ಮಾಸ ವಿಶೇಷ – ಅಡವಿ ಬಿಕ್ಕೆ

ಮಾಸ ವಿಶೇಷ –   ಅಡವಿ ಬಿಕ್ಕೆ

                         © ನಾಗೇಶ್ ಓ. ಎಸ್. ಅಡವಿ ಬಿಕ್ಕೆ , ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

ಸಾಮಾನ್ಯ ಹೆಸರು: Indian Boxwood
ವೈಜ್ಞಾನಿಕ ಹೆಸರು : Gardenia latifolia

ಹಿಮಾಲಯದ ತಪ್ಪಲು, ಮಧ್ಯಭಾರತ ಮತ್ತು ದಖನ್ ಪ್ರಸ್ಥಭೂಮಿಯ ಒಣ ಪ್ರದೇಶಗಳಲ್ಲಿ ಕಂಡುಬರುವ ಈ ಸಸ್ಯವು ಶ್ರೀಲಂಕಾದಲ್ಲಿಯೂ ಕಂಡುಬಂದಿರುವ ಬಗ್ಗೆ ವರದಿಯಾಗಿದೆ. ಅಡವಿ ಬಿಕ್ಕೆ ಮರ ಎಂದು ಕರೆಯಲ್ಪಡುವ ಈ ಮರ ಎಲೆ ಉದುರುವ ಕಾಡುಗಳಲ್ಲಿ ಸುಮಾರು 6 ರಿಂದ 10 ಮೀಟರ್ ಎತ್ತರಕ್ಕೆ ಬೆಳೆಯುತ್ತದೆ. ಈ ಮರದ ತೊಗಟೆಯು ನಯವಾದ ಬೂದು ಬಣ್ಣದಿಂದ ಕೂಡಿದ್ದು, ಎಲೆಗಳು ಸಾಮಾನ್ಯ ವಿನ್ಯಾಸವನ್ನು ಹೊಂದಿದ್ದು ಸರಿ ಸುಮಾರು 5 ರಿಂದ 10 ಸೆಂಟಿ ಮೀಟರ್ ಉದ್ದವಿರುತ್ತವೆ. ಈ ಮರದಲ್ಲಿ ಸುವಾಸನೆ ಭರಿತ ಬಿಳಿ ಬಣ್ಣದ ಹೂಗಳು ಕೊಂಬೆಯ ತುದಿಯಲ್ಲಿದ್ದು, ಗಂಟೆ ಆಕಾರದಲ್ಲಿರುತ್ತವೆ ಹಾಗು ಸುಮಾರು 10 ಸೆಂಟಿಮೀಟರ್ ಉದ್ದವಿರುತ್ತವೆ. ಒಂದು ದಿನದ ನಂತರ ಬಾಡುವ ಈ ಮರದ ಹೂಗಳು ಹಳದಿ ಕಿತ್ತಳೆ ಬಣ್ಣಕ್ಕೆ ತಿರುಗುತ್ತವೆ. ಈ ಮರದ ಕಾಯಿಯು ಅಂಡಾಕಾರದಲ್ಲಿದ್ದು, ಒಳಗೆ ಹಲವಾರು ಬೀಜಗಳಿರುತ್ತವೆ. ಬೂದು ಬಣ್ಣದ ಇದರ ಹಣ್ಣುಗಳು ಸುಮಾರು 3 ರಿಂದ 5 ಸೆಂಟಿ ಮೀಟರ್ ದಪ್ಪವಿರುತ್ತವೆ. ಹೊಟ್ಟೆ ನೋವು, ಜ್ವರ, ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಔಷಧಿ ತಯಾರಿಸಲು ಈ ಮರದ ಭಾಗಗಳನ್ನು ಉಪಯೋಗಿಸುತ್ತಾರೆ.

Print Friendly, PDF & Email
Spread the love
error: Content is protected.