ನೀವೂ ಕಾನನಕ್ಕೆ ಬರೆಯಬಹುದು

ಸುಂದರ ಸೃಷ್ಟಿಯಾದ ಭೂರಮೆಯು ಹಸಿರನ್ನು ಉಸಿರಾಗಿಸಿ, ಇಲ್ಲಿನ ಜೀವ ವೈವಿಧ್ಯತೆಗಳಿಂದ ಕಂಗೊಳಿಸುತ್ತಿದೆ. ಜೀವಿಗಳಿರುವ ಏಕೈಕ ಗ್ರಹವಾದ ಭೂಮಿಯು 4.6 ಬಿಲಿಯನ್ ವರ್ಷಗಳ ಹಿಂದೆ ಸೃಷ್ಟಿಯಾಗಿದ್ದು, ಎಣಿಕೆಗೂ ಸಿಗದಷ್ಟು ಜೀವಸಂಕುಲಗಳನ್ನು ಹೊಂದಿದೆ. ಪ್ರತಿದಿನವೂ ಹೊಸದನ್ನು ಅನ್ವೇಷಿಸಲು ವಿಜ್ಞಾನಿಗಳಿಗೆ ಪ್ರೇರಣೆಯಾಗುತ್ತಿದೆ.

ಜೀವಿಗಳು ಜೀವಿಸಲು ಅವಶ್ಯಕವಿರುವ ಮೂಲಭೂತ ಸೌಕರ್ಯಗಳು ಭೂಮಿಯ ಮೇಲೆ ಸಿದ್ಧವಾದ ನಂತರ ಒಂದೊಂದೇ ಜೀವಿಗಳು ಆಗಮಿಸಲಾರಂಭಿಸಿದವು. ಸಮುದ್ರದಲ್ಲಿ ಆಮ್ಲಜನಕ ಮತ್ತು ವಾತಾವರಣ ಸಿದ್ಧವಾದಾಗ ಜಲಚರಗಳು ಜನಿಸಿದವು, ನಂತರ ಭೂಮಿಯ ಮೇಲೆ ಗಿಡಗಳು ಬೆಳೆಯಲಾರಂಭಿಸಿದವು. ಕಾಡುಗಳು ಸೃಷ್ಟಿಯಾದವು. ನಿಧಾನಗತಿಯಲ್ಲಿ ಕಶೇರುಕಗಳು ಪ್ರಾರಂಭವಾದವು. ನಂತರ ಉಭಯವಾಸಿಗಳು, ಸರೀಸೃಪಗಳು, ಹಾರುವ ಸರೀಸೃಪಗಳು ಬರಲಾರಂಭಿಸಿದವು. ದೈತ್ಯ ಜೀವಿಗಳಾದ ಡೈನೋಸರ್ ಗಳ ಅಂತ್ಯವಾದ ನಂತರ ಸಸ್ತನಿಗಳು ಅಭಿವೃದ್ಧಿ ಹೊಂದಿದವು. ಪ್ರಾಣಿಗಳ ಇತಿಹಾಸ ಇಷ್ಟಿದ್ದರೂ, ಕೊನೆಯದಾಗಿ ಬಂದು, ಇತರ ಜೀವಿಗಳಿಗಿಂತ ಬುದ್ಧಿಶಕ್ತಿಯಿಂದ ಭಿನ್ನವೆಂದು ಬಿಂಬಿಸಲ್ಪಡುವ ‘ಮಾನವ’, ತಾನು ಪ್ರಕೃತಿಯ ಭಾಗವೆಂಬುದನ್ನು ಮರೆತು ಪ್ರಕೃತಿಯನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಾನೆ. ಪ್ರಾಣಿಗಳನ್ನು ತನ್ನ ಇಚ್ಛೆಯಂತೆ ನಡೆಸಿಕೊಳ್ಳುವುದು, ಕೊಲ್ಲುವುದು ಹೆಚ್ಚಾಗುತ್ತಿದೆ. ಹೀಗೇ ಮುಂದುವರೆದರೆ ಮುಂದೊಂದು ದಿನ ಪರಿಸರ ದಲ್ಲಿ ಅಸಮತೋಲನ ಉಂಟಾಗಿ ಮುಂದೆ ಏನಾಗುವುದು ಎಂಬುದನ್ನು ಊಹಿಸುವುದು ಸಹ ಕಷ್ಟವಿದೆ. ಹಾಗಾಗಿ ಇನ್ನು ಮುಂದಾದರೂ ಪ್ರಾಣಿಗಳೂ ನಮ್ಮಂತೆಯೇ ಪ್ರಕೃತಿಯ ಭಾಗವೆಂದು ಅರಿತು ಅವುಗಳ ರಕ್ಷಣೆಗೆ ಮುಂದಾಗಬೇಕಿರುವುದು ಈಗಿನ ತುರ್ತಾಗಿದೆ. ಇದರ ನಿಮಿತ್ತ ಪ್ರತಿವರ್ಷ ಅಕ್ಟೋಬರ್ 4 ನ್ನು ವಿಶ್ವ ಪ್ರಾಣಿ ದಿನವನ್ನಾಗಿ ಆಚರಿಸಲಾಗುತ್ತದೆ.

ಈ ರೀತಿಯ ಪರಿಸರದ ಬಗೆಗಿನ ಮಾಹಿತಿಯನ್ನು ಒದಗಿಸಲು ಇರುವ ಕಾನನ ಇ-ಮಾಸಿಕಕ್ಕೆ ಮುಂದಿನ ತಿಂಗಳ ಪ್ರತಿಗೆ ಲೇಖನಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಪರಿಸರಕ್ಕೆ ಸಂಬಂಧಿಸಿದ ಕಥೆ, ಕವನ, ಛಾಯಾಚಿತ್ರ, ಚಿತ್ರಕಲೆ, ಪ್ರವಾಸ ಕಥನಗಳನ್ನು ಕಾನನ ಮಾಸಿಕದ ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು.

ಕಾನನ ಪತ್ರಿಕೆಯ ಇ-ಮೇಲ್ ವಿಳಾಸ: [email protected]
ಅಂಚೆ ವಿಳಾಸ:
Study House,
ಕಾಳೇಶ್ವರಿ ಗ್ರಾಮ,
ಆನೇಕಲ್ ತಾಲ್ಲೂಕು,
ಬೆಂಗಳೂರು ನಗರ ಜಿಲ್ಲೆ,
ಪಿನ್ ಕೋಡ್ :560083. ಗೆ ಕಳಿಸಿಕೊಡಬಹುದು.

Print Friendly, PDF & Email
Spread the love
error: Content is protected.