ಮಾಸ ವಿಶೇಷ – ಮಾವು

ಮಾಸ ವಿಶೇಷ – ಮಾವು

                          ©  ಮಹದೇವ ಕೆ. ಸಿ., ಮಾವು, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

ಸಾಮಾನ್ಯ ಹೆಸರು: Mango Tree
ವೈಜ್ಞಾನಿಕ ಹೆಸರು : Mangifera indica

ಮಾವು ಪ್ರಪಂಚದಲ್ಲೆಡೆ ಸಾಧಾರಣವಾಗಿ ಕಂಡುಬರುವ ಮರ, ವಿಶೇಷವಾಗಿ ಭಾರತದ ರಾಷ್ಟ್ರೀಯ ಹಣ್ಣು. ಅನಕಾರ್ಡಿಯೆಸಿ (Anacardiaceae) ಕುಟುಂಬಕ್ಕೆ ಸೇರಿರುವ ಈ ಮರದ ವೈಜ್ಞಾನಿಕ ಹೆಸರು ಮ್ಯಾಂಜಿಫೆರಾ ಇಂಡಿಕಾ (Mangifera indica). ಮಾವು ಬಹುತೇಕ ಎಲ್ಲಾ ವಿಧದ ಕಾಡುಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ. ಮರದ ತೊಗಟೆಯು ಬೂದು ಬಣ್ಣದಿಂದ ಕೂಡಿದ್ದು, ಮರದ ಎತ್ತರ 15 ರಿಂದ 30 ಮೀಟರ್ ಇರುತ್ತದೆ.  ಭಾರತ ದೇಶದಲ್ಲಿ ಸುಮಾರು 500 ಪ್ರಭೇದದ ಮಾವನ್ನು ಕಾಣಬಹುದು. ಕೆಂಪು ಮತ್ತು ಹಳದಿ ಮಿಶ್ರಿತ ಹೂಗಳನ್ನು ಡಿಸೆಂಬರ್ – ಜನವರಿ ತಿಂಗಳಲ್ಲಿ ಬಿಡುತ್ತದೆ. ಮಾವಿನ ಪ್ರಭೇದದಲ್ಲಿ ಹೆಣ್ಣು ಗಂಡು ಎರಡೂ ಜಾತಿ ಹೂಗಳನ್ನು ಒಂದೇ ಮರದಲ್ಲಿ ಕಾಣಬಹುದು. ಹಣ್ಣುಗಳು ಅಂಡಾಕಾರದಲ್ಲಿದ್ದು, 8 ರಿಂದ 12 ಸೆಂಟಿ ಮೀಟರ್ ಉದ್ದವಿರುತ್ತವೆ ಹಾಗೂ ಹಸಿರು ಹಳದಿ ಮಿಶ್ರಿತ ಬಣ್ಣವನ್ನು ಹೊಂದಿರುತ್ತವೆ. ಹಸಿರು ಬಣ್ಣದ ಮಾವಿನ ಕಾಯಿ ಹಣ್ಣಾದ ಬಳಿಕ ಹಳದಿ ಬಣ್ಣಕ್ಕೆ ತಿರುಗುತ್ತದೆ. ಮರದ ಬಹುತೇಕ ಭಾಗಗಳನ್ನು ಆಯುರ್ವೇದದಲ್ಲಿ ಔಷಧಿಯಾಗಿ ಉಪಯೋಗಿಸುತ್ತಾರೆ.

Print Friendly, PDF & Email
Spread the love
error: Content is protected.