ಮಾಸ ವಿಶೇಷ – ಪಾವಟೆ

ಮಾಸ ವಿಶೇಷ – ಪಾವಟೆ

                          ©  ನಾಗೇಶ್ ಓ. ಎಸ್., ಪಾವಟೆ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

ಸಾಮಾನ್ಯ ಹೆಸರು: Indian Pavetta
ವೈಜ್ಞಾನಿಕ ಹೆಸರು : Pavetta crassicaulis

ಪಾವಟೆಯು ಭಾರತ ಮೂಲದ ಒಂದು ಪೊದೆ ಸಸ್ಯ. ಇದು ದಕ್ಷಿಣ ಏಷ್ಯಾದ ಎಲೆ ಉದುರುವ ಕಾಡು ಪ್ರದೇಶಗಳಲ್ಲಿ ಕಾಣಸಿಗುತ್ತದೆ. ಈ ಸಸ್ಯವು ಸುಮಾರು ಎರಡರಿಂದ ನಾಲ್ಕು ಮೀಟರ್ ಎತ್ತರದವರೆಗೂ ಬೆಳೆಯುತ್ತದೆ. ಇದರ ಕಾಂಡವು ಬೂದು ಅಥವಾ ಕಂದು ಬಣ್ಣವಿರುತ್ತದೆ. ಜೂನ್ ನಿಂದ ಡಿಸೆಂಬರ್ ತಿಂಗಳವರೆಗೆ ಈ ಸಸ್ಯಗಳಲ್ಲಿ ಹೂವು ಹಾಗೂ ಹಣ್ಣುಗಳನ್ನು ಕಾಣಬಹುದು. ಹೂವುಗಳು ಬಿಳಿ ಬಣ್ಣವಿದ್ದು, ಸಣ್ಣ ಸಣ್ಣ ಗೊಂಚಲಿನಲ್ಲಿರುತ್ತವೆ. ಹೂವಿನ ನಾಲ್ಕು ಪುಷ್ಪದಳಗಳ ಮೇಲೆ ಸೂಜಿಯಾಕಾರದ ಶಲಾಕಾಗ್ರವು ಇರುತ್ತದೆ. ಇದರ ಎಲೆಗಳು ಅಂಡಾಕಾರದಲ್ಲಿದ್ದು, ಎಲೆಯ ಬುಡದಲ್ಲಿ ಬೆಣೆ ಆಕಾರದಲ್ಲಿದ್ದು, ತುದಿಯಲ್ಲಿ ಸ್ವಲ್ಪ ಮೊನಚಗಿರುತ್ತದೆ, ಎಲೆಗಳು ಪರಸ್ಪರ ವಿರುದ್ಧವಾಗಿ ಜೋಡಣೆಗೊಂಡಿರುತ್ತವೆ. ಚಿಕ್ಕಗಾತ್ರದ ಪಾವಟೆಯ ಹಣ್ಣುಗಳು ಹಸಿರಾಗಿದ್ದು, ಅದೂ ಕೂಡ ಗೊಂಚಲಿನಲ್ಲಿರುತ್ತವೆ. ವಿರಳವಾಗಿ ಬಿಳಿ ಬಣ್ಣದ ಹಣ್ಣುಗಳು ಸಹ ಕಾಣಸಿಗುತ್ತದೆ. ಇದರ ಬೇರು, ಎಲೆ ಹಾಗೂ ಕಾಂಡವು ಔಷಧೀಯ ಗುಣವನ್ನು ಹೊಂದಿವೆ, ಇದರ ಬೇರನ್ನು ಉದರ ಸಂಬಂಧಿ ಕಾಯಿಲೆಗಳಿಗೆ ಹಾಗೂ ಎಲೆ ಮತ್ತು ಕಾಂಡವನ್ನು ಮೂಲವ್ಯಾಧಿಗೆ ಔಷಧವಾಗಿ ಬಳಸುತ್ತಾರೆ.

Print Friendly, PDF & Email
Spread the love
error: Content is protected.