ಮಾಸ ವಿಶೇಷ – ಶಿವನೆ ಮರ

ಮಾಸ ವಿಶೇಷ –  ಶಿವನೆ ಮರ

                         © ನಾಗೇಶ್ ಓ. ಎಸ್. ಶಿವನೆ ಮರ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

ಸಾಮಾನ್ಯ ಹೆಸರು: White teak
ವೈಜ್ಞಾನಿಕ ಹೆಸರು : Gmelina arborea

ಶಿವನೆ ಮರವು ಭಾರತ, ಮ್ಯಾನ್ಮಾರ್, ಥೈಲ್ಯಾಂಡ್ ಮೊದಲಾದ ದೇಶಗಳಲ್ಲಿ ಕಂಡುಬರುತ್ತದೆ. ಭಾರತದ ಬಹುತೇಕ ಎಲ್ಲಾ ಭಾಗಗಳಲ್ಲಿ ಕಂಡುಬರುವ ಈ ಮರವು ಸಾಧಾರಣವಾಗಿ 14 ಮೀಟರ್ ಎತ್ತರದ ವರೆಗೆ ಬೆಳೆಯುತ್ತದೆ. ಇದು ತಿಳಿ ಬೂದು ಬಣ್ಣದ ತೊಗಟೆಯಿಂದ ಕೂಡಿದ್ದು, ಎಲೆಗಳು ಸರಳ ವಿನ್ಯಾಸವನ್ನು ಹೊಂದಿದ್ದು, ಹಳದಿ ಬಣ್ಣದಿಂದ ಕೂಡಿರುತ್ತವೆ ಮತ್ತು ಎದುರು ಬದುರಾಗಿರುತ್ತವೆ. ಎಲೆಯು ಉದ್ದನೆಯ ತೊಟ್ಟುಗಳನ್ನು ಹೊಂದಿದೆ, ಗುಂಡಾಗಿ ಚಿಕ್ಕದಾದ ತುದಿಯಿದ್ದು ಮೃದುವಾದ ರೋಮಗಳಿಂದ ಕೂಡಿರುತ್ತವೆ. ಹಾಗು ಫೆಬ್ರವರಿ ಯಿಂದ ಏಪ್ರಿಲ್ ನಲ್ಲಿ ಕಹಳೆ ಆಕಾರದ 3-4 ಸೆಂಟಿ ಮೀಟರ್ ಉದ್ದದ ಹಳದಿ ಮಿಶ್ರಿತ ಕಂದು ಬಣ್ಣದ ಹೂಗಳು ಗೊಂಚಲುಗಳಲ್ಲಿ ಸಣ್ಣ ಕೊಂಬೆಯ ತುದಿಗಳಲ್ಲಿ ಕಂಡುಬರುತ್ತವೆ. ಮೇ – ಜೂನ್ ನಲ್ಲಿ ಹಣ್ಣುಗಳು ಪ್ರಾರಂಭವಾಗುತ್ತದೆ. ಈ ಮರದ ಬಹುತೇಕ ಭಾಗಗಳನ್ನು ಮಧುಮೇಹ, ಮೂರ್ಛೆ ರೋಗ, ಜ್ವರ ಮೊದಲಾದ ಕಾಯಿಲೆಗಳನ್ನು ಗುಣಪಡಿಸಲು ಔಷಧಿಯಾಗಿ ಉಪಯೋಗಿಸುತ್ತಾರೆ ಹಾಗೂ ಎಲೆಗಳನ್ನು ತಲೆ ನೋವು ನಿವಾರಕವಾಗಿ ಕೂಡ ಬಳಸುತ್ತಾರೆ.

Print Friendly, PDF & Email
Spread the love
error: Content is protected.