ಮಾಸ ವಿಶೇಷ – ಆಕಾಶ ಮಲ್ಲಿಗೆ

ಮಾಸ ವಿಶೇಷ – ಆಕಾಶ ಮಲ್ಲಿಗೆ

         © ಮಹದೇವ ಕೆ. ಸಿ , ಆಕಾಶ ಮಲ್ಲಿಗೆ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

ಸಾಮಾನ್ಯ ಹೆಸರು: Indian cork tree
ವೈಜ್ಞಾನಿಕ ಹೆಸರು : Millingtonia hortensis

ಭಾರತದ ಬಹುತೇಕ ಜಾಗಗಳಲ್ಲಿ ಸಾಮಾನ್ಯವಾಗಿ ಕಾಣಸಿಗುವ ಈ ಮರ, ಮೂಲತಃ ದಕ್ಷಿಣ ಏಷ್ಯಾದ್ದಾಗಿದೆ. ಸುಮಾರು 18 ರಿಂದ 25 ಮೀಟರ್ ಎತ್ತರಕ್ಕೆ ಬೆಳೆಯುವ ಈ ಮರವನ್ನು, ಕಾಡುಗಳಲ್ಲಿ ಮಾತ್ರವಲ್ಲದೆ ರಸ್ತೆ ಬದಿಯ ಸಾಲುಮರಗಳಾಗಿ ಹಾಗೂ ತೋಟಗಳಲ್ಲಿ ಅಲಂಕಾರಿಕ ಮರವಾಗಿಯೂ ಕಾಣಬಹುದು. ಮರದ ಕಾಂಡ ಹಳದಿ ಮಿಶ್ರಿತ ಕಂದು ಬಣ್ಣದಲ್ಲಿದ್ದು, ಮರದ ತೊಗಟೆ ಬಿರುಕು ಬಿಟ್ಟಂತೆ ಕಾಣುತ್ತದೆ. ಜನವರಿ-ಮಾರ್ಚ್ ತಿಂಗಳುಗಳ ನಡುವೆ ಎಲೆಗಳೆಲ್ಲಾ ಒಣಗಿ ಉದುರಿದ ನಂತರ ಏಪ್ರಿಲ್ ತಿಂಗಳಲ್ಲಿ ಕಡು ಹಸಿರು ಬಣ್ಣದ ಸಂಯುಕ್ತ ಮತ್ತು ಪರ್ಯಾಯ ಎಲೆಗಳನ್ನು ಬಿಡುತ್ತವೆ. ಇವು ವರ್ಷದ  ಏಪ್ರಿಲ್-ಮೇ ಮತ್ತು ನವೆಂಬರ್-ಡಿಸೆಂಬರ್ ತಿಂಗಳುಗಳಲ್ಲಿ ಎರಡು ಬಾರಿ ಸುಮಾರು 8 ಸೆಂ.ಮೀ ನಷ್ಟು ಉದ್ದದ ಸುಗಂಧ ಭರಿತ ಬಿಳಿಬಣ್ಣದ ಹೂಗಳನ್ನು ಬಿಡುತ್ತವೆ.

Print Friendly, PDF & Email
Spread the love
error: Content is protected.