ಪ್ರಕೃತಿ ಬಿಂಬ

ಪ್ರಕೃತಿ ಬಿಂಬ

ಜಾವದ ರೈನೋ

ಮಲೇಷಿಯಾದ ವನ್ಯಜೀವಿ ಪಟ್ಟಿಯ ನೂತನ ಪ್ರಕಟಣೆಯಲ್ಲಿ ಜಾವದ ರೈನೋ ನಶಿಸಿ ಹೋಗಿದೆ ಎಂದು ದೃಢಪಟ್ಟಿದೆ. ವೇಗವಾಗಿ ನಾಶವಾಗುತ್ತಿರುವ ಆವಾಸ, ಕುಗ್ಗಿದ ಸಂಚರಿಸುವ ಜಾಗ, ಅಂಕೆಯಿಲ್ಲದ ಕಳ್ಳಬೇಟೆ, ರಸ್ತೆ ಅಪಘಾತಗಳು ಇವೇ ಮೊದಲಾದ ಕಾರಣದಿಂದ ಈ ಸುಂದರ ಜೀವಿ ಭೂಮಿ ಮೇಲಿಂದ ನಿರ್ನಾಮವಾಗಿದೆ. ಸದ್ಯದಲ್ಲೇ ಈ ರೈನೋವನ್ನು ಅವಲಂಭಿಸಿದ್ದ ಅಸಂಖ್ಯ ಜೀವಿಗಳು ಸಹ ಅವನತಿಯ ಹಾದಿ ಹಿಡಿಯುವ ಸಂಭವವಿದೆ.

Asiatic cheetah

ಭಾರತೀಯ ಚೀತಾ

ಹಿಂದೆ ಭಾರತವು ಚೀತಾಗಳ ತವರಾಗಿತ್ತು. ಅವು ಇಸ್ರೇಲ್, ಇರಾನ್, ಆಪ್ಘಾನಿಸ್ಥಾನ್ ಮತ್ತು ಭಾರತದ ಉದ್ದಗಲಕ್ಕೂ ಸಂಚರಿಸುತ್ತಿದ್ದವು. ಇವುಗಳ ಆವಾಸ ದಕ್ಷಿಣ ಭಾರತದ ತಮಿಳುನಾಡಿನ ತಿರುವನಮಲೈ ಜಿಲ್ಲೆಯವರಿಗೂ ಹಬ್ಬಿತ್ತು. ಆದರೆ, ಕಾಲನಂತರದಲ್ಲಿ ಬಂದ ಬ್ರಿಟಿಷ್ ಅಧಿಕಾರಿಗಳ ಹಾಗು ದೇಶೀ ರಾಜರುಗಳ ಬೇಟೆಯ ತೆವಲಿಗೆ ನಿರ್ವಂಶವಾಗಿ ಹೋದವು. ಭಾರತದಲ್ಲಿ ಕೊನೆಯ ಚೀತಾ ಕಾಣಿಸಿಕೊಂಡಿದ್ದು 1951 ರಲ್ಲಿ ಚತ್ತಿಸ್ ಗಢದಲ್ಲಿ.

ಬಿಳಿ ಬೆನ್ನಿನ ರಣಹದ್ದು

1990 ರಲ್ಲಿ ಇವು ಭಾರತದ ಉದ್ದಗಲಕ್ಕೂ ಸಾವಿರಾರು ಸಂಖ್ಯೆಯಲ್ಲಿ ಕಾಣಸಿಗುತ್ತಿದ್ದವು. ಆದರೆ ಇಂದು ಇವು ಅವನತಿಯ ಅಂಚಿನಲ್ಲಿವೆ. ಇವುಗಳ ಸಂಖ್ಯೆ ಆಘಾತಕಾರಿ ಕುಸಿತದ ಹಿಂದೆ ಮಾನವನ ಕರಾಳ ನೆರಳಿದೆ.  ಜಾನುವಾರುಗಳಿಗೆ ರೋಗ ಬಂದಾಗ ಬಳಸುವ ಡೈಕ್ಲೊಫ಼ಿನಾಕ್ ಔಷಧವೇ ಇವುಗಳಿಗೆ  ವಿಷವಾಗಿ ಪರಿಣಮಿಸಿದೆ.  ಸತ್ತ ಪ್ರಾಣಿಗಳನ್ನು ತಿಂದ ರಣಹದ್ದುಗಳಿಗೆ ಕಿಡ್ನಿ ಸಮಸ್ಯೆ ಉಂಟಾಗಿ ಸಾವಿಗಿಡಾಗುತ್ತಿವೆ. ಸದ್ಯ ಇವುಗಳ ಸ್ಥಿತಿ ಚಿಂತಾಜನಕವಾಗಿದೆ. ಮಾನವರಾದ ನಾವು ಈಗ ಸರಿಯಾದ ಕ್ರಮಗಳನ್ನು ಕೈಗೊಳ್ಳದಿದ್ದರೆ ಭೂಮಿಯ ಮೇಲಿಂದ ಬಿಳಿ ಬೆನ್ನಿನ ರಣಹದ್ದು ಕೂಡ ಸದ್ಯದಲ್ಲೇ  ನಿರ್ನಾಮವಾಗಲಿದೆ.

ದೊಡ್ಡ ಚುಕ್ಕೆಯ ಮಲಬಾರ್ ಕಾಡುಬೆಕ್ಕು

ಇದು ಸಹ ಅವನತಿಯ ಅಂಚಿನಲ್ಲಿರುವ ಹಾಗು ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಾಣಸಿಗುವ ಅಪರೂಪದ ಜೀವಿ. 1978 ರಲ್ಲಿ ಇದನ್ನು ಅವನತಿ ಹೊಂದಿದೆ ಎಂದು ಘೋಷಿಸಿದ್ದರು. ಇದಾದ ಒಂಬತ್ತು ವರ್ಷಕ್ಕೆ ಮತ್ತೆ ಕಂಡರು. ಈಗ ಅವುಗಳ ಸಂಖ್ಯೆ 250 ಇರಬಹುದು. ಕಳೆದ ಹತ್ತು ವರ್ಷದಿಂದ ಇವುಗಳು ಕಾಣಿಸಿಕೊಂಡ ಬಗ್ಗೆ ಯಾವುದೇ ಫೋಟೋ ಆಗಲೀ, ಮಾಹಿತಿಯಾಗಲಿ ಪ್ರಕಟಗೊಂಡಿಲ್ಲ. ನಮಗೆ ತಿಳಿಯದ ಹಾಗೇ ಇನ್ನೊಂದು ಸುಂದರ ಜೀವಿಯನ್ನು ಕಳೆದುಕೊಂಡು ಬಿಟ್ಟೆವಾ!?

ಮೂಲ ವಿವರಣೆ: ವಿಪಿನ್ ಬಾಳಿಗ
ಅನುವಾದ: ಶಂಕರಪ್ಪ .ಕೆ .ಪಿ

Print Friendly, PDF & Email
Spread the love
error: Content is protected.