ಮಾಸ ವಿಶೇಷ – ಹೊಳೆಮತ್ತಿ

ಮಾಸ ವಿಶೇಷ – ಹೊಳೆಮತ್ತಿ

         © ನಾಗೇಶ್ ಓ. ಎಸ್. , ಹೊಳೆಮತ್ತಿ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

ಸಾಮಾನ್ಯ ಹೆಸರು: Arjuna tree
ವೈಜ್ಞಾನಿಕ ಹೆಸರು : Terminalia arjuna

ಹೊಳೆಮತ್ತಿ  ಹೆಸರೇ ಸೂಚಿಸುವಂತೆ ಈ ಮರಗಳು ಹೆಚ್ಚಾಗಿ ಹೊಳೆ, ನದಿ, ತೊರೆ, ದಂಡೆಗಳ ಪಕ್ಕದಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಈ ಮರವನ್ನು ತೊರೆಮತ್ತಿ, ಹೊಳೆ  ನೀರುಮತ್ತಿ  ಎಂದೂ ಕರೆಯುತ್ತಾರೆ. ಇದನ್ನು ನೀರಿನ ದಂಡೆಯ ಹೊರತು ರಸ್ತೆಬದಿ, ಹೊಲ, ತೋಟಗಳಲ್ಲೂ ಕಾಣಬಹುದು.  ಇದು ಸುಮಾರು 60 ರಿಂದ 80 ಅಡಿಗಳ ಎತ್ತರದ ತನಕ ಬೆಳೆಯುವ ಮರವಾಗಿದ್ದು, ಇದರ ಕಾಂಡವು ಬಿಳಿ, ಕಂದು ಹಾಗೂ  ನಸುಗೆಂಪು ಬಣ್ಣಗಳಿಂದ ಕೂಡಿದೆ. ವರ್ಷವಿಡೀ ಹಸಿರಿನಿಂದ ಕೂಡಿರುವ ಈ ಮರವು ಮಾರ್ಚ್ ನಿಂದ  ಜೂನ್ ತಿಂಗಳ ಅವಧಿಯಲ್ಲಿ ಹೂ ಬಿಡುತ್ತದೆ. ಬಿಳಿಯ ಪುಟ್ಟ ಪುಟ್ಟ ಹೂಗಳ ಗೊಂಚಲುಗಳು ನೋಡಲು ಬಿಳಿಯ ಕಡ್ಡಿಗಳಂತೆ ಕಾಣುತ್ತವೆ. ಇದರ ಕಾಯಿಗಳು ನಯವಾದ ಐದು ರೆಕ್ಕೆಗಳಿಂದಾಗಿದ್ದು, ಹಸಿರು, ಕೆಂಪು ಬಣ್ಣಗಳಿಂದ ಸುಂದರವಾಗಿ ಕಾಣುತ್ತವೆ. ಈ ಮರದ ವಿಶೇಷತೆ ಎಂದರೆ ಇದರ  ಔಷಧೀಯ ಗುಣಗಳು. ಈ ಮರದ ತೊಗಟೆ ಹಾಗೂ ಎಲೆಗಳನ್ನು ಹೃದಯ ಸಂಬಂಧಿ ಖಾಯಿಲೆಗಳಿಗೆ ಔಷಧಿಯಾಗಿ ಬಳಸುತ್ತಾರೆ. ಅಲ್ಲದೆ ಇನ್ನಿತರ ಹಲವಾರು ಖಾಯಿಲೆಗಳಿಗೆ ಈ ಮರದ ತೊಗಟೆಯನ್ನು ಔಷಧಿಯಾಗಿ ಬಳಸುತ್ತಾರೆ.

Print Friendly, PDF & Email
Spread the love
error: Content is protected.