ನೀವೂ ಕಾನನಕ್ಕೆ ಬರೆಯಬಹುದು

      

ಇರುವುದೊಂದೇ ಭೂಮಿ. ಇದರ ನಾಶ ನಮ್ಮೆಲ್ಲರ ನಾಶ. ಇದು ತಿಳಿದರೂ ನಾವು ಈ ವಿಷಯವನ್ನು ನಿರ್ಲಕ್ಷಿಸುತ್ತಿದ್ದೇವೆ, ಹಾಗೂ ನಾವೇ ನಮ್ಮ ಕೊನೆಯನ್ನು ತಂದುಕೊಳ್ಳುವುದರಲ್ಲಿ ಆತುರಮಾಡುತ್ತಿದ್ದೇವೆ. ನಮ್ಮ ಸುತ್ತಮುತ್ತ ಪರಿಸರದಲ್ಲಿ ಆಗುತ್ತಿರುವ ಆಗು ಹೋಗುಗಳನ್ನು ಗಮನಿಸಿದರೆ ಪ್ರಕೃತಿಯು ನಮಗೆ ಇದರ ಬಗ್ಗೆ ಮುನ್ಸೂಚನೆಯನ್ನು ಕೊಡುತ್ತಿದೆ ಎನಿಸುತ್ತಿದೆ. ಕಳೆದ ಮೇ ತಿಂಗಳಿನಲ್ಲಿ ತೌಕ್ಟೇ ಚಂಡಮಾರುತದಿಂದ ಭಾರತದಲ್ಲಿ 169 ಜನ ಸಾವನ್ನಪ್ಪಿದರು ಹಾಗೂ 89 ಜನ ಕಣ್ಮರೆಯಾಗಿದ್ದರು. ಭಾರತದ ಪಶ್ಚಿಮ ಕರಾವಳಿಗಳಲ್ಲಿ ಜನರು ಮೂಲಸೌಕರ್ಯವನ್ನು ಮತ್ತು ಬೆಳೆದ ಬೆಳೆಗಳನ್ನು ಕೂಡ ಹಾನಿ ಮಾಡಿತು. ಇದು ಮುಂದೆ ನಡೆಯಬಹುದಾದ ಅನಾಹುತಗಳಿಗೆ ಪ್ರಕೃತಿಯು ನೀಡಿತ್ತಿರುವ ಮುನ್ಸೂಚನೆಯಾಗಿರಬಹುದು!!!. ಮಿಡತೆ ದಾಳಿ, ಭೂಕಂಪ, ಪ್ರವಾಹ, ಭೂಕುಸಿತ, ಕೋರೋನ ವೈರಸ್ ಮತ್ತು ಕಪ್ಪು ಶಿಲೀಂಧ್ರ, ಮುಂತಾದ ಪರಿಸರ ವೈಪರೀತ್ಯಗಳು ಹಾಗೂ ಖಾಯಿಲೆಗಳು ಮನು ಕುಲವನ್ನು ಕೆಲವು ವರ್ಷಗಳಿಂದ ಬಹಳಷ್ಟು ಕಾಡಿವೆ. ಇದು ನಾವು ಪರಿಸರಕ್ಕೆ ಮಾಡಿರುವ ದೌರ್ಜನ್ಯದ ಫಲಿತಾಂಶವೇ. ಇದು ಬಡಗಿಯೊಬ್ಬ ತಾನು ಕೂತ ಕೊಂಬೆಯನ್ನು ತಾನೆ ಕಡೆದಂತೆ ಆಗಿದೆ. ಆದ್ದರಿಂದ ನಮ್ಮ ಪರಿಸರವನ್ನು ನಾವೇ ಕಾಪಾಡಿಕೊಳ್ಳಬೇಕು. ಈ ರೀತಿಯ ಪರಿಸರ ಸಂರಕ್ಷಣೆಯ ವಿಷಯಗಳನ್ನು ಎಲ್ಲರಲ್ಲೂ ಬಿತ್ತಬೇಕು ಎನ್ನುವ ಆಶಯದಿಂದ ಪ್ರಕೃತಿಗೆ ಸಂಬಂಧಿಸಿದ ವಿಶೇಷ ದಿನಗಳನ್ನು ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ. ಎಲ್ಲರೂ ಪರಿಸರ ಸ್ನೇಹಿ ಜೀವನ ರೂಢಿಮಾಡಿಕೊಳ್ಳುವ ಮೂಲಕ ನಮ್ಮ ಸುತ್ತಮುತ್ತಲಿನ ಪರಿಸರವನ್ನು, ಸಹ ಜೀವಿಗಳು ತೊಂದರೆ ಇಲ್ಲದೆ ಬಾಳುವಂತೆ ನೋಡಿಕೊಳ್ಳೋಣ.

ಈ ರೀತಿಯ ಪರಿಸರದ ಬಗೆಗಿನ ಮಾಹಿತಿಯನ್ನು ಒದಗಿಸಲು ಇರುವ ಕಾನನ ಇ-ಮಾಸಿಕಕ್ಕೆ ಮುಂದಿನ ತಿಂಗಳ ಪ್ರತಿಗೆ ಲೇಖನಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಪರಿಸರಕ್ಕೆ ಸಂಬಂಧಿಸಿದ ಕಥೆ, ಕವನ, ಛಾಯಾಚಿತ್ರ, ಚಿತ್ರಕಲೆ, ಪ್ರವಾಸ ಕಥನಗಳನ್ನು ಕಾನನ ಮಾಸಿಕದ ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು.

ಕಾನನ ಪತ್ರಿಕೆಯ ಇ-ಮೇಲ್ ವಿಳಾಸ: [email protected]
ಅಂಚೆ ವಿಳಾಸ:
Study House,
ಕಾಳೇಶ್ವರಿ ಗ್ರಾಮ,
ಆನೇಕಲ್ ತಾಲ್ಲೂಕು,
ಬೆಂಗಳೂರು ನಗರ ಜಿಲ್ಲೆ,
ಪಿನ್ ಕೋಡ್ :560083. ಗೆ ಕಳಿಸಿಕೊಡಬಹುದು.

Print Friendly, PDF & Email
Spread the love
error: Content is protected.