ಮಾಸ ವಿಶೇಷ – ಒಳ್ಳೆತಂಗಡಿ

ಮಾಸ ವಿಶೇಷ – ಒಳ್ಳೆತಂಗಡಿ

©ಜೈ ಕುಮಾರ್ ಆರ್, ಒಳ್ಳೆತಂಗಡಿ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

ಇಂಗ್ಲೀಷ್ ಹೆಸರು :Tanner’s Cassia
ವೈಜ್ಞಾನಿಕ ಹೆಸರು : Cassia auriculate

ಒಳ್ಳೆತಂಗಡಿಯು ಭಾರತ ಮತ್ತು ಶ್ರೀಲಂಕಾದೆಲ್ಲೆಡೆ ಕಾಣಸಿಗುತ್ತದೆ. ಶುಷ್ಕಎಲೆ ಉದುರುವ ಕಾಡುಗಳು, ಕುರುಚಲು ಕಾಡು ಮತ್ತು ರಸ್ತೆ ಬದಿಗಳಲ್ಲಿ ಕಂಡುಬರುತ್ತದೆ. ಇದರ ತೊಗಟೆ ನಯವಾದ ಕೆಂಪು-ಕಂದು ಬಣ್ಣದಿಂದ ಕೂಡಿದ್ದು, ಎತ್ತರಕ್ಕೆ ಬೆಳೆದ ಕವಲೊಡೆದ ಪೊದೆಸಸ್ಯ ಸುಮಾರು 1-1.5 meter ಎತ್ತರಕ್ಕೆ ಬೆಳೆಯುತ್ತದೆ. ಜನವರಿಯಿಂದ ಜುಲೈವರೆಗೆ ಒಳ್ಳೆತಂಗಡಿ ಮರದ ರೆಂಬೆಗಳ ತುದಿಯಲ್ಲಿ ಹೊಳೆಯುವ ಹಳದಿ ಬಣ್ಣದ ಐದು ದಳಗಳನ್ನು ಹೊಂದಿರುವ ಸುಂದರವಾದ ಗುಚ್ಛಗುಚ್ಛವಾದ ಹೂವುಗಳು ಮೂಡುತ್ತವೆ. ಇದರ ಹಣ್ಣುಗಳು ಚಪ್ಪಟೆಯಾಗಿದ್ದು, ತೆಳ್ಳಗೆ ಉದ್ದವಾಗಿರುತ್ತವೆ. ಒಣಗಿದ ಕಾಯಿಯಲ್ಲಿ ಮಸುಕಾದ ಕಂದು ಬಣ್ಣದ ಬೀಜಗಳು ಬಿಡುತ್ತವೆ. ಇದರ ಬೀಜಗಳನ್ನು ಮಧುಮೇಹದ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಮತ್ತು ಇದರ ತೊಗಟೆಯ ಪುಡಿ ಮತ್ತು ಅಂಟನ್ನು ophthalmia or conjunctivitis ಸಮಸ್ಯೆಗಳಿಗೆ ಔಷಧಿಯಾಗಿ ಬಳಸಲಾಗುತ್ತದೆ.

Print Friendly, PDF & Email
Spread the love
error: Content is protected.