ನೀವೂ ಕಾನನಕ್ಕೆ ಬರೆಯಬಹುದು

      

ಮಳೆ ಭೂಮಿಯ ಮೇಲಿನ ಸಕಲ ಜೀವಿಗಳಿಗೂ ಆಧಾರ. ಕಾಲಕಾಲಕ್ಕೆ ಮಳೆ ಚೆನ್ನಾಗಿ ಆಗುತ್ತಿದ್ದರೆ ಸಕಲ ಜೀವಿಗಳು ನೆಮ್ಮದಿಯಿಂದ ಇರುತ್ತವೆ. ಎಲ್ಲಾ ಜೀವಿಗಳಿಗೂ ಬೇಕಾದ ಆಹಾರ, ನೀರು ಎಲ್ಲವೂ  ದೊರಕುತ್ತವೆ. ಆದರೆ ಬೀಳುವ ಮಳೆಯಲ್ಲಿ  ಏನಾದರು ವ್ಯತ್ಯಾಸವಾದರೆ ಎಲ್ಲವೂ  ಏರು ಪೇರಾಗುತ್ತದೆ. ಮಳೆ ಕಡಿಮೆಯಾದರೆ ಬರಗಾಲ, ಕ್ಷಾಮ ಬಂದು ಜೀವಿಗಳು ಆಹಾರ, ನೀರಿಲ್ಲದೆ ಸಾಯುತ್ತವೆ. ಹಾಗೆಯೇ  ಮಳೆ ಹೆಚ್ಚಾದರೂ ಪ್ರವಾಹದಿಂದಲೂ ಅದೇ ಸ್ಥಿತಿ ಬಂದೊದಗುತ್ತದೆ. ಕಳೆದ ಎರಡು ವರ್ಷಗಳಲ್ಲಿ ಮಳೆ ಹೆಚ್ಚಾದ ಕಾರಣ ನಮ್ಮ ದೇಶದಲ್ಲೇ ಎಂತಹ ಅನಾಹುತಗಳಾಗಿವೆ ಎಂದು ನೀವೇ ಗಮನಿಸಿದ್ದೀರಾ. ಮಳೆಯ  ಋತುಗಳೆಲ್ಲ ಬದಲಾಗಿವೆಯೇನೋ ಎಂದು ಭಾಸವಾಗುತ್ತಿದೆ. ಇದಕ್ಕೆ ಮಾನವರು ಒಂದು ರೀತಿ ಕಾರಣಕರ್ತರು. ನಮ್ಮ ಮತ್ತು ಪರಿಸರದ ನಡುವಿನ ಸಂಭಂದವನ್ನು ನಾವು ಅರ್ಥಮಾಡಿಕೊಳ್ಳದೆ ಹೋದರೆ ಮುಂದಿನ ದಿನಗಳಲ್ಲಿ ಇನ್ನೂ  ಹೆಚ್ಚಿನ ಅನಾಹುತಗಳನ್ನು ಎದುರಿಸಬೇಕಾಗುತ್ತದೆ.

ಈ ರೀತಿಯ ಪರಿಸರದ ಬಗೆಗಿನ ಮಾಹಿತಿಯನ್ನು ಒದಗಿಸಲು ಇರುವ ಕಾನನ ಇ-ಮಾಸಿಕಕ್ಕೆ ಮುಂದಿನ ತಿಂಗಳ ಪ್ರತಿಗೆ ಲೇಖನಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಪರಿಸರಕ್ಕೆ ಸಂಬಂಧಿಸಿದ ಕಥೆ, ಕವನ, ಛಾಯಾಚಿತ್ರ, ಚಿತ್ರಕಲೆ, ಪ್ರವಾಸ ಕಥನಗಳನ್ನು ಕಾನನ ಮಾಸಿಕದ ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು.

ಕಾನನ ಪತ್ರಿಕೆಯ ಇ-ಮೇಲ್ ವಿಳಾಸ: [email protected]
ಅಂಚೆ ವಿಳಾಸ:
Study House,
ಕಾಳೇಶ್ವರಿ ಗ್ರಾಮ,
ಆನೇಕಲ್ ತಾಲ್ಲೂಕು,
ಬೆಂಗಳೂರು ನಗರ ಜಿಲ್ಲೆ,
ಪಿನ್ ಕೋಡ್ :560083. ಗೆ ಕಳಿಸಿಕೊಡಬಹುದು.

Print Friendly, PDF & Email
Spread the love
error: Content is protected.