ಮಾಸ ವಿಶೇಷ – ಕಕ್ಕೆ ಮರ

ಮಾಸ ವಿಶೇಷ – ಕಕ್ಕೆ ಮರ

© ಡಬ್ಲ್ಯೂ ಸಿ ಜಿ, ಕಕ್ಕೆ ಮರ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

ಸಾಮಾನ್ಯ ಹೆಸರು:Golden Shower Tree
ವೈಜ್ಞಾನಿಕ ಹೆಸರು:Cassia fistula

ಭಾರತ ಉಪಖಂಡದ ಕಾಡುಗಳಲ್ಲಿ ಬೆಳೆಯುವ ಒಂದು ಸುಂದರವಾದ ಮರ. ಇದನ್ನು ಇಂಗ್ಲಿಷ್ ನಲ್ಲಿ “ಗೋಲ್ಡನ್ ಶವರ್ ಟ್ರೀ” ಎಂದು. ಕನ್ನಡದಲ್ಲಿ ಕಕ್ಕೆ ಮರ, ಸ್ವರ್ಣಪುಷ್ಪ, ಕೊಂದೆ ಮುಂತಾದ ಹೆಸರುಗಳಿಂದ ಕರೆಯುವುದುಂಟು. ಇದು ಥೈಲಾಂಡಿನ ರಾಷ್ಟ್ರೀಯ ಪುಷ್ಪವೂ ಹೌದು. ಕೇರಳದ ರಾಜ್ಯಪುಷ್ಪ ಆಗಿದೆ. ಮಾರ್ಚ್-ಮೇ ತಿಂಗಳಲ್ಲಿ ಇದು ಹಳದಿ ಬಣ್ಣದ ಹೂವುಗಳ ಗೊಂಚಲುಬಿಟ್ಟುಅತ್ಯಂತ ಸುಂದರವಾಗಿ ಕಾಣುತ್ತದೆ. ಕಕ್ಕೆಯ ಹಣ್ಣು ಕೋತಿ, ಕರಡಿ, ಹಂದಿಗಳಿಗೆ ತುಂಬ ಪ್ರಿಯವಾದದ್ದು. ಇದ್ದನ್ನು ನಾವು ಕರಡಿ ಚಾಕಲೇಟ್ ಎಂತಲೂ ಕರೆಯುತ್ತೇವೆ. ಈ ಕಕ್ಕೆಯ ಮರದ ಎಲೆ, ತೊಗಟೆ, ಕಾಯಿ, ಹೂವು ಮುಂತಾದ ಭಾಗಗಳು ಔಷಧಿ ಗುಣವನ್ನು ಹೊಂದಿದ್ದು. ಕೆಮ್ಮು, ಗಂಟಲು ನೋವು, ಮೂತ್ರದ ಸಮಸ್ಯೆ, ಬಾಯಾರಿಕೆ, ಕುಷ್ಟರೋಗ, ಕೊರಳು ಬಾವು ಮತ್ತು ರಕ್ತ ಪಿತ್ತಕ್ಕೆ ಉಪಯುಕ್ತ.

Print Friendly, PDF & Email
Spread the love
error: Content is protected.