ನೀವೂ ಕಾನನಕ್ಕೆ ಬರೆಯಬಹುದು

ಕಡಲ ಆಮೆಗಳು ಸುಮಾರು 10 ಕೋಟಿ ವರ್ಷಗಳ ಹಿಂದಿನವು ಮತ್ತು ಡೈನೋಸಾರ್ ಗಳ ಕಾಲದಲ್ಲೂ ವಾಸಿಸುತ್ತಿದ್ದವು. ಇವುಗಳಿಗೆ ತಮ್ಮ ಆಹಾರವನ್ನು ತಿನ್ನಲು ಹಲ್ಲುಗಳಿಲ್ಲ ಬದಲಿಗೆ ಕೊಕ್ಕಿನಂತಹ ಬಾಯಿಯನ್ನು ಬಳಸುತ್ತವೆ. ಆಮೆಯ ಚಿಪ್ಪುಗಳು 50 ಕ್ಕೂ ಹೆಚ್ಚು ಮೂಳೆಗಳಿಂದ ಮಾಡಲ್ಪಟ್ಟಿದೆ. ಕಡಲ ಆಮೆಗಳು ತುಂಬಾ ದೂರದವರೆಗೆ ವಲಸೆ ಹೋಗುತ್ತವೆ. ಹೆಣ್ಣು ಆಮೆಗಳು ತಮ್ಮ ಮೊಟ್ಟೆಗಳನ್ನು ಇಡಲು ಅವು ಜನಿಸಿದ ಕಡಲತೀರಕ್ಕೆ ಹಿಂತಿರುಗುವುದು ವಿಶೇಷ. ಹವಾಮಾನ ಬದಲಾವಣೆಯಿಂದ ಮರಳಿನ ತಾಪಮಾನವು ಹೆಚ್ಚಾಗುತ್ತಿರುವ ಕಾರಣ ಗಂಡು ಆಮೆಗಳಿಗಿಂತ ಹೆಚ್ಚು ಹೆಣ್ಣು ಆಮೆಗಳು ಜನಿಸುತ್ತಿವೆ. 1,000 ಸಮುದ್ರದ ಆಮೆ ​​ಮರಿಗಳಲ್ಲಿ 1 ಮಾತ್ರ ಉಳಿದುಕೊಳ್ಳುತ್ತದೆ ಎಂದು ಅಂದಾಜಿಸಲಾಗಿದೆ. ಮೊಟ್ಟೆಯಿಂದ ಹಿಡಿದು ದೊಡ್ಡದಾಗುವವರೆಗೂ ಒಂದಲ್ಲ ಒಂದು ರೀತಿಯಲ್ಲಿ ಜೀವನಕ್ಕೋಸ್ಕರ ಹೋರಾಡುತ್ತಿರುತ್ತವೆ. ಇವು ಮೀನುಗಾರಿಕೆಯ ಬಲೆಯಲ್ಲಿ ಆಕಸ್ಮಿಕವಾಗಿ ಸಿಕ್ಕಿಹಾಕಿಕೊಳ್ಳುತ್ತಿವೆ. ಪ್ಲಾಸ್ಟಿಕ್ ಅನ್ನು ಸೇವಿಸುತ್ತಿವೆ. ಈ ರೀತಿಯ ಮಾನವನ ನಿರ್ಲಕ್ಷ್ಯತನವು ಆಮೆಗಳ ಉಳಿವಿಗೆ ಕಂಟಕವಾಗುತ್ತಿದೆ. ಕಡಲ ಆಮೆಗಳ ಬಗ್ಗೆ ಜಾಗೃತಿ ಮೂಡಿಸಲು ಜೂನ್ 16ರಂದು ವಿಶ್ವ ಕಡಲ ಆಮೆ ದಿನವೆಂದು ಆಚರಿಸಲಾಗುತ್ತದೆ.

 ಈ ರೀತಿಯ ಪರಿಸರದ ಬಗೆಗಿನ ಮಾಹಿತಿಯನ್ನು ಒದಗಿಸಲು ಇರುವ ಕಾನನ ಇ-ಮಾಸಿಕಕ್ಕೆ ಮುಂದಿನ ತಿಂಗಳ ಪ್ರತಿಗೆ ಲೇಖನಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಪರಿಸರಕ್ಕೆ ಸಂಬಂಧಿಸಿದ ಕಥೆ, ಕವನ, ಛಾಯಾಚಿತ್ರ, ಚಿತ್ರಕಲೆ, ಪ್ರವಾಸ ಕಥನಗಳನ್ನು ಕಾನನ ಮಾಸಿಕದ ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು.

ಕಾನನ ಪತ್ರಿಕೆಯ ಇ-ಮೇಲ್ ವಿಳಾಸ: [email protected]
ಅಂಚೆ ವಿಳಾಸ:

ಅಡವಿ ಫೀಲ್ಡ್ ಸ್ಟೇಷನ್,
ಒಂಟೆಮಾರನ ದೊಡ್ಡಿ ಗ್ರಾಮ ,
ರಾಗಿಹಳ್ಳಿ ಅಂಚೆ,
ಜಿಗಣಿ ಹೋಬಳಿ,
ಆನೇಕಲ್ ತಾಲ್ಲೂಕು ,
ಬೆಂಗಳೂರು ನಗರ ಜಿಲ್ಲೆ
ಪಿನ್ ಕೋಡ್ :560083. ಗೆ ಕಳಿಸಿಕೊಡಬಹುದು.

Print Friendly, PDF & Email
Spread the love
error: Content is protected.