ಮಾಸ ವಿಶೇಷ – ಕೃಷ್ಣನೆಲ್ಲಿ

ಮಾಸ ವಿಶೇಷ – ಕೃಷ್ಣನೆಲ್ಲಿ

                  ©  ನಾಗೇಶ್ ಓ. ಎಸ್., ಕೃಷ್ಣನೆಲ್ಲಿ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

ಸಾಮಾನ್ಯ ಹೆಸರು: Shrub Amla
ವೈಜ್ಞಾನಿಕ ಹೆಸರು : Phyllanthus polyphyllus

ಕೃಷ್ಣನೆಲ್ಲಿ  ಹೆಸರಿನ ಈ ಪೊದೆಸಸ್ಯವು  ಭಾರತ ಹಾಗೂ  ಶ್ರೀಲಂಕಾ ದೇಶಗಳ ಎಲೆ ಉದುರುವ ಕಾಡುಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಸುಮಾರು  ಮೂರು ಮೀಟರ್ ಎತ್ತರ ಬೆಳೆಯುವ ಇದರ ಕಾಂಡವು   ಕಂದು ಮಿಶ್ರಿತ ಬೂದು ಬಣ್ಣ ಅಥವಾ ಗಾಢ-ಹಸಿರಿನಂತಿದ್ದು ನಯವಾಗಿರುತ್ತದೆ. ಪುಟ್ಟದಾಗಿ ಅಭಿಮುಖವಾಗಿ ಜೋಡಣೆಗೊಂಡಿರುವ ಇದರ ಎಲೆಗಳ ವಿನ್ಯಾಸವು  ಬೆಟ್ಟದ ನೆಲ್ಲಿ ಮರದ ಎಲೆಗಳನ್ನು ಹೋಲುತ್ತವೆ.  ಹುಣಸೆ ಮರದ ಎಲೆಗಳಂತೆ ಸಂಯುಕ್ತ ಎಲೆಗಳ ಕಾಂಡದ ಕೆಳಭಾಗದಲ್ಲಿ ಸಣ್ಣ ಹಸಿರು ಮಿಶ್ರಿತ ಬಿಳಿ ಹೂಗಳನ್ನು ಆಗಸ್ಟ್ ನಿಂದ ಅಕ್ಟೋಬರ್ ತಿಂಗಳವರೆಗೆ ಬಿಡುತ್ತವೆ. ಕೃಷ್ಣನೆಲ್ಲಿಯ ಬೀಜಗಳು ಹಸಿರು ಬಣ್ಣವಿದ್ದು ತ್ರಿಕೋನಾಕಾರದಲ್ಲಿರುತ್ತವೆ. ಇದರ ತೊಗಟೆ ಮತ್ತು ಎಲೆಗಳನ್ನು ಉರಿ, ಊತಗಳಂತಹ ನಿವಾರಣೆಯ ಔಷದಿಯಾಗಿ ಕೂಡ ಬಳಸಲಾಗುವುದು.

Print Friendly, PDF & Email
Spread the love
error: Content is protected.