ನೀವೂ ಕಾನನಕ್ಕೆ ಬರೆಯಬಹುದು

ಜೀವಿಗಳ ಜೀವನದ ಮೂಲಾಧಾರ ಆಹಾರ. ಪ್ರತಿಯೊಂದು ಜೀವಿಯು ಆಹಾರಕ್ಕಾಗಿ ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಸಸ್ಯಗಳ ಮೇಲೆ ಅವಲಂಬಿತವಾಗಿರುತ್ತದೆ. ನಾವು ತಿನ್ನುವ ಶೇಕಡಾ ಎಪ್ಪತ್ತರಷ್ಟು ಬೆಳೆಗಳು ಬೆಳೆಯಲು ಮೂಲ ಕಾರಣ ಕೆಲವು ಪರಿಸರಸ್ನೇಹಿ ಕೀಟಗಳು. ಇವುಗಳಲ್ಲಿ ಜೇನುನೊಣಗಳು ಅಗ್ರ ಸ್ಥಾನ ಪಡೆಯುತ್ತವೆ. ಜೇನುನೊಣಗಳಿಗೆ ಸುಮಾರು ನೂರು ಮಿಲಿಯನ್ ವರ್ಷಗಳ ಇತಿಹಾಸವಿದ್ದು, ವಿಶ್ವದಲ್ಲಿ ಇಪ್ಪತ್ತು ಸಾವಿರಕ್ಕೂ ಹೆಚ್ಚಿನ ಪ್ರಬೇಧಗಳಿವೆ. ಜೇನುಹುಳುಗಳು ತಮ್ಮ ಮರಿಗಳ ಆಹಾರಕ್ಕಾಗಿ ಹೂವಿಂದ ಹೂವಿಗೆ ಹಾರಿ ಮಕರಂದವನ್ನು ಸಂಗ್ರಹಿಸುತ್ತವೆ, ಹೀಗೆ ಮಾಡುವಾಗ ತಮಗೆ ಅರಿವಿಲ್ಲದೆ ಸಸ್ಯಗಳ ಪರಾಗ ಕಣಗಳನ್ನು ವಿತರಿಸಿ ಸಸ್ಯಗಳ ಸಂತಾನೋತ್ಪತ್ತಿಗೆ ನೆರವಾಗುವುದರೊಂದಿಗೆ ಅನೇಕ ಜೀವಿಗಳಿಗೆ ಆಹಾರವನ್ನು ಒದಗಿಸುತ್ತದೆ.

ಜೇನ್ನೊಣಗಳು ಗೂಡು ಕಟ್ಟುವ ಕಲೆ ಮತ್ತು ಗುಂಪಿನಲ್ಲಿ ಕೆಲಸ ಮಾಡುವ ವಿಧಾನ, ಆಹಾರ ಹುಡುಕುವಾಗ ಮಾಡುವ ವಿಶಿಷ್ಟ ನೃತ್ಯ ಎಲ್ಲವೂ ವಿಸ್ಮಯ ಮತ್ತು ಕುತೂಹಲ. ನೈಸರ್ಗಿಕವಾಗಿ ಸಿಗುವ ಸಿಹಿ ಪದಾರ್ಥ ಮತ್ತು ಹೆಚ್ಚು ಶತಮಾನಗಳವರೆಗೂ ಕೆಡದಂತೆ ಸಂರಕ್ಷಿಸಬಹುದಾದ ಜೇನಿಗೆ ಹೆಚ್ಚು ಬೇಡಿಕೆಯಿದ್ದು ಇದರಲ್ಲಿರುವ ಔಷಧಿಗಳಿಗಾಗಿ, ಜೇನು ಸಾಗಾಣಿಕೆಯನ್ನು  ಅನೇಕರು ವಾಣಿಜ್ಯೋದ್ಯಮವಾಗಿಸಿಕೊಂಡಿದ್ದಾರೆ. ಪರಿಸರ ವ್ಯವಸ್ಥೆಯಲ್ಲಿ ಸಮತೋಲನವನ್ನು ಕಾಪಾಡುವಲ್ಲಿ ಮುಖ್ಯ ಪಾತ್ರವಹಿಸುವ ಜೇನುನೊಣಗಳು ಅನೇಕ ಕಾರಣಗಳಿಂದ ನಾಶವಾಗುತ್ತಿವೆ. ಅವುಗಳ ಆವಾಸಗಳ ನಾಶ, ಕೀಟನಾಶಕಗಳ ಬಳಕೆ, ಜಾಗತಿಕ ತಾಪಮಾನ ಏರಿಕೆಗಳು ಮುಖ್ಯ ಕಾರಣವೆಂದು ತಜ್ಞರು ಊಹಿಸಿದ್ದಾರೆ. ಜೇನುನೊಣಗಳ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಲು ಆಗಸ್ಟ್ 22 ರಾಷ್ಟ್ರೀಯ ಜೇನುಹುಳುಗಳ ದಿನವನ್ನಾಗಿ ಆಚರಿಸಲಾಗುತ್ತದೆ.

ಹಾಗಾಗಿ ನೀವು ಬರೆದ ಪರಿಸರ ಲೇಖನಗಳು ಹಾಗೂ ಕವನಗಳನ್ನ ನಮ್ಮ ಈ ಇ-ಮಾಸಿಕಕ್ಕೆ ಆಗಸ್ಟ್ 15ರ ಒಳಗಾಗಿ ಈ ಕೆಳಗಿನ ವಿಳಾಸಕ್ಕೆ ಅಥವಾ ನಮ್ಮ ಇ ಮೇಲ್ ವಿಳಾಸಕ್ಕೆ ಕಳುಹಿಸಿಕೊಡಿ.

ಕಾನನ ಪತ್ರಿಕೆಯ ಇ-ಮೇಲ್ ವಿಳಾಸ: [email protected]
ಅಂಚೆ ವಿಳಾಸ:
Study House,
ಕಾಳೇಶ್ವರಿ ಗ್ರಾಮ,
ಆನೇಕಲ್ ತಾಲ್ಲೂಕು,
ಬೆಂಗಳೂರು ನಗರ ಜಿಲ್ಲೆ,
ಪಿನ್ ಕೋಡ್ :560083. ಗೆ ಕಳಿಸಿಕೊಡಬಹುದು.

Print Friendly, PDF & Email
Spread the love
error: Content is protected.