ಮಾಸ ವಿಶೇಷ – ಸಿಸ್ಸು

ಮಾಸ ವಿಶೇಷ – ಸಿಸ್ಸು

                          ©  ನಾಗೇಶ್ ಓ. ಎಸ್., ಸಿಸ್ಸು, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

ಸಾಮಾನ್ಯ ಹೆಸರು: Indian rosewood
ವೈಜ್ಞಾನಿಕ ಹೆಸರು : Dalbergia sissoo

ಸಿಸ್ಸು ಎಂದು ಕರೆಯಲ್ಪಡುವ ಈ ಮರವು ಭಾರತದ ಬಹುತೇಕ ಭಾಗಗಳಲ್ಲಿ ಕಂಡುಬರುತ್ತದೆ. ಈ ಮರವು ಸುಮಾರು 20 ಮೀಟರ್ ಎತ್ತರಕ್ಕೆ ಬೆಳೆಯುತ್ತದೆ. ಇದು ಬೂದು ಬಣ್ಣದ ಒರಟಾದ ತೊಗಟೆಯನ್ನು ಹೊಂದಿದ್ದು, ಸುಮಾರು 15 ಸೆಂಟಿಮೀಟರ್ ಉದ್ದಕ್ಕೆ ಬೆಳೆಯುವ ಎಲೆಗಳು ಸಂಯುಕ್ತ ವಿನ್ಯಾಸವನ್ನು ಹೊಂದಿವೆ. ತಿಳಿ ಹಸಿರು ಬಣ್ಣದಿಂದ ಕೂಡಿರುವ ಈ ಮರದ ಎಲೆಗಳ ತುದಿ ಚೂಪಾಗಿರುತ್ತವೆ. ವರ್ಷದ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಹೂಗಳನ್ನು ಬಿಡುತ್ತದೆ. ಹೂಗಳು ಗೊಂಚಲು ಗೊಂಚಲಾಗಿದ್ದು, ಹಳದಿ ಮಿಶ್ರಿತ ಬಿಳಿ ಬಣ್ಣದಲ್ಲಿರುತ್ತವೆ. ಈ ಮರದ ಹಣ್ಣುಗಳು ತಿಳಿ ಬೂದು ಬಣ್ಣವಿದ್ದು, ಸುಮಾರು ಏಳು ಸೆಂಟಿ ಮೀಟರ್ ಉದ್ದ ಇರುತ್ತವೆ. ಮರದ ತೊಗಟೆಯನ್ನು ಸಾಂಪ್ರದಾಯಿಕ ವೈದ್ಯಕೀಯ ವ್ಯವಸ್ಥೆಯಲ್ಲಿ ಅಲ್ಸರ್, ಹೊಟ್ಟೆ ನೋವು ಮತ್ತು ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ಗುಣಪಡಿಸಲು ಔಷಧಿಯಾಗಿ ಉಪಯೋಗಿಸುತ್ತಾರೆ.

Print Friendly, PDF & Email
Spread the love
error: Content is protected.