಪ್ಪಿಮೀನುಗಳನ್ನು ಮಾತ್ರ ಬೇಟೆಯಾಡಿರುವುದು ವಿಚಿತ್ರವಾಗಿದೆ. 

ತಲೆಯು 280-320 ಡಿಗ್ರಿಗಳವರೆಗೆ ಸುಲಭವಾಗಿ ತಿರುಗಬಲ್ಲ ಸಾಮರ್ಥ್ಯ ಹೊಂದಿದ್ದು ಬೇಟೆಹುಡುಕಲು ಸುಲಭವಾಗಿದ್ದು ಮುಂಪಾದ(ರ್ಯಾಪ್ಟೋರಿಯಲ್ ಫೋರ್ ಲಿಂಬ) ಬೇಟೆಹಿಡಿಯಲು ಗರಗಸದಂಥ ಸೂಕ್ಷ್ಮ ರಚನೆಗಳನ್ನು ಹೊಂದಿರುವುದರಿಂದ ಸಿಕ್ಕಬೇಟೆ ತಪ್ಪಿಸಿಕೊಳ್ಳವುದು ಅಸಾಧ್ಯ. ಮುಂಪಾದಗಳು ಯಾವಾಗಲು ಪ್ರಾರ್ಥನೆ ಮಾಡುವಾಗ ಕೈಮುಗಿದಂತಾ ಭಂಗಿಯಲ್ಲಿರುವುದರಿಂದ ಪ್ರಾರ್ಥನಾಮಿಡತೆ ಎಂದು ಹೆಸರಿಸಲಾಗಿದೆ.

ಆಹಾರ ಕ್ರಮ:ಸಾಮಾನ್ಯವಾಗಿ ಈ ಕೀಟವು ಸೊಳ್ಳೆ, ನೊಣ, ಜೇನ್ನೊಣ, ಮಿಡತೆ, ಕಂಬಳಿಹುಳು, ಚಿಟ್ಟೆ, ಪತಂಗ, ದುಂಬಿ ಮುಂತಾದ ಕೀಟಗಳನ್ನು ಬೇಟೆಯಾಡುತ್ತದೆ. ಸಂಶೋಧಕರು ಅಧ್ಯಯನಕ್ಕೆಂದು ಮ್ಯಾಂಟಿಸ್‍ ಗಳನ್ನು ಅವುಗಳಿಗೆ ಪೂರಕ ವಾತಾವರಣ ನಿರ್ಮಿಸಿ ಪ್ರಯೋಗಾಲಯಗಳಲ್ಲಿ ಸಾಕುತ್ತಾರೆ. ಇಂತಹ ಸಂದರ್ಭದಲ್ಲಿ ಅತಿ ವಿರಳವಾಗಿ ಕಪ್ಪೆ, ಹಾವು, ಹಲ್ಲಿ, ಪುಟ್ಟ ಹಕ್ಕಿಯಂತ ಕಶೇರುಕಗಳನ್ನು ತಿಂದದಾಖಲೆಗಳಿವೆ. ಆದರೆ ವಿಶ್ವಜೀವವೈವಿಧ್ಯ ಇತಿಹಾಸದಲ್ಲಿ ಪ್ರಥಮಬಾರಿಗೆ ಜಗತ್ತಿನ ವಿಜ್ಞಾನಿಗಳು ಚಕಿತರಾಗಿ ತಲೆಕೆಡಿಸಿಕೊಳ್ಳುವಂತ ಕುತೂಹಲಕಾರಿ ಘಟನೆ ಕರ್ನಾಟಕದ ಬೆಂಗಳೂರಿನ ರಾಜೇಶ ಪುಟ್ಟಸ್ವಾಮಿ- ಸಂಶೋಧಕರು, ಇವರ ಮನೆ ಕೈತೋಟದ ನೈಸರ್ಗಿಕ ಆವಾಸದಲ್ಲಿ ಕಂಡುಬಂದಿದೆ.

ಕೆಲವು ಸಂದರ್ಭದಲ್ಲಿ ಮಿಲನವಾದ ನಂತರ ಹೆಣ್ಣು ಗಂಡು ಮ್ಯಾಂಟಿಸ್‍ ಅನ್ನು ತಿನ್ನುತ್ತವೆ ಕಾರಣ ತಾನು ಇಡುವ ಮೊಟ್ಟೆಡಬ್ಬ(ಉಥಿಕಾ)ತಳಿಯ ಸಾಮರ್ಥ್ಯ ಹೆಚ್ಚಲೆಂದು ಗಂಡು ತನ್ನನ್ನು ತಾನು ಸಮರ್ಪಿಸಿಕೊಳ್ಳುತ್ತದೆ.

ಪರಿಸರ ಸಮತೋಲನದಲ್ಲಿ ಮ್ಯಾಂಟಿಸ್ ಪಾತ್ರ: ಸೊಳ್ಳೆ, ನೊಣ, ದುಂಬಿ, ಜೇಡ ಮತ್ತು ಕೃಷಿಗೆ ಪೀಡಕವಾದ ಕೀಟಗಳನ್ನು ಭಕ್ಷಿಸುವುದರ ಮೂಲಕ ಜೈವಿಕ ಕೀಟ ನಿಯಂತ್ರಕವಾಗಿ ಕೆಲಸಮಾಡುತ್ತದೆ ಮತ್ತು ಆಹಾರ ಸರಪಳಿಯಲ್ಲಿ ಪಕ್ಷಿ, ಹಲ್ಲಿಯಂತಹ ಮೇಲುಸ್ಥರದ ಜೀವಿಗಳಿಗೆ ಆಹಾರವಾಗಿದೆ.

ಜೀವವೈವಿಧ್ಯಕ್ಕೆ ಸಂಬಂಧಿಸಿದ ಹಾಗೆ 150 ಮಿಲಿಯನ್‍ ವರ್ಷದ ಇತಿಹಾಸವಿರುವ ಮ್ಯಾಂಟಿಸ್ ಪರಿಸರ ಸಮತೋಲನದಲ್ಲಿ ಪ್ರಮುಖ ಪಾತ್ರವಹಿಸುವುದರಿಂದ ಇದರ ಸಂರಕ್ಷಣೆ ಅವಶ್ಯವಾಗಿದೆ. ವಿಶ್ವದಾದ್ಯಂತ ಹಲವಾರು ಕಡೆ ಸಂಶೋಧನೆ ನಡೆಯುತ್ತವೆ. ಆದರೆ ಪರಿಸರದ ಸಮತೋಲನಕ್ಕೆ ಪ್ರಮುಖ ಕಾರಣವಾದ ಕೀಟಗಳ ಬಗ್ಗೆ ಅಧ್ಯಯನ ತುಂಬಾ ಕಡಿಮೆ, ಅದರಲ್ಲಿಯೂ ವಿಶೇಷವಾಗಿ ಮ್ಯಾಂಟಿಸ್‍ ನಂತಹ ಕೀಟಗಳು ಅಧ್ಯಯನದಿಂದ ತಾತ್ಸಾರಕ್ಕೊಳಪಟ್ಟ ಜೀವಿಗಳಾಗಿವೆ.

 ಅಧ್ಯಯನ ನಡೆಸಿದ ಸಂಶೋಧಕರ ತಂಡ: ಛಾಯಾಚಿತ್ರ : ರಾಜೇಶ ಪುಟ್ಟಸ್ವಾಮಿ, ಕಡಬಗೆರೆ ಮಾಗಡಿ ರಸ್ತೆ, ಬೆಂಗಳೂರು
ಡಾ|| ರಾಬರ್ಟೋ ಬ್ಯಾಟಿಸ್ಟನ್- ವಿಜ್ಞಾನಿಗಳು, ಇಟಲಿ, ಮಂಜುನಾಥ ನಾಯಕ, ಜೀವವೈವಿಧ್ಯ ಸಂಶೋಧಕರು, ವೈಲ್ಡ್ ಲೈಫ್ ವೆಲ್ ಫೇರ್ ಸೊಸೈಟಿ-. ರೋಣ-ಗದಗ ಜಿಲ್ಲೆ. ರಾಜೇಶ ಪುಟ್ಟಸ್ವಾಮಿ, ಬಾವಲಿ ಸಂಶೋಧಕರು, ಬ್ಯಾಟ್ಸ್ ಕನ್ಸರ್ವೇಷನ್ ಇಂಡಿಯನ್ ಟ್ರಸ್ಟ್-ಬೆಂಗಳೂರು,

ಲೇಖನ: ಮಂಜುನಾಥ ನಾಯಕ
ಗದಗ
ಜಿಲ್ಲೆ

Print Friendly, PDF & Email
Spread the love
error: Content is protected.