ಮಾಸ ವಿಶೇಷ – ಬಿಳಿಸುಲಿಗೆ ಮರ

ಮಾಸ ವಿಶೇಷ – ಬಿಳಿಸುಲಿಗೆ ಮರ

©ನಾಗೇಶ್ ಓ ಎಸ್, ಬಿಳಿಸುಲಿಗೆ ಮರ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

ಇಂಗ್ಲೀಷ್ ಹೆಸರು : Bonfire tree
ವೈಜ್ಞಾನಿಕ ಹೆಸರು : Firmiana colorata

ಬಿಳಿಸುಲಿಗೆ ಮರವು ಭಾರತದ ಉಪಖಂಡದಲ್ಲಿ ಮತ್ತು ಪೂರ್ವ ಆಗ್ನೇಯ ಏಷ್ಯಾದಲ್ಲಿ ವ್ಯಾಪಕವಾಗಿ ವಿಸ್ತರಿಸಿದೆ. ಶುಷ್ಕ ಎಲೆ ಉದುರುವ ಕಾಡುಗಳಲ್ಲಿ ಹೆಚ್ಚಾಗಿ ಬೆಳೆಯುವ ಮರ, ಸುಮಾರು 25 ಮೀಟರ್ ಎತ್ತರಕ್ಕೆ ಬೆಳೆಯುತ್ತದೆ. ಮಾರ್ಚ್ ಅಂತ್ಯ ಅಥವಾ ಏಪ್ರಿಲ್ ಆರಂಭದಲ್ಲಿ, ಬಿಳಿಸುಲಿಗೆ ಮರವು ಎಲೆಗಳಿಲ್ಲದ ಕೊಂಬೆಗಳ ತುದಿಗಳಲ್ಲಿ ಸುಂದರವಾದ ಮತ್ತು ನಯವಾದ ಹವಳದ ಕಿತ್ತಳೆ ಮತ್ತು ಕೆಂಪು ಹೂವುಗಳ ಗುಚ್ಛಮೂಡುತ್ತವೆ. ತೊಗಟೆಯು ಸಾಮಾನ್ಯವಾಗಿ ಕಂದು ಬಣ್ಣ,ಅದಕ್ಕಿಂತ ಹೆಚ್ಚಾಗಿ ಕೆಲವುಸಲ ಬೂದು ಬಣ್ಣದ್ದಾಗಿರುತ್ತದೆ. ಬಿಳಿಸುಲಿಗೆ ಮರದ ತೊಗಟೆ ಅಷ್ಟು ಒರಟಲ್ಲದ ಮತ್ತು ಆಳವಲ್ಲದ ಸಣ್ಣ ಲಂಬವಾದ ಬಿರುಕುಗಳಿಂದ ಕೂಡಿದೆ. ಚಿಗುರಿದ ಎಲೆಗಳು  ಐದು ಬೆರಳುಗಳಂತಹ ಹಾಲೆ(Lobes)ಗಳನ್ನು ಹೊಂದಿರುತ್ತವೆ. ಸಾಮಾನ್ಯವಾಗಿ ಎಲೆಗಳು ಬಲಿತಂತೆ  ಹಾಲೆಗಳು ಕೂಡಿ ಮೂರಾಗುತ್ತವೆ. ಕಾಯಿಗಳ ಗುಚ್ಛದ ತುದಿಗಳಲ್ಲಿ ಅಂಡಾಶಯವಿದ್ದು, ಗುಲಾಬಿ ಬಣ್ಣದ ಹಣ್ಣುಗಳು ತನ್ನದೇ ತೊಟ್ಟಿನಿಂದತೂಗಾಡುತ್ತವೆ. ಕಿರಿದಾದ ಚೀಲಗಳ ಅಂಚುಗಳಲ್ಲಿ ಒಂದು ಅಥವಾ ಎರಡು ಬೀಜಗಳಿಂದ ಕೂಡಿರುತ್ತವೆ. ಹಿಂದೂಗಳು ಮತ್ತು  ಸಿಲೋನಿಯರು ಇದನ್ನು ಪವಿತ್ರ ಸಸ್ಯ ಎಂದು ಪರಿಗಣಿಸಿ ಸಾಂಪ್ರದಾಯಿಕ ಔಷಧಿಗಳಲ್ಲಿ ಬಳಸುತ್ತಾರೆ.  ಇದರ ಕೊಂಬೆ ಮತ್ತು ಕೊಂಬೆಯ ನಾರನ್ನು ಜಾನುವಾರುಗಳಿಗೆ ಮೇವು ರೂಪದಲ್ಲಿ ಬಳಸುತ್ತಾರೆ. ಇದರ ತೊಗಟೆಯಿಂದ ರಸವನ್ನು ತೆಗೆದು ಕಾಮಾಲೆಯಂತಹ ಕಾಯಿಲೆಗೆ ಮತ್ತು ಇದರ ಅಂಟು ದ್ರಾವಣವನ್ನು ಹೊಟ್ಟೆ ನೋವಿಗೆ ಔಷಧಿಯಾಗಿ ಬಳಸಲಾಗುತ್ತದೆ.

Print Friendly, PDF & Email
Spread the love
error: Content is protected.