ನೀವೂ ಕಾನನಕ್ಕೆ ಬರೆಯಬಹುದು

ನೀವೂ ಕಾನನಕ್ಕೆ ಬರೆಯಬಹುದು

© ಹಯಾತ್ ಮೊಹಮ್ಮದ್

 ಪ್ರಪಂಚದ ವಿವಿಧ ಭಾಗಗಳಲ್ಲಿ ಮೀನು ಜನರ ಪ್ರಮುಖ ಆಹಾರವಾಗಿದೆ. ಮೀನುಗಾರರ ಸಮುದಾಯವು ಸಮುದ್ರ ಮತ್ತು ಇತರ ಜಲ ವ್ಯವಸ್ಥೆಗಳೊಡನೆ ಅವಿನಾಭಾವ ಸಂಬಂಧವನ್ನು ಹೊಂದಿದ್ದು, ವ್ಯಾಪಾರ ಮತ್ತು ವಾಣಿಜ್ಯ ವಹಿವಾಟಿನಲ್ಲಿ ಮೈಲಿಗಲ್ಲು ಸಾಧಿಸಬಹುದಾಗಿದೆ. ಆದರೆ ಇಂದು ಮೀನುಗಾರಿಕೆ ಉದ್ಯಮವು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಅವೈಜ್ಞಾನಿಕ ಮತ್ತು ಅತಿಯಾದ ಮೀನುಗಾರಿಕಾ ಚಟುವಟಿಕೆಗಳು ಆವಾಸಸ್ಥಾನಗಳ ನಾಶಕ್ಕೆ ಕಾರಣವಾಗುತ್ತಿವೆ. ಸಮುದ್ರಗಳು ಮತ್ತು ಸಾಗರಗಳಲ್ಲಿ ನೀಲಿ, ಹಸಿರು ಪಾಚಿಗಳ ಬೆಳವಣಿಗೆ, ತೈಲ ಸೋರಿಕೆ, ಪ್ಲಾಸ್ಟಿಕ್ ಮಾಲಿನ್ಯ, ಜಾಗತಿಕ ತಾಪಮಾನ ಏರಿಕೆ, ವಿಷಕಾರಿ ರಾಸಾಯನಿಕಗಳ ಬಳಕೆ, ಮೀನುಗಳನ್ನು ಅಳಿವಿನಂಚಿಗೆ ತರಬಹುದಾದ ಎಲ್ಲಾ ಸಾಧ್ಯತೆಗಳನ್ನು ಕಲ್ಪಿಸಿವೆ. ಈ ನಿಟ್ಟಿನಲ್ಲಿ ನವೆಂಬರ್ 21ರಂದು ಅಂತರರಾಷ್ಟ್ರೀಯ ಮೀನುಗಾರಿಕೆ ದಿನವೆಂದು ಆಚರಿಸಲಾಗುತ್ತದೆ. ಈ ಆಚರಣೆಯ ಮೂಲ ಉದ್ದೇಶ, ಮೀನುಗಳ ಸಂತತಿಯನ್ನು ರಕ್ಷಿಸಲು ವೈಜ್ಞಾನಿಕ ಮೀನುಗಾರಿಕೆಯ ವಿಧಾನಗಳನ್ನು ಪ್ರೋತ್ಸಾಹಿಸಿ ಉತ್ತಮ ಅವಕಾಶಗಳನ್ನು ಕಲ್ಪಿಸುವುದು, ವ್ಯಾಪಾರ ಮತ್ತು ಸಮುದಾಯಗಳ ಪ್ರಾಚೀನ ಇತಿಹಾಸವನ್ನು ಸಂರಕ್ಷಿಸುವುದು, ಪರಿಸರದೊಂದಿಗಿನ ಸಹಬಾಳ್ವೆಯನ್ನು ಎತ್ತಿ ಹಿಡಿಯುವುದು ಇತ್ಯಾದಿ. 2022ರ ಘೋಷವಾಕ್ಯ ಇದಾಗಿದೆ ‘ಸುಸ್ಥಿರ ಮೀನುಗಾರಿಕೆ: ಸರ್ವರಿಗೂ ಉತ್ತಮ ಭವಿಷ್ಯದ ನಿರ್ಮಾಣ’ ‘Sustainable Fisheries: Building a Future for Everyone.” ಜನರಲ್ಲಿ ಜಾಗೃತಿಯನ್ನು ಮೂಡಿಸುವ ಸಲುವಾಗಿ ವಿಶ್ವದಾದ್ಯಂತ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಪ್ರದರ್ಶನಗಳನ್ನು ಆಯೋಜಿಸಲಾಗುತ್ತಿದೆ. ಈ ವಿಶ್ವ ಮೀನುಗಾರಿಕಾ ದಿನ, ಸುಸ್ಥಿರವಾದ ಮೀನುಗಾರಿಕೆ ಉದ್ಯಮವನ್ನು ಬೆಂಬಲಿಸಿ, ಪರಿಸರ ಸಮತೋಲನದಲ್ಲಿ ಭಾಗಿಯಾಗುವ ಪ್ರತಿಜ್ಞೆ ಮಾಡಿ ಸಧೃಡ ಅಭ್ಯುದಯಕ್ಕೆ ನಾಂದಿ ಹಾಡೋಣ.

 ಈ ರೀತಿಯ ಪರಿಸರದ ಬಗೆಗಿನ ಮಾಹಿತಿಯನ್ನು ಒದಗಿಸಲು ಇರುವ ಕಾನನ ಇ-ಮಾಸಿಕಕ್ಕೆ ಮುಂದಿನ ತಿಂಗಳ ಪ್ರತಿಗೆ ಲೇಖನಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಪರಿಸರಕ್ಕೆ ಸಂಬಂಧಿಸಿದ ಕಥೆ, ಕವನ, ಛಾಯಾಚಿತ್ರ, ಚಿತ್ರಕಲೆ, ಪ್ರವಾಸ ಕಥನಗಳನ್ನು ಕಾನನ ಮಾಸಿಕದ ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು.

ಕಾನನ ಪತ್ರಿಕೆಯ ಇ-ಮೇಲ್ ವಿಳಾಸ: [email protected]
ಅಂಚೆ ವಿಳಾಸ:

ಅಡವಿ ಫೀಲ್ಡ್ ಸ್ಟೇಷನ್,
ಒಂಟೆಮಾರನ ದೊಡ್ಡಿ ಗ್ರಾಮ ,
ರಾಗಿಹಳ್ಳಿ ಅಂಚೆ,
ಜಿಗಣಿ ಹೋಬಳಿ,
ಆನೇಕಲ್ ತಾಲ್ಲೂಕು ,
ಬೆಂಗಳೂರು ನಗರ ಜಿಲ್ಲೆ
ಪಿನ್ ಕೋಡ್ :560083. ಗೆ ಕಳಿಸಿಕೊಡಬಹುದು.

Print Friendly, PDF & Email
Spread the love
error: Content is protected.