ಆಲ (ಟ )

ಆಲ (ಟ )

ಯಾವ ಭೇದವಿಲ್ಲದೆ ಕೈಚಾಚಿಹುದು
ತನ್ನತ್ತ ಬಂದವರಿಗೆಲ್ಲ ಆಸರೆಯಾಗಿಹುದು|
ಅದೆಷ್ಟೋ ಜೀವಿಗಳಿಗೆ ಸೂರಾಗಿಹುದು
ಮತ್ತಷ್ಟು ಎಳೆ ಮನಸುಗಳಿಗೆ ಉಯ್ಯಾಲೆಯಾಗಿಹುದು||

ವಿಸ್ತಾರವಾಗಿ ಬೆಳೆದ ಆಲದ ಮರವಿಂದು
ಒಂಟಿ ಒಂಟಿ ಆಡುವವರ ಕಳೆದು|
ಜೋತು ಬೀಳುವವರಾರು ಇಂದು
ಆಧುನಿಕ ಸರಕುಗಳ ಮೋಜೆ ಮುಂದು||

ಮುಪ್ಪು ಮನಗಳಿಗೆ ನೆನಪಾಗಿಹುದು
ಕಳೆದೆಲ್ಲ ಬಾಲ್ಯದಾ ಸಿಹಿ ಕ್ಷಣವದು|
ಮತ್ತೆ ಮಗುವಾಗುವಾ ಬಯಕೆಯದು
ವಯಸ ಮರೆಸಿ ಕುಣಿಸಿಹುದು||

ಕಾಲಿ ಕಾಲಿ ಹಳ್ಳಿ ಬದಿಯ ಆಲ, ಆಲಯವಿಂದು
ಹಿರಿ ಜೀವಗಳು ಇರುವವು ಅಲ್ಲೊಂದು ಇಲ್ಲೊಂದು|
ಆಸೆ-ಆಕಾಂಕ್ಷೆಗಳ ಬೆನ್ನತ್ತಿ ಪಯಣ ಸಾಗಿಹುದು
ಅಪ್ಪ ನೆಟ್ಟ ಆಲದ ಮರಕೆ ಜೋತು ಬೀಳದೆ ನಡೆದು||

ಪ್ರಕೃತಿಯ ಮಡಿಲಲಿ ಆಡಿ ನಲಿದು
ಕಳೆವ ಬಾಲ್ಯವೆಲ್ಲ ಈಗ ಬರಿದೆ ಕಥೆಯದು|
ಹೊಸ ತನದ ಅಪ್ಪುಗೆಯಲಿ ಬೆಳೆದು
ಹಳೆ ಆಟ, ಪಾಠ, ಭಾವ-ಬಂಧವೆಲ್ಲ ಮರೆಯಾಗಿಹುದು||

ಪ್ರತಿಭಾ ಪ್ರಶಾಂತ್
ಉತ್ತರ ಕನ್ನಡ ಜಿಲ್ಲೆ        


Print Friendly, PDF & Email
Spread the love
error: Content is protected.