ನೀವೂ ಕಾನನಕ್ಕೆ ಬರೆಯಬಹುದು

      

ಹಲವಾರು ಮರಗಳು ತಮ್ಮೆಲ್ಲಾ ಎಲೆಗಳನ್ನು ಉದುರಿಸಿಕೊಂಡು ಬೋಡಾಗಿ ನಿಲ್ಲುವುದು ಚಳಿಗಾಲದಲ್ಲಿ. ಈ ಚಳಿಗಾಲವು ಭಾರತದಲ್ಲಿ ಡಿಸೆಂಬರ್ ತಿಂಗಳಲ್ಲಿ ಪ್ರಾರಂಭವಾಗಿ ಫೆಬ್ರವರಿಯಲ್ಲಿ ಕೊನೆಗೊಳ್ಳುತ್ತದೆ. ಚಳಿಗಾಲವನ್ನು ಬೇರೆ ಬೇರೆ ದೇಶದಲ್ಲಿ ವರ್ಷದಲ್ಲಿನ ವಿಭಿನ್ನ ಕಾಲಘಟ್ಟದಲ್ಲಿ ಕಾಣಬಹುದು. ಇನ್ನು ಭೂಮಿಯ ಧೃವ ಪ್ರದೇಶವನ್ನು ವಿಶೇಷವಾಗಿ ಗಮನಿಸುವುದೇ ಆದರೆ ಅಲ್ಲಿ ಅತಿಯಾದ ಚಳಿ ಹಾಗು ಹಿಮಗಡ್ಡೆಗಳಿಂದ ಕೂಡಿರುವುದನ್ನು ಕಾಣಬಹುದು. ಇಂತಹ ತೀವ್ರ ಸ್ಥಿತಿಗಳಲ್ಲೂ ಪ್ರಾಣಿಗಳು ತಮ್ಮ ಬದುಕು ಸಾಗಿಸುವುದು ಸೋಜಿಗವೇ ಸರಿ. ಅಂತಹ ಜೀವಿಗಳಲ್ಲಿ ಹಿಮಕರಡಿಯೂ ಸಹ ಒಂದಾಗಿದೆ. ಸುಮಾರು 30 ವರ್ಷಗಳ ಕಾಲ ಜೀವಿಸುವ ಹಿಮಕರಡಿಯು ಅತ್ಯುತ್ತಮವಾಗಿ ಈಜಬಲ್ಲದು ಹಾಗೂ ದೂರದಲ್ಲಿರುವ ತನ್ನ ಬೇಟೆಯನ್ನು ವಾಸನೆಯ ಮೂಲಕ ಗ್ರಹಿಸಬಲ್ಲದು. ಇವುಗಳ ಮೈ ಮೇಲಿನ ದಟ್ಟ ಕೂದಲು ಹಾಗೂ ದಪ್ಪ ಚರ್ಮ ಜೊತೆಗೆ ದೇಹದಲ್ಲಿರುವ ಕೊಬ್ಬಿನ ಪದರವು ಈ ಜೀವಿಗಳನ್ನು ಎಂತಹ ಚಳಿ ಬಂದರು ರಕ್ಷಿಸುತ್ತವೆ. ಈ ಜೀವಿಯ ಸಂಖ್ಯೆ ಕ್ಷೀಣಿಸುತ್ತಿರುವುದು ಶೋಚನೀಯ. ಹಿಮಕರಡಿಯು U.S. ಅಳಿವಿನಂಚಿನಲ್ಲಿರುವ ಜೀವಿಗಳ ಕಾಯಿದೆಯಡಿಯಲ್ಲಿ (U.S. Endangered Species Act) ಪಟ್ಟಿ ಮಾಡಲಾದ ಮೊದಲ ಕಶೇರುಕ ಪ್ರಾಣಿಯಾಗಿದೆ. ಪ್ರತಿ ವರ್ಷ ಫೆಬ್ರವರಿ 27 ರಂದು “ವಿಶ್ವ ಹಿಮ ಕರಡಿಯ ದಿನ” ವೆಂದು ಆಚರಿಸಲಾಗುತ್ತದೆ. ಹಿಮಕರಡಿ ಹಾಗೂ ಅದರಂತೆ ಚಳಿಗೆ ತಮ್ಮ ದೇಹವನ್ನು ಮಾರ್ಪಡಿಸಿಕೊಳ್ಳುವ ಪ್ರಾಣಿಗಳ ಬಗ್ಗೆ ನೀವು ಕಾನನಕ್ಕೆ ಬರೆಯಬಹುದು.

ಈ ರೀತಿಯ ಪರಿಸರದ ಬಗೆಗಿನ ಮಾಹಿತಿಯನ್ನು ಒದಗಿಸಲು ಇರುವ ಕಾನನ ಇ-ಮಾಸಿಕಕ್ಕೆ ಮುಂದಿನ ತಿಂಗಳ ಪ್ರತಿಗೆ ಲೇಖನಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಪರಿಸರಕ್ಕೆ ಸಂಬಂಧಿಸಿದ ಕಥೆ, ಕವನ, ಛಾಯಾಚಿತ್ರ, ಚಿತ್ರಕಲೆ, ಪ್ರವಾಸ ಕಥನಗಳನ್ನು ಕಾನನ ಮಾಸಿಕದ ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು.

ಕಾನನ ಪತ್ರಿಕೆಯ ಇ-ಮೇಲ್ ವಿಳಾಸ: [email protected]
ಅಂಚೆ ವಿಳಾಸ:
Study House,
ಕಾಳೇಶ್ವರಿ ಗ್ರಾಮ,
ಆನೇಕಲ್ ತಾಲ್ಲೂಕು,
ಬೆಂಗಳೂರು ನಗರ ಜಿಲ್ಲೆ,
ಪಿನ್ ಕೋಡ್ :560083. ಗೆ ಕಳಿಸಿಕೊಡಬಹುದು.

Print Friendly, PDF & Email
Spread the love
error: Content is protected.