ಪ್ರಸ್ತುತ

ಅರುಣನ ಕೃಪೆ ಆ ದಿನಗಳಲಿ..
ಇಂದಿನ ಕ್ಷಣ ಈಗಿನ ಮನ
ಉರುಹೊಡೆ ನೆವದಿ
ಊದಲು ಮಾತು ಋಷಿಯಂಗಳದಿ.,
ಎನಿತು ಇನಿತು..ಏನ ಕಂಡರೂ
ಐಕ್ಯತೆ ಇರದ..
ಒಲವನು ಕಾಣದ
ಓಲಗ ತೆರದಿ,
ಔದಾರ್ಯ ಸುಟ್ಚು
ಅಂತಕನಾಗೆ ಅಃಮಿಕೆಯೊಂದೆ
ಕಲೆಸುತಿದೆ…
ಖನಿಜಗಳೆಲ್ಲಾ ಗತಿಸುತ ಇರಲು
ಘಮ ಘಮ ಙ ಙ ನಶಿಸುತಿದೆ.
ಚರಾಚರಗಳು ಛದ್ಮ ರೂಪದಿ
ಜಲಾಚರಗಳು ಝರಿಯನರಸುತಾ
ಈಸ್ಥಿತಿಗೆ ತಲುಪಿದವು..
ಟಪಾಲು ಠಸ್ಸೆಯಗೋಜಲಿನಲ್ಲಿ
ಡಕಾಯಿತರು ಢಕ್ಕೆಯ ತೋರಿ
ಢಣ ಢಣವೆಂದು ತಟ್ಟಿರಲು
ಥಕ ಥಕ ದಮನ
ಧರಣಿಯ ನವೀನ
ಪಕ್ಷಿ ಸಂಕುಲ ಫಲವಿರದೇ..,
ಬರ.. ಬರ..ಭರಣಿ
ಮಸೆಯಿಸಿತು..
ಯಮನ ರಗಳೆಯ
ಲವಣದ ವರುಣ
ಶರಧಿಯ ಷಡ್ಯಯ
ಸಂಧಿಸಿದ..
ಹರ ಹರ ಇಳೆಯು
ಕ್ಷತ್ರಿಯನಿರದೇ
ತ್ರಯ ಪರಿಣಯವಿದು ಕೇಳಣ್ಣ…
ಕೃತಜ್ಞವೆಂದಿಗೂ ಒಳಿತಣ್ಣ..
ಕೃತಘ್ನನಾಗಲು ಬೇಡಣ್ಣ..

ನಂದಕುಮಾರ್ ಹೊಳ್ಳ.
ಸಾಸ್ತಾನ, ಪಾಂಡೇಶ್ವರ

Print Friendly, PDF & Email
Spread the love
error: Content is protected.