ನೀವೂ ಕಾನನಕ್ಕೆ ಬರೆಯಬಹುದು

ನಮ್ಮ ಪ್ರಕೃತಿ ಹಲವು ಅಚ್ಚರಿಗಳ ಆಗರ. ಗಿಡ-ಮರ, ಪ್ರಾಣಿ-ಪಕ್ಷಿ, ಬೆಟ್ಟ-ಗುಡ್ಡ ಎಲ್ಲವೂ ನಿಸರ್ಗದ ಪಕ್ವತೆಗೆ ಹಿಡಿದ ಕೈಗನ್ನಡಿ. ಇಲ್ಲಿ ಒಂದೊಂದು ಅಣುವೂ, ಕಣ ಕಣವೂ ಸರಿಯಾದ ಪ್ರಮಾಣದಲ್ಲಿ ಸಂಯೋಜನೆ ಹೊಂದಿ ಪ್ರಕೃತಿ ಇಷ್ಟೊಂದು ಸುಂದರವಾಗಿ ನಿರ್ಮಿತವಾಗಿದೆ. ಜೀವಿಯ ಜೀವನಚಕ್ರದಲ್ಲಿ ಉಸಿರಾಟ, ಆಹಾರ ಸೇವನೆ, ಬೆಳವಣಿಗೆ, ಸಂತಾನೋತ್ಪತ್ತಿ ಹೀಗೆ ಬೇರೆ ಬೇರೆ ಹಂತಗಳು ಪ್ರತಿಯೊಂದು ಜೀವಿಗೂ ವಿಭಿನ್ನ ಮತ್ತು ವಿಸ್ಮಯ. ಆಹಾರ ಸರಪಳಿಯಲ್ಲಿ ಸ್ವಪೋಷಕಗಳು ಮತ್ತು ಪರಾವಲಂಬಿಗಳ ನಡುವಿನ ಕೊಂಡಿ ಪರಿಸರ ವ್ಯವಸ್ಥೆಯ ಮುಖ್ಯ ಭಾಗವಾಗಿದೆ. ಪರಿಸರ ವ್ಯವಸ್ಥೆಯ ಸಮತೋಲನವನ್ನು ಕಾಪಾಡುವಲ್ಲಿ ಸಸ್ಯಾಹಾರಿಗಳು ಮತ್ತು ಮಾಂಸಹಾರಿಗಳ ಅನುಪಾತ ಬಹಳ ಮುಖ್ಯವಾಗುತ್ತದೆ. ಜೀವವೈವಿಧ್ಯತೆಯನ್ನು ಕಾಪಾಡುವಲ್ಲಿ ಹುಲಿ, ಸಿಂಹ, ಚಿರತೆ, ಜಾಗ್ವಾರ್ ಗಳಂತಹ ಮಾಂಸಾಹಾರಿ ಪ್ರಾಣಿಗಳು ಮುಖ್ಯಪಾತ್ರವಹಿಸುತ್ತದೆ. ಚಿರತೆಯನ್ನು ಹೋಲುವ ಜಾಗ್ವರ್ ಗಳು ಅಮೆರಿಕ, ಏಷ್ಯಾ, ಆಫ್ರಿಕಾಗಳಲ್ಲಿ ಹೆಚ್ಚು ಕಂಡುಬರುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಅವುಗಳ ಆವಾಸಗಳ ನಾಶ, ಬೇಟೆ, ಪ್ರಾಣಿ-ಮನುಷ್ಯ ಸಂಘರ್ಷಗಳ ಕಾರಣದಿಂದ ಇವುಗಳ ಸಂತತಿ ಕ್ಷೀಣಿಸುತ್ತಿದೆ. ಜಾಗ್ವರ್ ಗಳ ಅಳಿವಿನಿಂದ ಪ್ರಕೃತಿಯಲ್ಲಿ ಉಂಟಾಗಬಹುದಾದ ಪರಿಸರ ಅಸಮತೋಲನತೆಯ ಬಗ್ಗೆ ಅರಿವು ಮೂಡಿಸಲು ನವೆಂಬರ್ 29 ಅನ್ನು ವಿಶ್ವ ಜಾಗ್ವಾರ್ ದಿನವನ್ನಾಗಿ ಆಚರಿಸಲಾಗುತ್ತದೆ.

ಈ ರೀತಿಯ ಪರಿಸರದ ಬಗೆಗಿನ ಮಾಹಿತಿಯನ್ನು ಒದಗಿಸಲು ಇರುವ ಕಾನನ ಇ-ಮಾಸಿಕಕ್ಕೆ ಮುಂದಿನ ತಿಂಗಳ ಪ್ರತಿಗೆ ಲೇಖನಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಪರಿಸರಕ್ಕೆ ಸಂಬಂಧಿಸಿದ ಕಥೆ, ಕವನ, ಛಾಯಾಚಿತ್ರ, ಚಿತ್ರಕಲೆ, ಪ್ರವಾಸ ಕಥನಗಳನ್ನು ಕಾನನ ಮಾಸಿಕದ ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು.

ಕಾನನ ಪತ್ರಿಕೆಯ ಇ-ಮೇಲ್ ವಿಳಾಸ: [email protected]
ಅಂಚೆ ವಿಳಾಸ:
Study House,
ಕಾಳೇಶ್ವರಿ ಗ್ರಾಮ,
ಆನೇಕಲ್ ತಾಲ್ಲೂಕು,
ಬೆಂಗಳೂರು ನಗರ ಜಿಲ್ಲೆ,
ಪಿನ್ ಕೋಡ್ :560083. ಗೆ ಕಳಿಸಿಕೊಡಬಹುದು.

Print Friendly, PDF & Email
Spread the love
error: Content is protected.