ಮಾಸ ವಿಶೇಷ – ಬಿಳಿಜಾಲಿ

ಮಾಸ ವಿಶೇಷ – ಬಿಳಿಜಾಲಿ

         © ಶೇಖರ್ ಅಂಗಡಿ, ಬಿಳಿಜಾಲಿ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

ಇಂಗ್ಲೀಷ್ ಹೆಸರು : White Bark Acacia
ವೈಜ್ಞಾನಿಕ ಹೆಸರು : Acacia leuceophlora

ಈ ಬಿಳಿಜಾಲಿಯು ದಕ್ಷಿಣ ಭಾರತದ ಒಣ ಕಾಡುಗಳಲ್ಲಿ ಕಂಡು ಬರುವ ಮರ. ಮಯನ್ಮಾರ್ ಮತ್ತು ಇಂಡೋ ಚೀನಾದ ಒಣ ಪ್ರದೇಶಗಳಲ್ಲೆಲ್ಲಾ ವಿಸ್ತರಿಸಿದೆ. ಹೆಸರೇ ಹೇಳುವಂತೆ ಬಿಳಿ ತೊಗಟೆಯನ್ನು ಹೊಂದಿದ್ದು, ಇದು ಒಂದು ಮುಳ್ಳು ಮರ, ಸುಮಾರು 20 ಮೀಟರ್ ಎತ್ತರಕ್ಕೆ ಬೆಳೆಯುತ್ತದೆ. ಇದು ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ತುಂಬಾ ಸಣ್ಣದಾದ ಒತ್ತೊತ್ತಾಗಿರುವ ಬಿಳಿ ಮತ್ತು ಹಳದಿ ಬಣ್ಣದ ಹೂಗಳನ್ನು ಬಿಡುತ್ತದೆ. ಒಟ್ಟೊಟ್ಟಿಗೆ ಇರುವ 2-3 ಕಂದು ಬಣ್ಣದ ಹಣ್ಣುಗಳು ಹುರುಳಿಕಾಯಿಯಂತೆ 5cm ಉದ್ದ ಇರುತ್ತವೆ, ಬೂದು ಹಸಿರು ಬಣ್ಣದ ಸಣ್ಣ ಸಣ್ಣ ಸಂಯುಕ್ತ ಎಲೆಗಳು ಹೊಂದಿದೆ. ಹೆಚ್ಚಾಗಿ ಜಾಲಿಯ ತೊಗಟೆ ಮತ್ತು ಒಸಡನ್ನು ಉಬ್ಬಸ ಹಾಗೂ  ಉಸಿರಾಟದ ತೊಂದರೆಗಳಿಗೆ ಔಷಧಿಯಾಗಿ ಬಳಸಲಾಗುತ್ತದೆ. ಇದರ ಒಳ ತೊಗಟೆಯನ್ನು ಕೆಂಪು, ಕಂದು ಬಣ್ಣ ತಯಾರು ಮಾಡಲು ಬಳಸಲಾಗುತ್ತದೆ. ಇದರ ಎಲೆಗಳನ್ನು ದನ-ಕರುಗಳಿಗೆ ಮೇವಾಗಿ ಬಳಸಲಾಗುತ್ತದೆ.

Print Friendly, PDF & Email
Spread the love
error: Content is protected.