ಮಾಸ ವಿಶೇಷ – ಬಿಕ್ಕಿಗಿಡ

ಮಾಸ ವಿಶೇಷ –   ಬಿಕ್ಕಿಗಿಡ

                         © ನಾಗೇಶ್ ಓ. ಎಸ್. ಬಿಕ್ಕಿಗಿಡ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

ಸಾಮಾನ್ಯ ಹೆಸರು: Cambi gum tree
ವೈಜ್ಞಾನಿಕ ಹೆಸರು : Gardenia gummifera

ಗಾರ್ಡೇನಿಯ ಕುಟುಂಬದಲ್ಲಿ ಸರಿಸುಮಾರು 250 ಪ್ರಭೇದದ ಹೂ ಬಿಡುವ ಸಸ್ಯಗಳನ್ನು ನೋಡಬಹುದು. ಇದರಲ್ಲಿ ಕಾಡುಬಿಕ್ಕೆ ಅಥವಾ ಅಡವಿ ಬಿಕ್ಕೆ ಎಂದು ಕರೆಯಲ್ಪಡುವ ಈ ಮರವು ಎಲ್ಲಾ ಶುಷ್ಕ ಎಲೆ ಉದುರುವ ಕಾಡುಗಳಲ್ಲಿ ಸಿಗುವ ಸಾಮಾನ್ಯ ಮರವಾಗಿದೆ. ಮರದ ತೊಗಟೆಯು ಬೂದು ಬಣ್ಣದಿಂದ ಕೂಡಿದ್ದು, ತೊಗಟೆಯ ಮೇಲ್ಭಾಗ ನಯವಾಗಿರುತ್ತದೆ ಮತ್ತು ಕಾಂಡಗಳಲ್ಲಿ ಯಾವುದೇ ಮುಳ್ಳುಗಳು ಇರುವುದಿಲ್ಲ. ಮರದ ಎಲೆಗಳು ಸರಳ ಮತ್ತು ಅಭಿಮುಖ ಎಲೆ ವಿನ್ಯಾಸವನ್ನು ಹೊಂದಿದ್ದು, ಎಲೆಗಳು ವಿಶಾಲವಾಗಿರುತ್ತವೆ ಹಾಗೂ ಮೇಲ್ಮೈ ನಯವಾಗಿದ್ದು ಹೊಳಪಿನಿಂದ ಕೂಡಿರುತ್ತದೆ. ಎಲೆಗಳ ಗಾತ್ರ ಸುಮಾರು 5 ರಿಂದ 10 ಸೆಂಟಿ ಮೀಟರ್ ಇರುತ್ತವೆ.  ಈ ಗಿಡವು ಬಿಳಿ ಬಣ್ಣದ ಸುವಾಸನೆ ಭರಿತ ಹೂಗಳನ್ನು ಹೊಂದಿವೆ ಮತ್ತು ಹೂವಿನ ದಳಗಳು ಗಂಟೆ ಆಕಾರದಲ್ಲಿ ಜೋಡಣೆಯಾಗಿದ್ದು ಅವು ಬಲಿತಾಗ ಹಳದಿ ಕಿತ್ತಳೆ ಬಣ್ಣಕ್ಕೆ ತಿರುಗುತ್ತವೆ. ಹೂಗಳ ಗಾತ್ರ ಸರಿ ಸುಮಾರು 10 ಸೆಂಟಿಮೀಟರ್ ಇರುತ್ತವೆ. ಬೂದು ಬಣ್ಣದ ಕಾಯಿಗಳು ಗೋಳಾಕಾರದಲ್ಲಿದ್ದು, ಅವು ಹಣ್ಣಾದಾಗ ಕಂದು ಬಣ್ಣಕ್ಕೆ ತಿರುಗುತ್ತವೆ. ಇವುಗಳ ಹಣ್ಣು ಒರಟಾಗಿದ್ದು ಗಾತ್ರದಲ್ಲಿ 3 ರಿಂದ 5 ಸೆಂಟಿ ಮೀಟರ್ ಇರುತ್ತದೆ. ಚರ್ಮ ಮತ್ತು ಹೊಟ್ಟೆಗೆ ಸಂಬಂಧಪಟ್ಟ ಕಾಯಿಲೆಗಳಿಗೆ ಔಷಧಿ ತಯಾರಿಸಲು ಈ ಮರದ ಭಾಗಗಳನ್ನು ಉಪಯೋಗಿಸುತ್ತಾರೆ.

Print Friendly, PDF & Email
Spread the love
error: Content is protected.