ಕಾನನ ಕುರಿತು

ಕನ್ನಡದ ಏಕೈಕ ವನ್ಯವಿಜ್ಞಾನ ಕುರಿತ ಇ-ಮಾಸ ಪತ್ರಿಕೆ ಕಾನನ. ಪರಿಸರ, ಕಾಡು, ವನ್ಯಜೀವಿಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ 2011 ರ ಜನವರಿಯಿಂದ ಈ ಕಾನನ ಮಾಸಪತ್ರಿಕೆಯನ್ನು ಹೊರತರಲಾಯಿತು. ಕೆಲ
ಸಂಘ-ಸಂಸ್ಥೆಗಳ ಸಹಾಯದಿಂದ ಸ್ವಲ್ಪ ದಿನಗಳು ಕಾನನದ ಮುದ್ರಣ ಪ್ರತಿಗಳನ್ನು ಬನ್ನೇರುಘಟ್ಟ ರಾಷ್ಟ್ರೀಯ
ಉದ್ಯಾನವನ ಮತ್ತು ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಸುತ್ತಲಿನ ಕೆಲ ಶಾಲಾ ಮಕ್ಕಳಿಗೆ ಉಚಿತವಾಗಿ
ವಿತರಿಸಲಾಯಿತು. ಮುದ್ರಣ ಪ್ರತಿಯು ಸದ್ಯಕೆ ಧನ ಸಹಾಯ ಇಲ್ಲದೆ ನಿಂತಿದೆ, ಅಂತರ್ಜಾಲದ
ಮೂಖಾಂತರ ನಾಡಿನ ಜನತೆಗೆ ತಲುಪುತ್ತಿದೆ. ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ನೆಲೆಸಿರುವ ಕೆಲ ಕನ್ನಡಿಗರಿಗೂ ಸಹ ತಲುಪುತ್ತಿದೆ. 

ಕಾನನದ ಮುಂದಿನ ಕೆಲ ಗುರಿಗಳೆಂದರೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಮತ್ತು ಬಂಡೀಪುರ
ಅಭಯಾರಣ್ಯ ಕಾಡುಗಳ ಒಂದು ಕಿ.ಮೀ ಪ್ರದೇಶದಲ್ಲಿನ ಎಲ್ಲಾ ಶಾಲೆಗಳಿಗೆ ಕಾನನ ಮುದ್ರಣ ಪ್ರತಿಯನ್ನು
ತಲುಪಿಸುವುದು. ನಮ್ಮ ಸುತ್ತಮುತ್ತಲಿನ ಪರಿಸರದ ಬಗ್ಗೆ ಕಾಳಜಿ ಮತ್ತು ಅರಿವು ಮೂಡಿಸುವುದು. ಪರಿಸರ
ಆಸಕ್ತಿಯುಳ್ಳ ಯುವಕರಿಗೆ ಪರಿಸರಕ್ಕೆ ಸಂಬಂಧಪಟ್ಟ ಅವರ ಛಾಯಾಚಿತ್ರಗಳನ್ನು, ಲೇಖನಗಳನ್ನು ಪ್ರಕಟಿಸಲು ವೇದಿಕೆ ಕಲ್ಪಿಸಿಕೊಡುವುದು ಮತ್ತು ಪರಿಸರಕ್ಕೆ ಸಂಬಂಧಿಸಿದ ವನ್ಯವಿಜ್ಞಾನಿಗಳ ಹೊಸ ಆವಿಷ್ಕಾರಗಳನ್ನು ಕರುನಾಡ ಜನತೆಗೆ ಕನ್ನಡದಲ್ಲಿ ತಿಳಿಸಲು ಯತ್ನಿಸುವುದು.


ಈ ನಿಮ್ಮ ಕಾನನ ಪತ್ರಿಕೆಗೆ ನೀವೂ ಬರೆಯಬಹುದು…

ಜೀವ ವೈವಿಧ್ಯತೆ, ಕಾಡು, ಕಾಡಿನ ಕತೆಗಳು, ಜೀವವಿಜ್ಞಾನ, ವನ್ಯವಿಜ್ಞಾನ, ಕೀಟಲೋಕ, ಕೃಷಿ, ವನ್ಯಜೀವಿ
ಛಾಯಚಿತ್ರಗಳು, ಕವನ (ಪರಿಸರಕ್ಕೆ ಸಂಬಂಧಿಸಿದ), ವರ್ಣಚಿತ್ರಗಳು, ಪ್ರವಾಸ ಕತೆಗಳು ಮತ್ತು ಪರಿಸರಕ್ಕೆ ಸಂಬಂಧ ಪಟ್ಟ ಎಲ್ಲಾ ಲೇಖನಗಳನ್ನು ಬರೆದು [email protected] ಗೆ ಕಳುಹಿಸಬಹುದು.

 

Spread the love
error: Content is protected.