ಮಾಸ ವಿಶೇಷ – ಬೆಜ್ಜಲು

ಮಾಸ ವಿಶೇಷ – ಬೆಜ್ಜಲು

         © ಮಹದೇವ ಕೆ ಸಿ, ಬೆಜ್ಜಲು, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

ಸಾಮಾನ್ಯ ಹೆಸರು:Axle wood
ವೈಜ್ಞಾನಿಕ ಹೆಸರು : Anogeissus latifolia

ಬೆಜ್ಜಲು ಅಥವಾ ದಿಂಡಲು ಎಂದು ಕರೆಯುವ ಈ ಮರವು ಭಾರತ, ಮಯನ್ಮಾರ್, ಶ್ರೀಲಂಕಾ ದೇಶಗಳ ಎಲೆ ಉದುರುವ ಶುಷ್ಕ ಕಾಡುಗಳಲ್ಲಿ ಕಂಡುಬರುವ ಸುಮಾರು ಇಪ್ಪತ್ತು ಮೀಟರ್ ಎತ್ತರದವರೆಗೂ ಬೆಳೆಯುವ ಮರವಾಗಿದೆ. ಬೂದು ಅಥವಾ ಹಳದಿ ಮಿಶ್ರಿತ ಬೂದು ಬಣ್ಣದ ನಯವಾದ ತೊಗಟೆಯನ್ನು ಹೊಂದಿದ್ದು;  ಗಾಢ ಹಸಿರು ಬಣ್ಣದ ಸರಳ  ಹಾಗು ಪರ್ಯಾಯ ಎಲೆಗಳನ್ನು ಹೊಂದಿದೆ. ಏಪ್ರಿಲ್ ನಿಂದ ನವೆಂಬರ್ ತಿಂಗಳುಗಳಲ್ಲಿ ಸಣ್ಣ ತಿಳಿ ಹಳದಿ ಬಣ್ಣದ ಹೂಗಳನ್ನು ಬಿಡುತ್ತದೆ. ಇದರ ದಾರವು ಗಡಸಾಗಿ ಬಲಯುತವಾಗಿರುವುದರಿಂದ ಇದರ ನಾರೂ ಹಾಗೂ ಮರವೂ ಗಟ್ಟಿಯಾಗಿರುತ್ತದೆ. ಈ ಮರವನ್ನು ಗಾಡಿ ಕಂಬಗಳಿಗೆ, ಕೊಡಲಿ ಕಾವುಗಳಿಗೆ, ಕೃಷಿ ಉಪಕರಣಗಳಿಗೆ, ದೋಣಿ ನಿರ್ಮಾಣಕ್ಕೆ ಉಪಯೋಗಿಸಲಾಗುತ್ತದೆ. ಇದರಿಂದ ಉತ್ಕೃಷ್ಟ ಸೌದೆ ಹಾಗೂ ಇದ್ದಿಲು ದೊರಕುವುದು. ಇದರ ಕಾಂಡದಿಂದ ಬರುವ ಅಂಟು ಕ್ಯಾಲಿಕೊ ಮುದ್ರಣದಲ್ಲಿ ಬಳಸಲ್ಪಡುತ್ತದೆ. ಹಲ್ಲು ನೋವು, ವಾಂತಿ, ಬೇಧಿ ಮೊದಲಾದ ಖಾಯಿಲೆಗಳ ಶಮನಕ್ಕೆ ಈ ಬೆಜ್ಜಲು ಮರದ  ಭಾಗಗಳನ್ನು ಆಯುರ್ವೇದ ಔಷಧದಲ್ಲಿ ಬಳಸುತ್ತಾರೆ.

Print Friendly, PDF & Email
Spread the love
error: Content is protected.