ನೀವೂ ಕಾನನಕ್ಕೆ ಬರೆಯಬಹುದು

      

ನದಿಗಳು, ಕುಡಿಯುವ ನೀರು, ವ್ಯವಸಾಯಕ್ಕೆ ಯೋಗ್ಯವಾದ ಫಲವತ್ತಾದ ಭೂಮಿಯನ್ನು, ತಿನ್ನಲು ಮೀನನ್ನು ಒದಗಿಸುವ ಕಾರಣ ಅಲೆಮಾರಿಯಾಗಿದ್ದ ಮಾನವ ನದಿಯ ದಂಡೆಗಳಲ್ಲಿ ನೆಲೆಯೂರಲು ಶುರುಮಾಡಿದ. ಮೊದಲು ಕೇವಲ ಬೆರಳೆಣಿಕೆಯಷ್ಟಿದ್ದ ಜನಸಂಖ್ಯೆ ಕಾಲಕಳೆದಂತೆ ಮಿತಿ ಮೀರಿ ಬೆಳೆಯಿತು. ನದಿಯ ದಡದಲ್ಲಿದ್ದ ಚಿಕ್ಕ ಚಿಕ್ಕ ಊರುಗಳು ನಗರಗಳಾದವು, ಜನಸಂಖ್ಯೆ ಹೆಚ್ಚಿದಂತೆ ಕುಡಿಯಲು ಯೋಗ್ಯವಾಗಿದ್ದ ನದಿಯ ನೀರು, ಬಳಕೆಗೂ ನಿಲುಕದಂತೆ ಕಲ್ಮಶವಾಯಿತು. ಇನ್ನು ನಗರದಲ್ಲಿನ ಚರಂಡಿ ನೀರನ್ನು, ಕಾರ್ಖಾನೆಗಳ ತ್ಯಾಜ್ಯಗಳನ್ನು, ಕೆಲವೊಮ್ಮೆ ಹೆಣಗಳನ್ನು ನದಿಗೆ ಎಸೆಯುವ ಕಾರಣ ವ್ಯವಸಾಯಕ್ಕೂ ನದಿಯ ನೀರನ್ನು ಅವಲಂಬಿಸುವುದು ಕಷ್ಟಕರವಾಗುತ್ತಿದೆ. ಹೀಗೆಯೇ ಮುಂದುವರಿದರೆ ನೀರಿಗಾಗಿಯೇ ಯುದ್ಧಗಳು ಆಗುವ ದಿನಗಳು ದೂರವಿಲ್ಲ. ಹಾಗಾಗಿ ನದಿಯ ಮಾಲಿನ್ಯವನ್ನು ತಪ್ಪಿಸಲು, ಸಾಮಾನ್ಯ ಜನರಲ್ಲಿ ನದಿಗಳ ಬಗೆಗಿನ ಅರಿವು ಮೂಡಿಸಲು ಪ್ರತಿ ವರ್ಷ ಸೆಪ್ಟೆಂಬರ್ ನಾಲ್ಕನೇ ಭಾನುವಾರ ವಿಶ್ವ ನದಿಗಳ ದಿನವನ್ನು ಆಚರಿಸಲಾಗುತ್ತದೆ.

ಈ ರೀತಿಯ ಪರಿಸರದ ಬಗೆಗಿನ ಮಾಹಿತಿಯನ್ನು ಒದಗಿಸಲು ಇರುವ ಕಾನನ ಇ-ಮಾಸಿಕಕ್ಕೆ ಮುಂದಿನ ತಿಂಗಳ ಪ್ರತಿಗೆ ಲೇಖನಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಪರಿಸರಕ್ಕೆ ಸಂಬಂಧಿಸಿದ ಕಥೆ, ಕವನ, ಛಾಯಾಚಿತ್ರ, ಚಿತ್ರಕಲೆ, ಪ್ರವಾಸ ಕಥನಗಳನ್ನು ಕಾನನ ಮಾಸಿಕದ ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು.

ಕಾನನ ಪತ್ರಿಕೆಯ ಇ-ಮೇಲ್ ವಿಳಾಸ: [email protected]
ಅಂಚೆ ವಿಳಾಸ:
Study House,
ಕಾಳೇಶ್ವರಿ ಗ್ರಾಮ,
ಆನೇಕಲ್ ತಾಲ್ಲೂಕು,
ಬೆಂಗಳೂರು ನಗರ ಜಿಲ್ಲೆ,
ಪಿನ್ ಕೋಡ್ :560083. ಗೆ ಕಳಿಸಿಕೊಡಬಹುದು.

Print Friendly, PDF & Email
Spread the love
error: Content is protected.