ನೀವೂ ಕಾನನಕ್ಕೆ ಬರೆಯಬಹುದು

      

ಜೀವಿಗಳ ಉಗಮಕ್ಕೆ ಕಾರಣವಾದ ಕುತೂಹಲಕಾರಿ ಅಂಶಗಳಲ್ಲಿ ಪಂಚಭೂತಗಳೆಂದು ಕರೆಯಲ್ಪಡುವ ಭೂಮಿ, ಆಕಾಶ, ಗಾಳಿ, ನೀರು ಮತ್ತು ಬೆಂಕಿ ಮುಖ್ಯ ಘಟಕಗಳಾಗಿವೆ. ಪ್ರತಿ ಜೀವಿಯೂ ಹುಟ್ಟಿನಿಂದ ಸಾಯುವವರೆಗೂ ತಮ್ಮ ಜೀವಿತಾವಧಿಯಲ್ಲಿ ಈ ಪಂಚಭೂತಗಳ ಮೇಲೆ ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಅವಲಂಬಿತವಾಗಿರುತ್ತವೆ.

ಪ್ರಾಣವಾಯು ಇಲ್ಲದೆ  ಶ್ವಾಸವಿಲ್ಲ, ಜಲವಿಲ್ಲದೆ ಜೀವನವಿಲ್ಲ, ನೆಲೆಯೂರಲು ಭೂಮಿ, ತಲೆಯ ಮೇಲೆ ಆಕಾಶ, ಹಾಗೆ ಬಳಕೆಗೆ ಬೆಂಕಿ ಇವೆಲ್ಲವೂ ಜೀವನದ ಅವಿಭಾಜ್ಯ ಅಂಗವಾಗಿದೆ. ಈ ಪರಿಸರ  ವ್ಯವಸ್ಥೆಯಲ್ಲಿ ಸೂಕ್ಷ್ಮಜೀವಿಗಳಿಂದ ಹಿಡಿದು ಅತಿದೊಡ್ಡ ಜೀವಿಗಳವರೆಗೂ ಪ್ರತಿಯೊಂದು ಜೀವಿಯೂ ತಮ್ಮದೇ ರೀತಿಯಲ್ಲಿ ವಿಭಿನ್ನವಾಗಿದ್ದು, ಆಹಾರಕ್ಕಾಗಿ ನೇರವಾಗಿಯೂ ಅಥವಾ ಯಾವುದಾದರೂ ರೂಪದಲ್ಲಿಯೂ ಸ್ವಪೋಷಕಗಳಾದ ಸಸ್ಯಗಳ ಮೇಲೆ ಅವಲಂಬಿತವಾಗಿವೆ. ಜೀವಿಗಳನ್ನು ಪೋಷಿಸುವ ಸಸ್ಯಗಳು ಬೆಳೆಯಲು ಅವಶ್ಯಕವಾದ ಮಣ್ಣು-ನೀರು, ಸೂರ್ಯನ ಬೆಳಕು, ಗಾಳಿ ಪ್ರತಿಯೊಂದು ಪ್ರಕೃತಿಯಲ್ಲಿ ಹೇರಳವಾಗಿವೆ. ತೇವಾಂಶದಿಂದ ಕೂಡಿದ ಭೂಮಿಯು ಶುದ್ಧ ನೀರು ನಿರ್ವಹಣೆ, ನೀರು ಸರಬರಾಜು, ಮಣ್ಣಿನ ಸವೆತ ತಡೆಯುವುದು, ಇಂಗಾಲ ಸಂಗ್ರಹ ಹೀಗೆ ಅನೇಕ ರೀತಿಯಲ್ಲಿ ಪರಿಸರಕ್ಕೆ ಕೊಡೊಗೆ ನೀಡುತ್ತಿದೆ. ಇಂತಹ ತೇವ ಭೂಮಿಗಳ ಸಂರಕ್ಷಣೆ ಮತ್ತು ಸಮರ್ಪಕ ಬಳಕೆಯ ಬಗ್ಗೆ ಜಾಗೃತಿ ಮೂಡಿಸಲು ಫೆಬ್ರುವರಿ 2 ನ್ನು ವಿಶ್ವ ಜೌಗು ಭೂ ದಿನವನ್ನಾಗಿ ಆಚರಿಸಲಾಗುತ್ತದೆ.

ಈ ರೀತಿಯ ಪರಿಸರದ ಬಗೆಗಿನ ಮಾಹಿತಿಯನ್ನು ಒದಗಿಸಲು ಇರುವ ಕಾನನ ಇ-ಮಾಸಿಕಕ್ಕೆ ಮುಂದಿನ ತಿಂಗಳ ಪ್ರತಿಗೆ ಲೇಖನಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಪರಿಸರಕ್ಕೆ ಸಂಬಂಧಿಸಿದ ಕಥೆ, ಕವನ, ಛಾಯಾಚಿತ್ರ, ಚಿತ್ರಕಲೆ, ಪ್ರವಾಸ ಕಥನಗಳನ್ನು ಕಾನನ ಮಾಸಿಕದ ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು.

ಕಾನನ ಪತ್ರಿಕೆಯ ಇ-ಮೇಲ್ ವಿಳಾಸ: [email protected]
ಅಂಚೆ ವಿಳಾಸ:
Study House,
ಕಾಳೇಶ್ವರಿ ಗ್ರಾಮ,
ಆನೇಕಲ್ ತಾಲ್ಲೂಕು,
ಬೆಂಗಳೂರು ನಗರ ಜಿಲ್ಲೆ,
ಪಿನ್ ಕೋಡ್ :560083. ಗೆ ಕಳಿಸಿಕೊಡಬಹುದು.

Print Friendly, PDF & Email
Spread the love
error: Content is protected.