ನೀವೂ ಕಾನನಕ್ಕೆ ಬರೆಯಬಹುದು

“ಮೂಲತೋ ಬ್ರಹ್ಮರೂಪಾಯ, ಮಧ್ಯತೋ ವಿಷ್ಣು ರೂಪಿಣಿ, ಅಗ್ರತೋ ಶಿವ ರೂಪಾಯ, ವೃಕ್ಷರಾಜಾಯ ನಮಃ”. ಎಂದು ಪುರಾಣಗಳಲ್ಲಿ ಉಲ್ಲೇಖವಿದೆ.


ವೃಕ್ಷೋ ರಕ್ಷತಿ ರಕ್ಷಿತಃ  ಎಂಬಂತೆ ಒಂದು ಮರದ ಪ್ರಮುಖ್ಯತೆ    ನಮ್ಮೆಲ್ಲರಿಗೂ ತಿಳಿದಿದೆ.
ಕಳೆದ ವರ್ಷ 2019ನ್ನು  ಒಮ್ಮೆ ನೆನೆದರೆ ಫೆಬ್ರವರಿ ತಿಂಗಳಲ್ಲಿ ಸಂಭವಿಸಿದ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಆದ ಕಾಡ್ಗಿಚ್ಚಿನ ಪರಿಣಾಮದ ಬಿಸಿ ಉಸಿರು ಕಟ್ಟಿಸುವಂತದ್ದು. ಈ ಕಾಡ್ಗಿಚ್ಚಿನ ಕಾವು ನಿಧಾನವಾಗಿ ಸರಿಯುತ್ತಿದೆ ಎಂದು ನಿಟ್ಟುಸಿರು ಬಿಡುತ್ತಾ ಹೊಸವರ್ಷ 2020 ನ್ನು ಸಂತೋಷದಿಂದ ಸ್ವಾಗತಿಸಿದ ನಮಗೆಲ್ಲ ಮಾಧ್ಯಮಗಳು ಬಿತ್ತರಿಸಿದ ಆಸ್ಟ್ರೇಲಿಯಾದ ಕಾಡ್ಗಿಚ್ಚು, ಪ್ರಾಣ ಹಾನಿಗಳು ಕರಳನ್ನು ಚುರುಗುಟ್ಟುವಂತೆ ಮಾಡಿತು. ಈ ಕಾಡ್ಗಿಚ್ಚಿಗೆ ಅನೇಕ ಕಾರಣಗಳನ್ನು ಸಂಶೋಧಕರು ತಿಳಿಸಿದ್ದು, ಒಣ ಹವಾಮಾನ, ಮಿಂಚುಗಳು, ಜ್ವಾಲಾಮುಖಿ ಸ್ಫೋಟಗಳು ಪ್ರಾಕೃತಿಕ ಕಾರಣಗಳಾದರೆ, ಮಾನವನಿಂದ ಆಗುತ್ತಿರುವ ಅರಣ್ಯನಾಶ ಇನ್ನೊಂದು ಮುಖ್ಯ ಕಾರಣವೆಂಬುದನ್ನು ಕಡೆಗಣಿಸಲಾಗದಂತಹ ಕಟುಸತ್ಯ.

ಜೀವವಿಕಾಸದ ಹಾದಿಯನ್ನು ಒಮ್ಮೆ ನೆನೆದರೆ ಸಕಲ ಜೀವರಾಶಿಗಳಲ್ಲಿ ಹೆಚ್ಚು ಇತಿಹಾಸ ಹೊಂದಿರುವ ಜೀವಿಗಳು ಮರಗಿಡಗಳು. ಜೀವಿಗಳಿರುವ ಏಕೈಕ ಗ್ರಹವಾದ ಭೂಮಿಯಲ್ಲಿ ಶೇಕಡ ಎಂಭತ್ಮೂರರಷ್ಟು ಜೀವರಾಶಿಗಳಿಗೆ ಆಹಾರ, ಆಶ್ರಯ ಒದಗಿಸುವುದರಲ್ಲಿ ಕಾಡುಗಳ ಪಾತ್ರ ಬಹಳ ಮುಖ್ಯವಾದುದು.

ಗೆಡ್ಡೆಗೆಣಸು, ಹಸಿಮಾಂಸ  ತಿನ್ನುತ್ತಿದ್ದ ಆದಿಮಾನವರ ಜೀವನ ಶೈಲಿಯನ್ನು ಗಮನಿಸಿದಾಗ ಅವರು ತಮ್ಮ ಜೀವನ ನಡೆಸಲು ಪ್ರಕೃತಿಯ ಮುಖ್ಯ ಭಾಗವಾದ ಕಾಡನ್ನು ಅವಲಂಬಿಸಿದ್ದದು ನಮ್ಮೆಲ್ಲರಿಗೂ ತಿಳಿದಿದೆ. ಗಿಡಮೂಲಿಕೆಗಳು, ಸೌದೆ ಅನೇಕ ಜೀವಿಗಳಿಗೆ ಜೀವನಾಧಾರವನ್ನು ಒದಗಿಸುವ ಕಾಡುಗಳು ಪರಿಸರ ವ್ಯವಸ್ಥೆಯನ್ನು ಕಾಪಾಡುವಲ್ಲಿ, ಮಣ್ಣಿನ ಸವಕಳಿಯನ್ನು ತಡೆಯುವುದರಲ್ಲಿ, ಮಾಲಿನ್ಯ ನಿಯಂತ್ರಣದಲ್ಲಿ ಗಣನೀಯ ಪಾತ್ರ ವಹಿಸುತ್ತವೆ. ಒಂದು  ದೇಶವು ಜೀವ ವೈವಿಧ್ಯತೆಯಲ್ಲಿ ಸಮೃದ್ಧಿ ಹೊಂದಲು ಶೇಕಡ  ಮೂವತ್ಮೂರರಷ್ಟು ಕಾಡು ಇರಬೇಕು ಎಂಬುದು ಗಮನಿಸಬೇಕಾದ ಅಂಶ. ಇಂತಹ ಕಾಡು ದಿನೇ ದಿನೇ ಕ್ಷೀಣಿಸುತ್ತಿರುವುದು ವಿಪರ್ಯಾಸ. ನಮ್ಮ  ದೇಶದಲ್ಲಿ 24.39%  ನಷ್ಟು ಅರಣ್ಯ ಪ್ರದೇಶವಿದೆ. ಮನೆಗೊಂದು ಮರ ಊರಿಗೊಂದು ವನ ಎಂಬಂತೆ ಪರಿಸರ ರಕ್ಷಣೆಯ ಜವಾಬ್ದಾರಿಯನ್ನು ಜನರಿಗೆ ಅರಿವು ಮೂಡಿಸಲು ಮಾರ್ಚ್ 21, ವಿಶ್ವ ಅರಣ್ಯ ದಿನವನ್ನಾಗಿ ಆಚರಿಸಲಾಗುತ್ತದೆ.     ಹಾಗಾಗಿ ಜೌಗು ಪ್ರದೇಶ ಹಾಗು ಅವುಗಳ ಮಹತ್ವವನ್ನ ತಿಳಿಸುವ ಲೇಖನಗಳು ಹಾಗೂ ಕವನಗಳನ್ನ ನಮ್ಮ ಈ ಇ-ಮಾಸಿಕಕ್ಕೆ ಫೆಬ್ರವರಿ 15ರ ಒಳಗಾಗಿ ಈ ಕೆಳಗಿನ ವಿಳಾಸಕ್ಕೆ ಅಥವಾ ನಮ್ಮ ಇ ಮೇಲ್ ವಿಳಾಸಕ್ಕೆ ಕಳುಹಿಸಿಕೊಡಿ.

ಕಾನನ ಪತ್ರಿಕೆಯ ಇ-ಮೇಲ್ ವಿಳಾಸ: [email protected]
ಅಂಚೆ ವಿಳಾಸ:
Study House,
ಕಾಳೇಶ್ವರಿ ಗ್ರಾಮ,
ಆನೇಕಲ್ ತಾಲ್ಲೂಕು,
ಬೆಂಗಳೂರು ನಗರ ಜಿಲ್ಲೆ,
ಪಿನ್ ಕೋಡ್ :560083. ಗೆ ಕಳಿಸಿಕೊಡಬಹುದು.

Print Friendly, PDF & Email
Spread the love
error: Content is protected.