ನೀವೂ ಕಾನನಕ್ಕೆ ಬರೆಯಬಹುದು
ಒಂದು ಕಾಲದಲ್ಲಿ ಬಹುತೇಕ ಹಳ್ಳಿಮನೆಗಳಲ್ಲಿ ಬೆಳಗಿನ ಅಲಾರ್ಮ್ ಎಂದರೆ ಗುಬ್ಬಚ್ಚಿಗಳ ಚಿಲಿಪಿಲಿಯೇ. ಸಂಗ್ರಹಿಸಿಟ್ಟ ಭತ್ತದ ಒಣಹುಲ್ಲುಗಳ ತೆನೆಯಲ್ಲಿ ಅಲ್ಲಲ್ಲಿ ಸಿಗುವ ಭತ್ತಗಳನ್ನು ಹುಡುಕುತ್ತ ಸಂಸಾರ ಸಮೇತ ಸುಪ್ರಭಾತ ಹಾಡುವುದು ಗುಬ್ಬಚ್ಚಿಗಳ ದಿನಚರಿಯ ಮೊದಲ ಕೆಲಸ! ಮನುಷ್ಯನ ಸಹವಾಸದಲ್ಲೇ ಬದುಕುತ್ತಿದ್ದ ಮನೆಗುಬ್ಬಿಗಳು ‘ಈ ಮನುಷ್ಯರ ಸಹವಾಸವೇ ಸಾಕು’ ಎಂದು ಹಳ್ಳಿಮನೆ ಬಿಟ್ಟು ಪಟ್ಟಣ ಸೇರಿದ್ದಾವಾ…? ಹಾಗೇನೂ ಇಲ್ಲ ಎಂದಾದರೆ ಇದ್ದ ಗುಬ್ಬಿಗಳೆಲ್ಲ ಎಲ್ಲಿ ಹೋದವು? ಹಳ್ಳಿಗಳಲ್ಲಿ ಪ್ರತಿ ಮನೆಯಲ್ಲೂ ಏನಿಲ್ಲವೆಂದರೆ ಕನಿಷ್ಠ 10-15 ಸಂಖ್ಯೆಯಲ್ಲಿರುತ್ತಿದ್ದ ಗುಬ್ಬಚ್ಚಿ ಮಾಯವಾಗಿದ್ದೇಕೆ? ಇತ್ತೀಚೆಗೆ ಹಳ್ಳಿ ಮನೆಗಳೂ ಥಾರಸಿಯಾಗಿ ಬದಲಾಗಿದ್ದು, ಮೊಬೈಲ್ ತರಂಗಗಳು ಗುಬ್ಬಚ್ಚಿಯ ಜೀವಕ್ಕೇ ಸಂಚಕಾರ ಎಂಬ ಆತಂಕ ಮುಂತಾದವೆಲ್ಲ ಸೇರಿ ಮುದ್ದು ಗುಬ್ಬಚ್ಚಿಗಳು ಕಣ್ಣಿಗೇ ಕಾಣದಂತೆ ಮಾಯವಾಗಿವೆ. ಗುಬ್ಬಚ್ಚಿಗಳನ್ನು ರಕ್ಷಿಸಲು ಮತ್ತು ಜಾಗೃತಿ ಮೂಡಿಸಲು ಪ್ರತಿ ವರ್ಷ ಮಾರ್ಚ್ 20 ರಂದು “ವಿಶ್ವ ಗುಬ್ಬಚ್ಚಿ ದಿನ” ವನ್ನು ಆಚರಿಸಲಾಗುತ್ತದೆ. ಅಳಿವಿನ ಅಂಚಿನಲ್ಲಿರುವ ಗುಬ್ಬಚ್ಚಿಗಳನ್ನು ಮುಂದಿನ ಪೀಳಿಗೆಗೆ ಉಳಿಸುವ ನಿಟ್ಟಿನಲ್ಲಿ ಪ್ರಾರಂಭವಾದ ವಿಶ್ವ ಗುಬ್ಬಚ್ಚಿ ಸಂರಕ್ಷಣಾ ದಿನವನ್ನು ವರ್ಷದ ಒಂದು ದಿನ ಮಾತ್ರ ಆಚರಣೆ ಮಾಡಬಾರದು. ನಿರಂತರವಾಗಿ ಗುಬ್ಬಚ್ಚಿಗಳ ಸಂತತಿ ಉಳಿಸಲು ಶತ ಪ್ರಯತ್ನ ನಡೆಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.
ಇದೇ ರೀತಿಯ ಮಾಹಿತಿಗಳನ್ನು ನೀಡಲು ನೀವೂ ಕಾನನಕ್ಕೆ ಬರೆಯಬಹುದು. ಈ ರೀತಿಯ ಪರಿಸರದ ಬಗೆಗಿನ ಮಾಹಿತಿಯನ್ನು ಒದಗಿಸಲು ಇರುವ ಕಾನನ ಇ-ಮಾಸಿಕಕ್ಕೆ ಮುಂದಿನ ತಿಂಗಳ ಸಂಚಿಕೆಗೆ ಲೇಖನಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಪರಿಸರಕ್ಕೆ ಸಂಬಂಧಿಸಿದ ಕಥೆ, ಕವನ, ಛಾಯಾಚಿತ್ರ, ಚಿತ್ರಕಲೆ, ಪ್ರವಾಸ ಕಥನಗಳನ್ನು ಕಾನನ ಮಾಸಿಕದ ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು.
ಕಾನನ ಪತ್ರಿಕೆಯ ಇ-ಮೇಲ್ ವಿಳಾಸ: [email protected]
ಅಂಚೆ ವಿಳಾಸ:
ಅಡವಿ ಫೀಲ್ಡ್ ಸ್ಟೇಷನ್,
ಒಂಟೆಮಾರನ ದೊಡ್ಡಿ ಗ್ರಾಮ ,
ರಾಗಿಹಳ್ಳಿ ಅಂಚೆ,
ಜಿಗಣಿ ಹೋಬಳಿ,
ಆನೇಕಲ್ ತಾಲ್ಲೂಕು ,
ಬೆಂಗಳೂರು ನಗರ ಜಿಲ್ಲೆ
ಪಿನ್ ಕೋಡ್ :560083. ಗೆ ಕಳಿಸಿಕೊಡಬಹುದು.