ನೀವೂ ಕಾನನಕ್ಕೆ ಬರೆಯಬಹುದು

ಜೂನ್ 5 ವಿಶ್ವ ಪರಿಸರ ದಿನ.
ಸ್ವರ್ಗವೇ ಭೂಮಿಯೊಳಿರದಿರೆ ನೀ ಬೇರೆಲ್ಲಿಯೂ ಇಲ್ಲ ಇಲ್ಲ!. ನಮ್ಮ ಭೂಮಿ ಇಷ್ಟು ಸುಂದರವಾಗಿರಲು ಕಾರಣ, ಇಲ್ಲಿನ ಪರಿಸರ.
“ಈ ಆಗಸ, ಈ ತಾರೆ…
ಜುಳುಜುಳುನೆ ಹರಿವ ಜಲಧಾರೆ, ಮುಗಿಲ ಮಲೆಯ ಸಾಲೆ,
ಆಹಾ! ಯಾರದು ಈ ಬಗೆ ಲೀಲೆ?”

ಎಂಬ ಕವಿ ನುಡಿಯಂತೆ ಕಾಡು, ನದಿ, ಸಮುದ್ರ , ಬೆಟ್ಟಗುಡ್ಡ, ಕಣಿವೆ, ಮಂಜು ಜೀವವೈವಿಧ್ಯ ಎಲ್ಲವೂ ಈ ಭೂರಮೆಯ ಸೌಂದರ್ಯ ಹೆಚ್ಚಿಸುವ ಆಭರಣಗಳು. ಜೈವಿಕ ಮತ್ತು ಅಜೈವಿಕ ವಸ್ತುಗಳ ಸಂಯೋಜನೆಯೊಂದಿಗೆ, ಪಂಚಭೂತಗಳಾದ ಗಾಳಿ, ನೀರು, ಬೆಂಕಿ, ಮಣ್ಣು ಮತ್ತು ಆಕಾಶ ಕೂಡಿರುವ ಈ ಭೂಮಿ ಅನೇಕ ಕಾರಣಗಳಿಂದ ತನ್ನ ನೈಜರೂಪವನ್ನು, ಜೀವವೈವಿಧ್ಯತೆಯ ಶ್ರೀಮಂತಿಕೆಯನ್ನು ದಿನೇದಿನೇ ಕಳೆದುಕೊಳ್ಳುತ್ತಿದೆ. ವಾಯುಮಾಲಿನ್ಯ, ಜಲಮಾಲಿನ್ಯ, ಶಬ್ದಮಾಲಿನ್ಯ, ಮಣ್ಣಿನ ಮಾಲಿನ್ಯಗಳಿಂದ ನಮ್ಮ ಸುತ್ತಲಿನ ಪರಿಸರ ಮತ್ತು ಪರಿಸರ ವ್ಯವಸ್ಥೆಯನ್ನು ಕಾಪಾಡಿಕೊಳ್ಳುವುದು ಅನಿವಾರ್ಯವಾಗಿದೆ.

ಅತಿಯಾಗುತ್ತಿರುವ ಅರಣ್ಯನಾಶ, ಪ್ಲಾಸ್ಟಿಕ್ ಬಳಕೆ, ನಗರೀಕರಣ, ರಸ್ತೆ ಕಾರ್ಖಾನೆಗಳ ನಿರ್ಮಾಣ, ಇವೆಲ್ಲವೂ ಪರಿಸರ ಹಾನಿಗೆ ತಮ್ಮದೇ ರೀತಿಯಲ್ಲಿ ಕೊಡುಗೆ ನೀಡುತ್ತಿವೆ. ಭೂಮಿಗೆ ರಕ್ಷಣಾ ಕವಚದಂತಿರುವ ಓಝೋನ್ ಪದರವು ಹಸಿರುಮನೆ ಪರಿಣಾಮಕ್ಕೆ ಕಾರಣವಾದ ಅನಿಲಗಳಿಂದ ರಂಧ್ರವಾಗುತ್ತಿದೆ. ಈ ಎಲ್ಲ ಅಂಶಗಳನ್ನು ಗಮನಿಸಿ ಮುಂಬರುವ ಅಪಾಯವನ್ನು ತಪ್ಪಿಸುವಂತೆ ಜನರಲ್ಲಿ ಪರಿಸರದ ಬಗೆಗಿನ ಜಾಗೃತಿಯನ್ನು ಮೂಡಿಸಲು ಪ್ರತಿ ವರ್ಷ ಜೂನ್ 5ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ.

ಹಾಗಾಗಿ ನೀವು ಬರೆದ ಪರಿಸರ ಲೇಖನಗಳು ಹಾಗೂ ಕವನಗಳನ್ನ ನಮ್ಮ ಈ ಇ-ಮಾಸಿಕಕ್ಕೆ ಜೂನ್ 15ರ ಒಳಗಾಗಿ ಈ ಕೆಳಗಿನ ವಿಳಾಸಕ್ಕೆ ಅಥವಾ ನಮ್ಮ ಇ ಮೇಲ್ ವಿಳಾಸಕ್ಕೆ ಕಳುಹಿಸಿಕೊಡಿ.

ಕಾನನ ಪತ್ರಿಕೆಯ ಇ-ಮೇಲ್ ವಿಳಾಸ: [email protected]
ಅಂಚೆ ವಿಳಾಸ:
Study House,
ಕಾಳೇಶ್ವರಿ ಗ್ರಾಮ,
ಆನೇಕಲ್ ತಾಲ್ಲೂಕು,
ಬೆಂಗಳೂರು ನಗರ ಜಿಲ್ಲೆ,
ಪಿನ್ ಕೋಡ್ :560083. ಗೆ ಕಳಿಸಿಕೊಡಬಹುದು.

Print Friendly, PDF & Email
Spread the love
error: Content is protected.